Webdunia - Bharat's app for daily news and videos

Install App

ದೇವರೇ ಇದು...ಮದಿರೆಯ ಮಾಯೆ

Webdunia
ಶೇಂದಿಯ ಅಂಗಡಿಗೆ ಮಾಧವರಾವ್ ಪ್ರವೇಶವಾಯ್ತು!

'' ಅಣ್ಣಾ ನಮಸ್ಕಾರ! ದೇವರು ನಮಸ್ಕಾರ!" ಎನ್ನುತ್ತಾ ಅಲ್ಲಿ ಸೇರಿದ್ದ ಎಲ್ಲ ಕುಡುಕರು ಭಾರಿ ಮರ್ಯಾದೆ ನೀಡಿದರು. ಮಾಧವರಾವ್‌ ಸಿಲ್ಕ್ ಜುಬ್ಬಾ ಧರಿಸಿ ಜೇಬಿನಲ್ಲಿ ನೋಟಿನ ಕಂತೆಗಳನ್ನು ಇಟ್ಟುಕೊಂಡು ಬರುವುದರಿಂದಲೇ ಆತನಿಗೆ ಅಂತಹ ಗೌರವ.

ಮಾಧವರಾವ್‌ಗೆ ಹಿರಿಯರು ಸಂಪಾದಿಸಿಟ್ಟ ಆಸ್ತಿ ಕೊಳೆಯುತ್ತಿದೆ. ಶ್ರೀಮಂತಿಕೆ ಕುಣಿಯುತ್ತಿದೆ. ''ಅವರಿಗೆ ಬೇಗ ಶೇಂದಿ ಕೊಡು!" ಎಂದು ಅಂಗಡಿಯವನು ತನ್ನ ನೌಕರನನ್ನು ಗದರಿದನು.

'' ಧಣಿ ಇನ್ನೂ ಎರಡು ತಾಳೆ ಗಿಡಗಳ ಶೇಂದಿ ಬರಲಿಲ್ಲ ಕ್ಷಮಿಸಿ ಧಣಿ" ಎಂದ ಅಂಗಡಿಯವನು.

'' ಏನು ಶೇಂದಿ ಇನ್ನು ಬರಲಿಲ್ಲವಾ! ಸರಿ ಗಿಡದ ಹತ್ತಿರವೇ ಹೋಗಿ ಕುಡಿಯೋಣ ಬನ್ನಿ" ಎಂದು ಎಂದು ಅಲ್ಲಿ ನೆರೆದಿದ್ದ ಕುಡುಕರನ್ನು ಸೇರಿಸಿಕೊಂಡು ಹೊರಟರು ಮಾಧವರಾವ್.

ಹೇ ಕೇಳ್ರೋ! ನಿಜವಾಗಿ ಶೇಂದಿಯ ಮಜಾ ಅನುಭವಿಸಬೇಕೆಂದರೇ ಅದರ ಮರದಿಂದ ಇಳಿಯುತ್ತಲೇ ತಾಜಾತಾಜಾವಾಗಿ ಕುಡಿಯಬೇಕು. ಶೇಂದಿಯಲ್ಲಿ ಏಳು ಗುಣಗಳಿವೆ. ಅವುಗಳೆಲ್ಲಾ ಎಂತಹ ಸುಪ್ತ ಗುಣಗಳು. ಅದಕ್ಕಾಗಿ ತಪ್ಪದೆ ದಿನನಿತ್ಯ ಶೇಂದಿ ಕುಡಿಯಬೇಕು ಆ ಗುಣಗಳು ಯಾವವು ಎಂದು ನಿಮಗೆ ಗೊತ್ತಾ ಎಂದು ಕೇಳಿದರು ಮಾಧವರಾವ್ ತನ್ನ ಸಂಗಡಿಗರನ್ನು ಕೇಳಿದರು.

ಶೇಂದಿಯಲ್ಲಿ ಮಹತ್ವದ ಗುಣಗಳಿರುವುದರಿಂದಲೇ ಶೇಂದಿಯನ್ನು ನಾನು ತುಂಬಾ ಇಷ್ಟಪಟ್ಟು, ಹಾಯಾಗಿ ಎರಡು ಶೇಂದಿ ಕೊಡಗಳನ್ನು ಕುಡಿಯುತ್ತೇನೆ, ಮತ್ತು ಎಲ್ಲರಿಗೂ ಕುಡಿಸುತ್ತೇನೆ ಎಂದು ಮಾಧವರಾವ್ ಹೇಳುತ್ತಾ ಮಜಾಮಾಡುತ್ತಿದ್ದರು.

ಎರಡು ವರ್ಷಗಳ ನಿರಂತರ ಕುಡಿತದಿಂದಾಗಿ ಮಾಧವರಾವ್ ಆರೋಗ್ಯ, ಆರ್ಥಿಕ ಸ್ಥಿತಿ ಹದಗೆಟ್ಟು ಹೋಯಿತು. ಶೇಂದಿ ಕುಡಿಯಲು ಹಣವಿಲ್ಲದ ಪರಿಸ್ಥಿತಿ ಎದುರಾಯಿತು. ಕುಡಿದರೆ ನಡೆಯಲಾಗುವುದಿಲ್ಲ, ಕುಡಿಯದಿದ್ದರೂ ನಡೆಯಲಾಗುವುದಿಲ್ಲ! ಮಾಧವರಾವ್ ಪರಿಸ್ಥಿತಿ ಅಲ್ಲಿಗೆ ತಲುಪಿತು.

ದಾರಿಯಲ್ಲಿ ಹೋಗುವವರನ್ನು ಕಾಡಿ ಬೇಡಿ ಪಡೆದ ಹಣದಿಂದ ಶೇಂದಿ ಕುಡಿವ ಪರಿಸ್ಥಿತಿಗೆ ತಲುಪಿದ ಮಾಧವರಾವ್ ಈಗ ಬರೀ ಮಾಧವನಾದ. ದಿನನಿತ್ಯ ಶೇಂದಿಯ ನಶೆಯಲ್ಲೇ ನಾಶವಾಗುತ್ತಾ ಹೋದ.

ಕುಡಿದು ಕುಡಿದು ಆರೋಗ್ಯ ಕೆಟ್ಟಿತು. ಹಾಸಿಗೆ ಹಿಡಿದ. ಕೊನೆಗಾಲದಲ್ಲಿ ಬಂದ ಮಿತ್ರರನ್ನು ನೋಡಿ ಕ್ಷೀಣವಾಗಿ ಮಾತನಾಡಿದ. ಮಿತ್ರರೇ! ಶೇಂದಿ ಕುಡಿಯಬೇಡಿ. ಅದಕ್ಕೆ ಮೂರು ಅವಗುಣಗಳಿವೆ. ಒಂದು ನಮ್ಮ ಗೌರವವನ್ನು ಕೆಡಿಸುತ್ತಿದೆ. ಎರಡು ನಮ್ಮನ್ನು ಆರ್ಥಿಕವಾಗಿ ನಾಶವಾಗಿಸಿ ಬೀದಿ ಭಿಕಾರಿಯನ್ನಾಗಿ ಮಾಡುತ್ತದೆ. ಕೊನೆಯದಾಗಿ ನಮ್ಮ ಆರೋಗ್ಯವನ್ನು ಹದಗೆಡಿಸಿ ಮೃತ್ಯುವನ್ನು ತರುತ್ತದೆ ಎಂದು ಹೇಳಿ ಮರಣಹೊಂದಿದನು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments