Select Your Language

Notifications

webdunia
webdunia
webdunia
webdunia

‘ರಾಹುಲ್ ಗಾಂಧಿ ಒಬ್ಬ ಬಚ್ಚಾ’

‘ರಾಹುಲ್ ಗಾಂಧಿ ಒಬ್ಬ ಬಚ್ಚಾ’
Bangalore , ಗುರುವಾರ, 6 ಜುಲೈ 2017 (12:08 IST)
ಬೆಂಗಳೂರು: ಪ್ರಧಾನಿ ಮೋದಿಯನ್ನು ದುರ್ಬಲ ಪ್ರಧಾನಿ ಎಂದು ಟ್ವಿಟರ್ ನಲ್ಲಿ ಟೀಕಿಸಿದ್ದ ರಾಹುಲ್ ಗಾಂಧಿ ಒಬ್ಬ ಬಚ್ಚಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.


ಅಮೆರಿಕಾ ಭೇಟಿಯ ಸಂದರ್ಭದಲ್ಲಿ ಅಲ್ಲಿನ  ಅಧ್ಯಕ್ಷರ ಜತೆ ಮಾತುಕತೆ ನಡೆಸಿ ಎಚ್1 ಬಿ ವೀಸಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಪ್ರಧಾನಿ ಮೋದಿ ಒಬ್ಬ ದುರ್ಬಲ ಪ್ರಧಾನಿ ಎಂದು ರಾಹುಲ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ರಾಹುಲ್ ಗಿಲ್ಲ ಎಂದಿದ್ದಾರೆ.

ಇದುವರೆಗೆ ಭಾರತದ ಯಾವುದೇ ಪ್ರಧಾನಿಯೂ ಹೋಗಲು ಧೈರ್ಯ ಮಾಡದ ಇಸ್ರೇಲ್ ಗೆ ಭೇಟಿ ಕೊಡುವ ಎದೆಗಾರಿಕೆ ತೋರಿದ ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುವ ಮೊದಲು ರಾಹುಲ್ ತಮ್ಮ ಪಕ್ಷದ ಹುಳುಕುಗಳನ್ನು ಸರಿಪಡಿಸಲಿ. ಮೋದಿಯವರ ಬಗ್ಗೆ ಮಾತನಾಡಲು ರಾಹುಲ್ ಗಾಂಧಿ ಇನ್ನೂ ಬಚ್ಚಾ ಎಂದು ಶೋಭಾ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟ ವಿಸ್ತರಣೆ ಮಾತ್ರ, ಪುನಾರಚನೆ ಇಲ್ಲ: ಸಿಎಂ