Select Your Language

Notifications

webdunia
webdunia
webdunia
webdunia

ಅಮೇರಿಕದಿಂದ ಧಾರವಾಡದಲ್ಲಿರೋ ಪತ್ನಿಗೆ ತಲಾಖ್

ಅಮೇರಿಕದಿಂದ ಧಾರವಾಡದಲ್ಲಿರೋ ಪತ್ನಿಗೆ ತಲಾಖ್
ಧಾರವಾಡ , ಗುರುವಾರ, 22 ಡಿಸೆಂಬರ್ 2016 (14:28 IST)
ದೇಶಾದ್ಯಂತ ತ್ರಿವಳಿ ತಲಾಖ್ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗ, ಪರವಿರೋಧ ವ್ಯಕ್ತವಾಗುತ್ತಿರುವಾಗ ಅಮೇರಿಕಾದಲ್ಲಿ ನೆಲಸಿರುವ ಧಾರವಾಡದ ಯುವಕನೋರ್ವ ಅಲ್ಲಿಂದಲೇ ತನ್ನ ಪತ್ನಿಗೆ ತಲಾಖ್ ನೀಡಿದ ಖಂಡನೀಯ ಘಟನೆ ವರದಿಯಾಗಿದೆ.

ಜಿಲ್ಲೆಯ ಕೊಪ್ಪದಕೆರೆ ನಿವಾಸಿ ಗುಲಜಾರ್ 2011ರಲ್ಲಿ ಮದರಾಮಡ್ಡಿ ಗ್ರಾಮದ ಮುಫ್ರಿನ್ ತಾಜ್ ಎಂಬ ಯುವತಿಯನ್ನು ಮದುವೆಯಾಗಿದ್ದರು. ವಿವಾಹವಾದ ಒಂದುವರೆ ವರ್ಷಗಳ ಬಳಿಕ ಗುಲಜಾರ್ ಅಮೇರಿಕಕ್ಕೆ ತೆರಳಿದ್ದು, ಕಳೆದ 3 ವರ್ಷಗಳಿಂದ ಅಲ್ಲಿಂದ ಹಿಂತಿರುಗಿಲ್ಲ. ಜತೆಗೆ ಇಲ್ಲಿಂದ ಹೋದ ಬಳಿಕ ಕೇವಲ ಮೂರು ಬಾರಿ ಪತ್ನಿಗೆ ಪೋನ್ ಕರೆ ಮಾಡಿದ್ದಾನೆ.
 
ಮತ್ತೀಗ ಅಲ್ಲಿಂದಲೇ ಆಕೆಗೆ ಇ-ಮೇಲ್ ಮೂಲಕ ತಲಾಖ್ ಹೇಳಿದ್ದಾನೆ. ತನ್ನ ಪತಿಯ ಈ ಅನ್ಯಾಯದ ನಡೆಯನ್ನು ಪ್ರಶ್ನಿಸಿ ಮುಫ್ರಿನ್ ತಾಜ್ ಕೋರ್ಟ್ ಮೆಟ್ಟಿಲೇರಿದ್ದು ತಲಾಖ್‌ನ್ನು ಅಸಿಂಧುಗೊಳಿಸುವಂತೆ ಕೇಳಿಕೊಂಡಿದ್ದರು.
 
ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದು ಕಷ್ಟ ಎಂದು ಆರೋಪಿ ಪರ ವಕೀಲರು ಹೇಳಿದ್ದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧೈರ್ಯ ಇಲ್ಲ: ವಿಶ್ವೇಶ ತೀರ್ಥ ಶ್ರೀ