ಪತ್ನಿ ವಿಚಾರಣೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ಸಾಧ್ಯತೆ

Sampriya
ಶನಿವಾರ, 26 ಅಕ್ಟೋಬರ್ 2024 (15:14 IST)
ಮೈಸೂರು: ಮುಡಾ ಹಗರಣ ಸಂಬಂದ ಪತ್ನಿ ಪಾರ್ವತಿ ವಿಚಾರಣೆ ಎದುರಿಸಿದ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತರು ಸಮನ್ಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು  ತಿಳಿಸಿವೆ.

ಎ1 ಆರೋಪಿಯಾಗಿರುವ ಪಾರ್ವತಿ ಅವರನ್ನು ನಿನ್ನೆ ಮೂರು ಗಂಟೆಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇದೀಗ ಪಾರ್ವತಿ ಅವರ ಹೇಳಿಕೆ ಆಧಾರದ ಮೇಲೆ ಸಿದ್ಧರಾಮಯ್ಯ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಲಿದ್ದಾರೆ ಎನ್ನಲಾಗಿದೆ.

ಮೂರನೇ ಆರೋಪಿ ಸಿದ್ದರಾಮಯ್ಯನವರ ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾಲೀಕ ಜೆ.ದೇವರಾಜು ಅವರನ್ನು ಲೋಕಾಯುಕ್ತ ವಿಚಾರಣೆಗೊಳಪಡಿಸಿದೆ. ದೀಪಾವಳಿ ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ವಿಚಾರಣೆ ಒಳಪಡಿಸಲು ತನಿಖಾ ತಂಡ ಚಿಂತಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ಡಿಸೆಂಬರ್ 25ರೊಳಗೆ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪನ ನಂತ್ರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕ: ಡಿಕೆಶಿ ಕನಸಿಗೆ ಕೊಳ್ಳಿಯಿಟ್ಟ ಯತೀಂದ್ರ ಸಿದ್ದರಾಮಯ್ಯ

ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ ಮುಂದೆ ಡ್ಯಾನ್ಸ್ ಮಾಡೋದು ಯಾಕೆ: ಬಿಕೆ ಹರಿಪ್ರಸಾದ್ ವಿವಾದ

ರಾಯರಿದ್ದಾರೆ ಎಂದು ಮಂತ್ರಾಲಯದಲ್ಲಿ ಕೈ ಮುಗಿದ ಡಿಕೆ ಶಿವಕುಮಾರ್: ನೀವು ಸಿಎಂ ಆಗೇ ಆಗ್ತೀರಾ ಎಂದ ನೆಟ್ಟಿಗರು

ದಲಿತ ಸಂಘಟನೆಗಳಿಗೆ ನಂದೇ ಪ್ರಾಯೋಜಕತ್ವ ಏನಿವಾಗ ಎಂದ ಪ್ರಿಯಾಂಕ್ ಖರ್ಗೆ: ಇಲ್ಲಿದ್ರೆ ಸಸ್ಪೆಂಡ್ ಇಲ್ವಾ ಎಂದ ನೆಟ್ಟಿಗರು

Video: ದೀಪಾವಳಿ ಬೋನಸ್ ಬದಲು ಸೋನ್ ಪಾಪ್ಡಿ ಕೊಟ್ಟ ಬಾಸ್: ನೌಕರರು ಮಾಡಿದ್ದೇನು

ಮುಂದಿನ ಸುದ್ದಿ
Show comments