ಸುಮಾರು ವರ್ಷಗಳ ಹಿಂದೆ ಒಬ್ಬ ರಾಜನಿದ್ದ ಅವನಿಗೆ ಹೊಸ ಬಟ್ಟೆಗಳೆಂದರೆ ಪಂಚ ಪ್ರಾಣ. ಆತ ಹೊಸ ಬಟ್ಟೆಗಳಿಗಾಗಿ ಹೆಚ್ಚಿನ ಹಣವನ್ನು ವ್ಯಯಿಸುತ್ತಿದ್ದ. ಆತನು ದಿನದ ಪ್ರತಿ ಗಂಟೆ ಬಟ್ಟೆಗಳನ್ನು ಬದಲಾಯಿಸುತ್ತಿದ್ದ. ಮತ್ತು ಎಲ್ಲರಿಗೂ ಅದನ್ನು ತೋರಿಸುವ ಚಾಳಿ.
ಹೀಗೆ ಕೆಲವು ವರ್ಷ ಕಳೆದ ನಂತರ ಅವನ ಆಸ್ಥಾನಕ್ಕೆ ಇಬ್ಬರು ವ್ಯಕ್ತಿಗಳು ಬಂದರು. ಅವರು ತಮ್ಮನ್ನು ತಾವು ಬಟ್ಟೆ ನೇಯುವವರು ಎಂದು ರಾಜನಿಗೆ ಪರಿಚಯಿಸಿದರು. ಮತ್ತು ತಾವು ಒಂದು ಅದ್ಬುತ, ಸುಂದರ ಬಣ್ಣದ ಬಟ್ಟೆಯನ್ನು ಹೊಲಿದು ಕೊಡುತ್ತೇವೆ ಎಂದು ರಾಜನಿಗೆ ಹೇಳುತ್ತಾರೆ ಮತ್ತು ಈ ಬಟ್ಟೆ ಯಾರು ತಮ್ಮ ಆಸ್ತಾನದಲ್ಲಿ ಅಪ್ರಯೋಜಕರಾಗಿರುತ್ತಾರೋ ಅವರಿಗೆ ಇದು ಕಾಣಿಸುವುದಿಲ್ಲ. ಅಂತಹ ಅಮೋಘ ಶಕ್ತಿಯನ್ನು ಒಳಗೊಂಡಿದೆ ಎಂದು ಹೇಳುತ್ತಾರೆ.
ಇದನ್ನು ಕೇಳಿದ ರಾಜನಿಗೆ ಅಂತಹ ಅದ್ಬುತ ಬಟ್ಟೆಯನ್ನು ತಾನು ಹೊಂದುವ ಬಗ್ಗೆ ಇಚ್ಚಿಸುತ್ತಾನೆ ಮತ್ತು ಆ ಇಬ್ಬರು ನೇಯುವವರಿಗೆ ಆ ಬಟ್ಟೆಯನ್ನು ತಯಾರಿಸಲು ಹೇಳುತ್ತಾನೆ. ಅದಕ್ಕಾಗಿ ಆತ ಆ ಇಬ್ಬರು ನೇಯುವವರಿಗೆ ಸಾಕಷ್ಟು ಹಣವನ್ನು ನೀಡುತ್ತಾನೆ.
ಇಬ್ಬರು ನೇಕಾರರು ನೇಯುವ ಯಂತ್ರವನ್ನು ತಯಾರಿಸುವ ಮತ್ತು ಬಟ್ಟೆ ನೇಯುವಂತೆ ನಟಿಸಲು ಪ್ರಾರಂಭಿಸುತ್ತಾರೆ. ವಾಸ್ತವವಾಗಿ ಅವರು ಏನು ಮಾಡುವುದಿಲ್ಲ. ಈ ಬಟ್ಟೆ ನೇಯುದಕ್ಕಾಗಿ ಅವರು ಅತ್ಯಮೂಲ್ಯ ಹತ್ತಿ ಮತ್ತು ಶುಭ್ರವಾದ ಚಿನ್ನವನ್ನು ಕೇಳುತ್ತಾರೆ. ಆದರೆ ಈ ಇಬ್ಬರು ಆ ಚಿನ್ನವನ್ನು ತಮ್ಮ ಚೀಲದಲ್ಲಿ ತುಂಬಿಸಿಕೊಂಡು ರಾತ್ರಿ ವರೆಗೆ ಸುಮ್ಮನೆ ಕೂರುತ್ತಾರೆ.
ಸ್ವಲ್ಪ ಸಮಯದ ನಂತರ ಈ ಕಡೆ ರಾಜನಿಗೆ ತಯಾರಾಗುತ್ತಿರುವ ಬಟ್ಟೆಯ ಬಗ್ಗೆ ಕುತೂಹಲ ಪ್ರಾರಂಭವಾಗುತ್ತದೆ ಮತ್ತು ಇದನ್ನು ನೋಡುವ ಆಶೆ ಉಂಟಾಗುತ್ತದೆ. ಆದರೆ ಈ ಬಟ್ಟೆಯನ್ನು ನನಗೆ ನೋಡಲು ಸಾದ್ಯವಾಗದಿದ್ದರೆ ನಾನು ಅಪ್ರಯೋಜಕನೆಂದಾಗುತ್ತದೆ ಎಂದು ಭಯ ಬೀತಗೊಂಡು ತನ್ನ ವಿಶ್ವಾಸಾರ್ಹ ಸಚಿವನನ್ನು ನೇಯಲ್ಪಡುತ್ತಿರುವ ಬಟ್ಟೆಯನ್ನು ನೋಡಲು ಕಳುಹಿಸುತ್ತಾನೆ.
ಸಚಿವ ಬಟ್ಟೆ ನೇಯಲ್ಪಡುತ್ತಿರುವ ಕೊಠಡಿಗೆ ಹೋಗುತ್ತಾನೆ ಆದರೆ ಆತನಿಗೆ ಏನು ಕಾಣುವುದಿಲ್ಲ. ಇದರಿಂದ ಗಾಭರಿ ಗೊಂಡ ಸಚಿವ ಇದರ ಅರ್ಥ ನಾನು ನಿಶ್ಪ್ರಯೋಜಕನೇ ಎಂದು ಯೋಚಿಸತೊಡಗುತ್ತಾನೆ. ಸಚಿವನನ್ನು ನೋಡಿದ ನೇಕಾರರು ಆತನನ್ನು ಬರ ಮಾಡಿಕೊಂಡು ಬಟ್ಟೆ ಹೇಗೆ ಇದೆ ಎಂದು ಕೇಳುತ್ತಾರೆ.
ಸಚಿವ ಮನಸ್ಸಿನಲ್ಲೇ ಒಂದು ವೇಳೆ ನಾನು ಕಾಣಿಸುತ್ತಿಲ್ಲ ಎಂದು ಹೇಳಿದರೆ ನಾನು ಅಪ್ರಯೋಜಕನೆಂದು ಗೊತ್ತಾಗುವುದು. ಇದನ್ನು ನಾನು ಯಾರಿಗೂ ಗೊತ್ತಾಗಿಸ ಕೂಡದು ಹಾಗಾಗಿ ನಾನು ಕಾಣಿಸುತ್ತಿಲ್ಲ ಎಂದು ಹೇಳಬಾರದು ಎಂದು ಯೋಚಿಸುತ್ತಾನೆ. ನೇಕಾರರು ಮತ್ತೊಮ್ಮೆ ಬಟ್ಟೆ ಹೇಗಿದೆ ಎಂದು ಕೇಳುತ್ತಾರೆ. ಸಚಿವ ಸುಮ್ಮನೆ ಬಟ್ಟೆ ಬಹಳ ಸುಂದರವಾಗಿದೆ ಎಂದು ಹೇಳುತ್ತಾನೆ. ನಂತರ ನೇಕಾರರು ಸುಮ್ಮನೆ ಇಲ್ಲದ ಬಟ್ಟೆಯ ಬಣ್ಣವನ್ನು ವಿವರಿಸುತ್ತಾರೆ ಮತ್ತು ಬಟ್ಟೆಗಾಗಿ ಇನ್ನಷ್ಟು ಚಿನ್ನದ ನೂಲನ್ನು ಕೇಳುತ್ತಾರೆ. ರಾಜನ ಹತ್ತಿರ ಬಂದು ಸಚಿವ, ಬಟ್ಟೆ ಬಹಳ ಸುಂದರವಾಗಿದೆ ಎಂದು ಸುಮ್ಮನೆ ಬಣ್ಣಿಸುತ್ತಾನೆ.
ಇದಾದ ಸ್ವಲ್ಪ ಸಮಯದ ನಂತರ ರಾಜ ಇನ್ನೊಬ್ಬನನ್ನು ಅಲ್ಲಿಗೆ ಕಳುಹಿಸುತ್ತಾನೆ. ಆತನಿಗೂ ಯಾವುದೇ ಬಟ್ಟೆ ಕಾಣಿಸುವುದಿಲ್ಲ. ನೇಕಾರರು ಆತನಲ್ಲಿ ಬಟ್ಟೆ ಹೇಗಿದೆ ಎಂದು ಪ್ರಶ್ನಿಸುತ್ತಾರೆ. ಆತ ಕೂಡ ಒಂದು ವೇಳೆ ನಾನು ಕಾಣುತ್ತಿಲ್ಲ ಎಂದು ಹೇಳಿದರೆ ನಾನು ಅಪ್ರಯೋಜಕನೆಂದು ಗೊತ್ತಾಗುವುದು. ಇದರಿಂದ ನನ್ನ ಕೆಲಸಕ್ಕೆ ಸಂಚಕಾರ ಬರುವುದು ಹಾಗಾಗಿ ನಾನು ಕಾಣಿಸುವುದಿಲ್ಲ ಎಂದು ಹೇಳಬಾರದು ಎಂದು ನಿರ್ಧರಿಸುತ್ತಾನೆ.ಮತ್ತು ಬಟ್ಟೆ ಬಹಳ ಸುಂದರವಾಗಿದೆ ಎಂದು ಇಬ್ಬರು ನೇಕಾರರನ್ನು ಪ್ರಶಂಸಿಸುತ್ತಾನೆ. ರಾಜನ ಹತ್ತಿರ ಬಂದು ಬಟ್ಟೆ ಸುಂದರವಾಗಿದೆ ಎಂದು ಹೇಳುತ್ತಾನೆ.
ಅಂತಿಮವಾಗಿ ರಾಜನಿಗೆ ಆ ಬಟ್ಟೆಯನ್ನು ನೋಡುವ ಬಯಕೆ ಆಗುತ್ತದೆ. ರಾಜ ಕೆಲವರನ್ನು ಕರೆದುಕೊಂಡು ಬಟ್ಟೆ ನೇಯುತ್ತಿರುವ ಕೊಠಡಿಗೆ ಹೋಗುತ್ತಾನೆ. ಆದರೆ ರಾಜನಿಗೂ ಅಲ್ಲಿ ಯಾವುದೇ ಬಟ್ಟೆ ಕಾಣಿಸುವುದಿಲ್ಲ. ಇದರಿಂದ ರಾಜನಿಗೆ ಗಾಬರಿಯಾಗುತ್ತದೆ. ಇದರ ಅರ್ಥ ನಾನು ಅಪ್ರಯೋಜಕನೆಂದೇ? ನಾನು ರಾಜನಾಗಿ ಪಟ್ಟದಲ್ಲಿ ಕೂರಲು ಅನರ್ಹವೆಂದು ಇದರ ಅರ್ಥವೇ ಎಂದು ಯೋಚಿಸಿ ಗಾಬರಿ ಗೊಳ್ಳುತ್ತಾನೆ. ಹಾಗಾಗಿ ತಾನೂ ಬಟ್ಟೆ ಕಾಣಿಸುತ್ತಿದೆ ಎಂದು ಸುಳ್ಳು ಹೇಳಬೇಕು ಎಂದು ಯೋಚಿಸಿ, ಬಟ್ಟೆ ಬಹಳ ಅದ್ಬುತವಾಗಿದೆ ಎಂದು ಹೇಳುತ್ತಾನೆ.
