Select Your Language

Notifications

webdunia
webdunia
webdunia
webdunia

ನಕ್ಷತ್ರಗಳಿಂದ ಉದುರಿದ ಅದೃಷ್ಟ

ನಕ್ಷತ್ರಗಳಿಂದ ಉದುರಿದ ಅದೃಷ್ಟ

ಇಳಯರಾಜ

PTI
ಒಂದು ಊರಿನಲ್ಲಿ ಒಬ್ಬಳು ಸುಂದರವಾದ ಹುಡುಗಿ ಇದ್ದಳು. ಅವಳು ತನ್ನ ತಂದೆ, ತಾಯಿಯನ್ನು ಕಳೆದು ಕೊಂಡು ಅನಾಥವಾಗಿದ್ದಳು.

ಅವಳಿಗೆ ತಂಗಲು ಒಂದು ಸಣ್ಣ ಮನೆಯೂ ಇದ್ದಿರಲಿಲ್ಲ. ಅವಳಿಗೆ ತಾನು ಉಟ್ಟ ಬಟ್ಟೆ ಮತ್ತು ಯಾರೋ ಕೊಟ್ಟ ಬ್ರೆಡ್ ತುಂಡು ಬಿಟ್ಟರೆ ಜಗತ್ತಿನಲ್ಲಿ ತನ್ನ ಆಸ್ತಿ ಎಂದು ಹೇಳಿಕೊಳ್ಳುವ ಯಾವುದೇ ಆಸ್ತಿ ಇರಲಿಲ್ಲ.ಆದರೆ ಅವಳು ಒಬ್ಬಳು ಉತ್ತಮ, ವಿನಮ್ರತೆಯ, ಹಾಲು ಮನಸಿನ ಹುಡುಗಿಯಾಗಿದ್ದಳು. ಅವಳು ಜಗತ್ತಿನಲ್ಲಿ ಏಕಾಂಗಿಯಾಗಿದ್ದರಿಂದ ತನ್ನ ಎಲ್ಲಾ ನಂಬಿಕೆಯನ್ನು ದೇವರ ಮೇಲೆ ಹಾಕಿದ್ದಳು ಮತ್ತು ತನ್ನ ಅದೃಷ್ಟ ಹುಡುಕುವುದಕ್ಕಾಗಿ ಹೊರ ನಡೆಯುತ್ತಾಳೆ.

ಹೀಗೆ ನಡೆಯುತ್ತಿರುವಾಗ ಕುಮಾರಿ ಮೊದಲಿಗೆ ಬಡ ಪುರುಷನನ್ನು ಭೇಟಿಯಾಗುತ್ತಾನೆ. ಆತ ಇವಳನ್ನು ನೋಡಿ, ನನಗೆ ತಿನ್ನಲು ಏನಾದರು ಕೊಡು. ನನಗೆ ಬಹಳ ಹಸಿವಾಗಿದೆ ಎಂದು ಕೇಳುತ್ತಾನೆ. ಇದನ್ನು ಕೇಳಿದ ಸಣ್ಣ ಹುಡುಗಿ ತನ್ನಲ್ಲಿದ್ದ ಸಣ್ಣ ಬ್ರೆಡ್ ತುಂಡನ್ನು ಆತನಿಗೆ ಕೊಡುತ್ತಾಳೆ. ಇದನ್ನು ಪಡೆದ ಆ ವ್ಯಕ್ತಿ ನಿನಗೆ ದೇವರು ಒಳ್ಳೆದು ಮಾಡಲಿ ಎಂದು ಹುಡುಗಿಯನ್ನು ಹಾರೈಸುತ್ತಾನೆ.

