Article Kannada Poetry %e0%b2%ac%e0%b3%87%e0%b2%b5%e0%b3%81 %e0%b2%ac%e0%b3%86%e0%b2%b2%e0%b3%8d%e0%b2%b2 %e0%b2%ad%e0%b2%be%e0%b2%97 1 107052000006_1.htm

Select Your Language

Notifications

webdunia
webdunia
webdunia
webdunia

ಬೇವು ಬೆಲ್ಲ - ಭಾಗ 1

ಬೇವು ಬೆಲ್ಲ - ಭಾಗ 1
ಅವನಿರುವಲ್ಲಿ ಇವನಿಲ್ಲ
ಇವನಿರುವಲ್ಲಿ ಅವನಿಲ್ಲ
ಇವರಿಬ್ಬರೂ ಒಂದೆಡೆ ಎಂದೂ ಇರುವುದಿಲ್ಲ
ಕತ್ತಲೆಯಿರುವಲ್ಲಿ ಬೆಳಕಿಲ್ಲ

ಬೆಳಕಿರುವಲ್ಲಿ ಕತ್ತಲೆಯಿಲ್ಲ
ಕತ್ತಲೆ ಬೆಳಕನು ಒಂದೆಡೆ ಕಂಡವರು ಇಲ್ಲ
ಆದರೂ ಮುಸ್ಸಂಜೆ ಪ್ರಾತಃ ಕಾಲಗಳಲ್ಲಿ
ಇವೆರಡು ಒಂದೆಡೆಯೆ ಒಂದುಗೂಡಿಹವಲ್ಲ

ಕರೆಯಿರುವಲ್ಲಿ ಕಳೆಯಿಲ್ಲ
ಕಳೆಯಿರುವಲ್ಲಿ ಕರೆಯಿಲ್ಲ
ಕರೆ ಕಳೆಯನೊಂದೆಡೆ ನೋಡಿದವರಿಲ್ಲ
ಆದರೂ ಹುಣ್ಣಿಮೆಯ ಪೂರ್ಣಚಂದ್ರನಲಿ

ಇವೆರಡು ಒಂದೆಡೆಯೆ ಬೆರೆತು ಇಹವಲ್ಲ
ನೋವಿರುವಲ್ಲಿ ನಲಿವಿಲ್ಲ
ನೋವು ನಲಿವುಗಳು ಎಂದಿಗೂ
ಒಂದೆ ಕಡೆ ಇರಲಾರವಲ್ಲ

ಕಷ್ಟವಿರುವೆಡೆ ಸುಖವಿಲ್ಲ
ಸುಖವಿರುವೆಡೆ ಕಷ್ಟವಿಲ್ಲ
ಕಷ್ಟಸುಖಗಳನೊಂದೆಡೆಯೆ ಕಂಡವರಿಲ್ಲ
ಆದರೆ ನಾವಿಬ್ಬರೂ ಒಂದೆಡೆ ಜೀವಿಸುತಲಿಹೆವಲ್ಲ

ಜ್ಞಾನವಿರುವಲ್ಲಿ ಅಜ್ಞಾನವಿಲ್ಲ
ಅಜ್ಞಾನವಿರುವಲ್ಲಿ ಸುಜ್ಞಾನವಿಲ್ಲ
ಜ್ಞಾನಾಜ್ಞಾನಗಳು ಒಂದೆಡೆ ಪರಸ್ಪರ ಒಂದೆಡೆ ಸೇರವಲ್ಲ

- ಾ| ಶ್ರೀಕೃಷ್ಣ ಭಟ್ ಅರ್ತಿಕಜೆ

Share this Story:

Follow Webdunia kannada