Webdunia - Bharat's app for daily news and videos

Install App

10 ಕೊರೋನಾ ಸೋಂಕು ಕೇಸ್ ಪತ್ತೆ 114 ಪಾಸಿಟಿವ್ ಕೇಸ್

Webdunia
ಸೋಮವಾರ, 18 ಮೇ 2020 (19:59 IST)
ಕೊರೊನಾ ವೈರಸ್ ನ 10 ಹೊಸ ಕೇಸ್ ಗಳು ಒಂದೇ ದಿನ ಪತ್ತೆಯಾಗುವ ಮೂಲಕ ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 114 ಕ್ಕೆ ಏರಿಕೆಯಾಗಿದೆ.

ಕಲಬುರಗಿ ಜಿಲ್ಲೆಗೆ ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದವರ ಪೈಕಿ ಮತ್ತೆ 5 ಜನರಲ್ಲಿ ಕೊರೋನಾ ಸೋಂಕು‌ ಪತ್ತೆಯಾಗಿದೆ.

ಇದರಿಂದ‌ ಸೋಮವಾರ ಒಟ್ಟಾರೆ 10 ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 114ಕ್ಕೆ ಏರಿದೆ.
ಮುಂಬೈ ಪ್ರವಾಸ ಹಿನ್ನೆಲೆಯ ಕಲಬುರಗಿ ತಾಲೂಕಿನ ಆಲಗೂಡ ಗ್ರಾಮದ 4 ವರ್ಷದ ಹೆಣ್ಣು‌ ಮಗು (ರೋಗಿ ಸಂಖ್ಯೆ-1242) ಮತ್ತು ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಸಂಗಾಪುರ ತಾಂಡಾ ಮೂಲದ 6 ವರ್ಷದ ಹೆಣ್ಣು‌ ಮಗು (ರೋಗಿ ಸಂಖ್ಯೆ-1243) ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

ಇನ್ನೂ ಪುಣೆ ಪ್ರವಾಸ ಹಿನ್ನೆಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಜಿಲ್ ವರ್ಶಾ ಗ್ರಾಮದ  4 ವರ್ಷದ ಗಂಡು ಮಗು (ರೋಗಿ ಸಂಖ್ಯೆ-1244), 5 ವರ್ಷದ ಹೆಣ್ಣು ಮಗು (ರೋಗಿ ಸಂಖ್ಯೆ-1245) ಹಾಗೂ 25 ವರ್ಷದ ಯುವತಿ (ರೋಗಿ ಸಂಖ್ಯೆ-1246) ಕೊರೋನಾ‌ ಸೋಂಕು ದೃಢವಾಗಿದೆ.

ಮುಂಬೈ ಮತ್ತು ಪುಣೆ ಪ್ರವಾಸ ಹಿನ್ನೆಲೆಯ ಎಲ್ಲಾ ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಸೆಂಟರ್‌ನಿಂದ ಕೋವಿಡ್-19 ಆಸ್ಪತ್ರೆಗೆ ಈಗಾಗಲೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ ಎಂಡು ಡಿ.ಸಿ. ಶರತ್‌ ಬಿ. ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments