Select Your Language

Notifications

webdunia
webdunia
webdunia
webdunia

ರೌಡಿಗಳ ಮೇಲೆ ಸಿಸಿಬಿ ದಾಳಿ

ರೌಡಿಗಳ ಮೇಲೆ ಸಿಸಿಬಿ ದಾಳಿ
ಬೆಂಗಳೂರು , ಗುರುವಾರ, 27 ಸೆಪ್ಟಂಬರ್ 2018 (18:42 IST)
ರಾಜಧಾನಿಯಲ್ಲಿ ಅಕ್ರಮ ಹಾಗೂ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ರೌಡಿಗಳ ವಿಚಾರಣೆ ನಡೆಸಿದರು.

ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಕುಖ್ಯಾತ ರೌಡಿಗಳಾದ ಮುಲಾಮ, ಜೆಸಿಬಿ ನಾರಾಯಣ, ತನ್ವೀರ್, ಮಹಿಮಾ, ದಡಿಯಾ, ಮಹೇಶ್, ದೂದ್ ರವಿ, ರಾಬ್ರಿ ಗಿರಿ, ಕುಮ್ಮಿ ಸೇರಿದಂತೆ 50ಕ್ಕೂ ಹೆಚ್ಚು ರೌಡಿಗಳ ವಿಚಾರಣೆ ನಡೆಸಲಾಗಿದೆ.
ರೌಡಿಗಳ ಮನೆಮೇಲೆ ದಾಳಿ ನಡೆದ ಸಂದರ್ಭದಲ್ಲಿ ನಕಲಿ ಪಿಸ್ತೂಲ, ಚಾಕು, ನಕಲಿ ನೋಟುಗಳು ಸೇರಿದಂತೆ ಇತರ ವಸ್ತುಗಳು ಪತ್ತೆಯಾಗಿದ್ದು, ಅವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ರೌಡಿ ದಡಿಯಾ ಮಹೇಶ್ ಮನೆಯಲ್ಲಿ 6 ಕೋಬ್ರಾ ಸ್ಪ್ರೇ ಟಿನ್, ನಕಲಿ ಪಿಸ್ತೂಲ್ ಪತ್ತೆಯಾಗಿದೆ. ಈಚೆಗೆ ಶ್ರೀರಾಮ ಸಂಘಟನೆ ಸೇರಿರುವ ಆತನ ಪತ್ನಿ ರೌಡಿ ಯಶಸ್ವಿನಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಅಪರಾಧ ಪ್ರಕರಣ ಕಡಿಮೆ ಮಾಡಲು ಹಾಗೂ ಕೃತ್ಯಗಳಿಗೆ ಕಡಿವಾಣ ಹಾಕಲು ಸಿಸಿಬಿ ಅಧಿಕಾರಿಗಳ 11 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ವಿವಾದ: ಹೊರಬಿತ್ತು ಸುಪ್ರೀಂ ಕೋರ್ಟನ ಮಹತ್ವದ ತೀರ್ಪು