Article Kannada Poetry %e0%b2%b6%e0%b3%8b%e0%b2%a7 107052000008_1.htm

Select Your Language

Notifications

webdunia
webdunia
webdunia
webdunia

ಶೋಧ

ಶೋಧ
ಸೃಷ್ಟಿಯ ಮೂಲ
ಅರಿಯ ಬಯಸಿ
ಸುತ್ತೆಲ್ಲ ಸುಳಿದು
ಜೀವನದ ತಳಕ್ಕೆ

ಇಳಿದು ಪರಡಿದೆ
ಅನಾಥ ಪ್ರಜ್ಞೆ
ತಲೆಯೆತ್ತಿ ಬೆದರಿಸಿದಾಗ
ಅಳಬೇಕು ಅನಿಸಿತು.

ನದೀ ಮೂಲ
ಋಷಿ ಮೂಲ
ಇನ್ನೂ ಏನೇನೊ ಮೂಲ
ಹುಡುಕಬಾರದಂತೆ

ಆದರೂ ಅಮವಾಸ್ಯೆಯ
ರಾತ್ರಿ ಕಪ್ಪು ಕತ್ತಲೆ
ಬೆಳಕ ಹುಡುಕುವ
ನನ್ನ ಯತ್ನ ವಿಫಲವಾದಾಗ
ಸೋತೆ ಅನಿಸಿತು.

- ಾ| ಶ್ರೀಕೃಷ್ಣ ಭಟ್ ಅರ್ತಿಕಜೆ

Share this Story:

Follow Webdunia kannada