ಹೀಗೆ ಮುಂದೆ ಸಾಗುತ್ತಿರುವಾಗ ಹುಡುಗಿ ಎದುರು ಅಳುತ್ತಿದ್ದ ಮಗುವೊಂದು ಎದುರಾಗುತ್ತದೆ. ಆ ಮಗು ನನ್ನ ತಲೆ ಬಹಳ ತಂಪಾಗುತ್ತಿದ್ದು, ದಯವಿಟ್ಟು ನನ್ನ ತೆಲೆಯನ್ನು ಮುಚ್ಚಲು ಏನಾದರು ಕೊಡು ಎಂದು ಕೇಳುತ್ತದೆ. ಆಗ ಹುಡುಗಿ ತನ್ನಲ್ಲಿದ್ದ ಟೋಪಿಯನ್ನು ಅದಕ್ಕೆ ಕೋಟ್ಟು ಮುಂದೆ ಸಾಗುತ್ತಾಳೆ.

ಹೀಗೆ ಮುಂದೆ ಸಾಗುವಾಗ ಇನ್ನೊಂದು ಮಗು ಎದುರಾಗುತ್ತದೆ ಆ ಮಗು ನಿರ್ವಸ್ತ್ರವಾಗಿದ್ದು, ಚಳಿಯಿಂದ ನಡುಗುತ್ತಿತ್ತು. ಅದನ್ನು ಕಂಡ ಹುಡುಗಿ ತನ್ನ ಕೋಟನ್ನು ಆ ಮಗುವಿಗೆ ಕೊಡುತ್ತಾಳೆ. ಹೀಗೆ ಸ್ವಲ್ಪ ದೂರ ಸಾಗಿದಾಗ ಇನ್ನೊಂದು ಸಣ್ಣ ಹೆಣ್ಣು ಮಗುವೊಂದನ್ನು ಭೇಟಿಯಾಗುತ್ತಾಳೆ. ಅದು ಇವಳು ಧರಿಸಿದ್ದ ಬಟ್ಟೆಯನ್ನು ಕೇಳುತ್ತದೆ. ಆದಾಗಲೇ ಕತ್ತಲು ಆವರಿಸಿದ್ದುದರಿಂದ ಮತ್ತು ಅರಣ್ಯ ಸಮೀಪಿಸಿದ್ದುದರಿಂದ ತಾನು ದರಿಸಿದ್ದ ಬಟ್ಟೆಯನ್ನು ಸಂತೋಷದಿಂದ ಆ ಹೆಣ್ಣು ಮಗುವಿಗೆ ನೀಡುತ್ತಾಳೆ.

ಈಗ ಅವಳು ಕಾಡಿನ ಕತ್ತಲೆಯಲ್ಲಿ ತನ್ನಲ್ಲಿದ್ದುದನ್ನೆಲ್ಲವನ್ನು ದಾನ ಮಾಡಿ ನಿರ್ವಸ್ತ್ರವಾಗಿ ನಿಂತಿದ್ದಳು. ಆಗ ಆಕಾಶದಿಂದ ನಕ್ಷತ್ರಗಳು ಹೊಳೆಯುವ ನಕ್ಷತ್ರವಾಗಿ ಭೂಮಿಗೆ ಬೀಳುತ್ತಿತ್ತು. ಅವಳು ತನ್ನ ಬಟ್ಟೆಗಳನ್ನು ದಾನ ಮಾಡಿದ್ದರೂ, ಅಚಾನಕ್ಕಾಗಿ ಹೊಚ್ಚಹೊಸ ಮತ್ತು ಅದ್ಬುತ ಸತ್ವದಿಂದ ಕೂಡಿದ್ದ ಬಟ್ಟೆಯನ್ನು ತಾನು ಹಾಕಿರುವುದು ಅವಳ ಗಮನಕ್ಕೆ ಬಂತು.

ಸಂತೋಷದಿಂದ ತಾನು ಹಾಕಿದ್ದ ಸುಂದರ ಬಟ್ಟೆಯನ್ನು ಮುಂದೊಡ್ಡಿ ಬಿದ್ದಿದ್ದ ನಾಣ್ಯಗಳನ್ನು ಅದರಲ್ಲಿ ಒಟ್ಟುಗೂಡಿಸಿದಳು. ಮತ್ತು ಮುದಿನ ದಿನಗಳನ್ನು ಬಹಳ ಶ್ರೀಮಂತಿಕೆಯಿಂದ ಕಳೆದಳು.

Share this Story:

Follow Webdunia kannada