Select Your Language

Notifications

webdunia
webdunia
webdunia
webdunia

ತಂದೆ-ತಾಯಿಯ ಖಾಸಗಿ ವಿಡಿಯೋವನ್ನೇ ಅಪ್ ಲೋಡ್ ಮಾಡಿದ ಬಾಲಕ

ತಂದೆ-ತಾಯಿಯ ಖಾಸಗಿ ವಿಡಿಯೋವನ್ನೇ ಅಪ್ ಲೋಡ್ ಮಾಡಿದ ಬಾಲಕ
ಬೆಂಗಳೂರು , ಶುಕ್ರವಾರ, 26 ಮೇ 2017 (12:41 IST)
ಬೆಂಗಳೂರು:ಮೇ-26:ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಸಿಕ್ಕರೆ ಅದರಲ್ಲಿಯೂ ಇಂಟರ್ ನೆಟ್, ಫೇಸ್ ಬುಕ್, ವಾಟ್ಸಪ್ ಗಳಲ್ಲಿ ತಲ್ಲೀನರಾಗಿದ್ದಾರೆ ಎಂದರೆ ತಂದೆ-ತಾಯಿಗಳು ಅಂತಹ ಮಕ್ಕಳ ಬಗ್ಗೆ ಸ್ವಲ್ಪ ಎಚ್ಚರ ವಹಿಸುವುದು ಮುಖ್ಯ. ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನನಾದ ಹದಿಹರೆಯದ ಬಾಲಕನೊಬ್ಬ ತನ್ನ-ತಂದೆ ತಾಯಿಗೇ ಎಂದಹ ಸಂಕಷ್ಟಕ್ಕೆ ಸಿಲುಕಿಸಿದ್ದಾನೆ ಎಂಬುದಕ್ಕೆ ಈ ಸ್ಟೋರಿ ಸಾಕ್ಷಿ.
 
ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದ 13 ವರ್ಷದ ಬೆಂಗಳೂರಿನ ಬಾಲಕನೊಬ್ಬ ದಿನದ 10 ಗಂಟೆಗೂ ಹೆಚ್ಚು ಕಾಲ ಫೇಸ್‌ಬುಕ್‌ , ವಾಟ್ಸಾಪ್‌ನಲ್ಲಿ ಮಗ್ನನಾಗಿರುತ್ತಿದ್ದ.  ಈತನಿಗೆ ಫೇಸ್‌ಬುಕ್‌ನಲ್ಲಿ ತೇಜಲ್‌ ಪಟೇಲ್‌ ಎಂಬ ಯುವಕ ಸ್ನೇಹಿತನಾಗಿದ್ದ. ಅಶ್ಲೀಲ ಸಂಭಾಷಣೆ, ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ತೇಜಲ್‌ ಮೊದಲು ಬಾಲಕನ ಅಶ್ಲೀಲ ಚಿತ್ರಗಳನ್ನು ಕಳುಹಿಸಲು ಹೇಳಿದ್ದಾನೆ. ಬಳಿಕ ಮನೆಯವರ ನಗ್ನ ಚಿತ್ರಗಳನ್ನು ಕಳುಹಿಸಲು ಹೇಳಿದ್ದ. ತೇಜಲ್ ಮಾತಿನ ಬಗ್ಗೆ ಹಿಂದೆ-ಮುಂದೆ ಯೋಚನೆ ಮಾಡದೇ ಬಾಲಕ ತನ್ನ ತಂದೆ-ತಾಯಿಯ ಖಾಸಗಿ ಕ್ಷಣದ ವಿಡಿಯೋವನ್ನೇ ಚಿತ್ರೀಕರಿಸಿ ಕಳುಹಿಸಿಬಿಟ್ಟಿದ್ದಾನೆ.
 
ವಿಡಿಯೋ ಸಿಕ್ಕಿದ ಕೂಡಲೇ ತೇಜಲ್‌ ಮನೆಯವರ ನಂಬರ್‌ ಪಡೆದು ಹೀಗೆ ವಿಡಿಯೋ ಸಿಕ್ಕಿದ್ದು 1 ಕೋಟಿ ರೂಪಾಯಿ ನೀಡಿ ,ಇಲ್ಲವಾದಲ್ಲಿ ವಿಡಿಯೋವನ್ನು ವೈರಲ್‌ ಆಗುವಂತೆ ಮಾಡುತ್ತೇನೆ ಎಂದು ಬ್ಲ್ಯಾಕ್‌ ಮೇಲ್‌ ಮಾಡಿದ್ದಾನೆ. 
 
ವಿಷಯ ಕೇಳಿ ದಂಗಾದ ದಂಪತಿಗಳು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

‘ವಾಜಪೇಯಿ ಸರ್ಕಾರ ಇದ್ದಿದ್ದರೆ 10 ವರ್ಷ ಮೊದಲೇ ಈ ಕೆಲಸವಾಗುತ್ತಿತ್ತು’