Publish Date: Mon, 11 Sep 2017 (10:30 IST)
Updated Date: Mon, 11 Sep 2017 (10:32 IST)
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ರಾಜ್ಯ ಸರ್ಕಾರವನ್ನು ದೂಷಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಗೆ ಸೂಕ್ತ ಭದ್ರತೆ ಒದಗಿಸದೇ ಇರುವುದಕ್ಕೆ ಅವರ ಹತ್ಯೆಯಾಗಿದೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದರು. ಆಕೆ ಯಾವತ್ತೂ ಭದ್ರತೆ ಬೇಕೆಂದು ಕೇಳಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
‘ಕೇಂದ್ರ ಸಚಿವರು ರಾಜ್ಯ ಸರ್ಕಾರಕ್ಕೆ ಗೌರಿಗೆ ಬೆದರಿಕೆ ಇತ್ತು ಎಂದು ಗೊತ್ತಿದ್ದೂ ಭದ್ರತೆ ಒದಗಿಸಿರಲಿಲ್ಲ ಎಂದು ಹೇಳಿದ್ದಾರೆ. ಇದು ಕೇಂದ್ರ ಸಚಿವರಾಗಿದ್ದುಕೊಂಡು ಅದರಲ್ಲೂ ಕಾನೂನು ಸಚಿವರಾಗಿದ್ದುಕೊಂಡು ಹೇಳಿರುವ ಬೇಜವಾಬ್ದಾರಿಯುತ ಹೇಳಿಕೆ’ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
‘ಯಾರಾದರೂ ಭದ್ರತೆ ಬೇಕೆಂದು ಕೇಳಿದಾಗ ಖಂಡಿತಾ ಕೊಡುತ್ತೇವೆ. ಇದರಲ್ಲಿ ಯಾರೂ ಹೊರತಲ್ಲ. ಆಕೆ ಯಾವತ್ತೂ ಕೇಳಿರಲಿಲ್ಲ.ಅದಕ್ಕೇ ಕೊಟ್ಟಿರಲಿಲ್ಲ’ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.