ಇದನ್ನು ಕೇಳಿದ ಇತರ ಅಧಿಕಾರಿಗಳು ಬಟ್ಟೆ ಕಾಣಿಸದಿದ್ದರೂ ಹೌದು ಹೌದು ಬಟ್ಟೆ ಸುಂದರವಾಗಿದೆ ಎಂದು ಸುಳ್ಳು ಹೇಳುತ್ತಾರೆ. ರಾಜ ಇನ್ನೂ ಸ್ವಲ್ಪ ಮುಂದೆ ಹೋಗಿ ನಾಳೆ ನಾನು ಇದನ್ನು ದರಿಸಿಕೊಂಡು ಮೆರವಣಿಗೆ ನಡೆಸಲಿದ್ದೇನೆ ಎಂದು ತಿಳಿಸುತ್ತಾನೆ.
ಹೀಗೆ ಮಾರನೇ ದಿನ ರಾಜನ ಆಸ್ಥಾನಕ್ಕೆ ಇಬ್ಬರು ನೇಕಾರರು ಬಂದು ನಿಜವಾಗಿ ಬಟ್ಟೆ ಇರುವಂತೆ ಕೈಯಿಂದ ಎತ್ತಿ ಹಿಡಿದು, ನೋಡಿ ಈ ಸುಂದರವಾದ ಬಟ್ಟೆಯನ್ನು ಇದು ಹತ್ತಿಯಷ್ಟು ಹಗುರವಾಗಿದೆ. ರಾಜ ತಮ್ಮ ಬಟ್ಟೆಯನ್ನು ತೆಗೆದರೆ ನಾವು ಈ ಹೊಸ ಬಟ್ಟೆಯನ್ನು ಅವರಿಗೆ ಧರಿಸುತ್ತೇವೆ ಎಂದು ಹೇಳುತ್ತಾರೆ.
ನೇಕಾರರು ರಾಜನಿಗೆ ಆ ಬಟ್ಟೆಯನ್ನು ಧರಿಸುವಂತೆ ನಟಿಸುತ್ತಾರೆ ಮತ್ತು ಎಷ್ಟು ಸುಂದರ ಎಂದು ಶ್ಲಾಘಿಸುತ್ತಾರೆ. ನೆರೆದಿದ್ದ ಎಲ್ಲರೂ ಹೌದು ಈ ಬಟ್ಟೆಯಿಂದ ರಾಜ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಸುಳ್ಳು ಸುಳ್ಳಾಗಿ ಬೊಬ್ಬಿಡಲು ಪ್ರಾರಂಭಿಸುತ್ತಾರೆ. ಇಲ್ಲದಿದ್ದರೆ ನಾವು ಅಪ್ರಯೋಜಕರೆಂದು ತಿಳಿಸುತ್ತದೆ ಎಂದು ಹೆದರಿ ಸುಮ್ಮನೆ ಎಲ್ಲರೂ ಹೊಗಳಲು ಪ್ರಾರಂಭಿಸುತ್ತಾರೆ.
ಹೀಗೆ ಮೆರವಣಿಗೆಯಲ್ಲಿ ಸಾಗುತ್ತಿರುವಾಗ ರಾಜನ ಮಗಳು ಬಟ್ಟೆ ಕಾಣಿಸುತ್ತಿಲ್ಲ ಎಂದು ಹೇಳುತ್ತಾಳೆ. ಇದು ಎಲ್ಲರ ಕಿವಿಗೂ ಹರಡುತ್ತದೆ ಮತ್ತು ಎಲ್ಲರೂ ಹೌದು ಬಟ್ಟೆ ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ. ರಾಜನಿಗೂ ಜನೇರು ಹೇಳುತ್ತಿರುವುದು ಸತ್ಯ ಎಂದು ಯೊಚಿಸಿ ತನ್ನ ಮಂಕು ಬುದ್ದಿಯ ಅರಿವಾಗಿ ತನ್ನನ್ನೇ ತಾನು ಹಳಿಯುತ್ತಾನೆ.