Publish Date: Tue, 09 May 2023 (14:34 IST)
Updated Date: Tue, 09 May 2023 (13:36 IST)
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ಮತದಾನ ದಿನದಂದು ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಬಂದೋಬಸ್ತ್ ಗಾಗಿ 1.56 ಲಕ್ಷ ಪೊಲೀಸರ ನಿಯೋಜನೆ ಮಾಡಲಾಗಿದೆ.84119 ಸಾವಿರ ರಾಜ್ಯ ಪೊಲೀಸರ ನಿಯೋಜನೆ ಮಾಡಲಾಗಿದ್ದು,304 ಡಿವೈಎಸ್ ಪಿ, 991 ಇನ್ಸ್‌ಪೆಕ್ಟರ್, 20610 ಪಿಎಸ್ಐ ನಿಯೋಜನೆ ಮಾಡಲಾಗಿದೆ.ಹಾಗೂ ಹೊರರಾಜ್ಯದಿಂದ 8500 ಪೊಲೀಸರು, 650 ಸಿಎಪಿಎಫ್ ತುಕಡಿಗಳು ನಿಯೋಜನೆ ಮಾಡಲಾಗಿದೆ
ಒಟ್ಟು 1.56 ಲಕ್ಷ ಪೊಲೀಸರಿಂದ ಮತದಾನದಿಂದು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ರಾಜ್ಯದಲ್ಲಿ ಒಟ್ಟು 58, 282 ಮತಗಟ್ಟೆಗಳ ನಿರ್ಮಾಣ ಮಾಡಿದ್ದು11,617 ಸೂಕ್ಷ್ಮ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ.ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಎಪಿಎಫ್ ಹಾಗೂ ಪೊಲೀಸರಿಂದ ಭದ್ರತೆ ಕೈಗೊಂಡಿದ್ದು,2930 ಪೊಲೀಸ್ ಮೊಬೈಲ್ ಸೆಕ್ಟರ್ ಗಳ ಕಾರ್ಯಾಚರಣೆ ಮಾಡಲಾಗಿದೆ.ಒಂದು ಮೊಬೈಲ್ ಸೆಕ್ಟರ್ 20 ಮತಗಟ್ಟೆಗಳನ್ನು ಕವರ್ ಮಾಡಬೇಕು.ಮೊಬೈಲ್ ಸೆಕ್ಟರ್ ಗಳ ಮೇಲ್ವಿಚಾರಣೆಗೆ 749 ಸೂಪರ್ ವೈಸರ್ ಗಳು ನಿಯೋಜನೆ ಮಾಡಲಾಗಿದೆ.700 ಫೈಯಿಂಗ್ ಸ್ಕ್ವಾಡ್,
700 ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗಿದೆ.
ನೇರ ರಾಜ್ಯಗಳ ಹಿರಿಯ ಪೊಲೀಸರೊಂದಿಗೆ ಪೊಲೀಸರು ಸಭೆ ನಡೆಸಲಿದ್ದಾರೆ.ರಾಜ್ಯದ ಗಡಿಗಳಲ್ಲಿ ವಾಹನಗಳ ತಪಾಸಣೆ ಮಾಡಿ ಒಳ ಬಿಡಲು ಸೂಚನೆ ನೀಡಲಾಗಿದೆ.ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಕೇರಳ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ.ಬಿಎಎಸ್ ಎಫ್ 108, ಸಿಐಎಸ್ಎಫ್ 75, ಐಟಿಬಿಪಿ 70, ಆರ್ ಪಿಎಫ್-35, ಎಸ್ಎಸ್ ಬಿ 75 ಹಾಗೂ ರಾಜ್ಯದ 224 ಕೆಎಸ್ಆರ್ ಪಿ ತುಕಡಿಗಳು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ.