Select Your Language

Notifications

webdunia
webdunia
webdunia
webdunia

ಕುಬ್ಜ ದಂದಂ

ಕುಬ್ಜ ದಂದಂ

ಇಳಯರಾಜ

ಒಂದು ಊರಿನಲ್ಲಿ ಒಬ್ಬ ಬಡ ಗಿರಣಿಗಾರನಿದ್ದ. ಆತನಿಗೆ ಒಬ್ಬಳು ಸುದರವಾದ, ಬುದ್ದಿವಂತ ಮಗಳು ಇದ್ದಳು. ಒಂದು ಭಾರಿ ಗಿರಣಿದಾರನಿಗೆ ರಾಜನ ಆಸ್ಥಾನದಲ್ಲಿ ವ್ಯವಹರಿಸುವ ಅವಕಾಶ ಒದಗಿ ಬಂತು. ಅಲ್ಲಿ ರಾಜನನ್ನು ಖುಷಿಪಡಿಸಲು ಗಿರಣಿಗಾರ ಬಡಾಯಿ ಕೊಚ್ಚಲು ಪ್ರಾರಂಭಿಸಿದ.

ಗಿರಣಿಗಾರ: ನನಗೆ ಒಬ್ಬಳು ಸುಂದರ ಮಗಳಿದ್ದು ಅವಳು ಬಹಳ ಬುದ್ದಿಯುಳ್ಳವಳಾಗಿದ್ದಾಳೆ. ಅವಳು ಹುಲ್ಲನ್ನು ಚಿನ್ನವಾಗಿ ಪರಿವರ್ತಿಸ ಬಲ್ಲಳು.
ರಾಜ: ಅದನ್ನು ನಂಬುವುದು ಕಷ್ಟ. ಒಂದು ವೇಳೆ ನಿನ್ನ ಮಗಳು ಆ ಸಾಮರ್ಥ್ಯ ಹೊಂದಿದರೆ. ಅವಳನ್ನು ನನ್ನ ಆಸ್ಥಾನಕ್ಕೆ ಕರೆದು ತಾ. ನಾನು ಅವಳನ್ನು ಪರೀಕ್ಷಿಸುತ್ತೇನೆ.
ಗಿರಣಿದಾರ ಮಗಳನ್ನು ರಾಜನ ಎದುರು ಹಾಜರು ಪಡಿಸಿದನು, ರಾಜ ಅವಳನ್ನು ಹುಲ್ಲಿನಿಂದ ಕೂಡಿದ್ದ ಕೊಠಡಿಗೆ ಕರೆದುಕೊಂಡು, ಅವಳಿಗೆ ಚರಕ ಮತ್ತು ಕದಿರಣಿಗೆಯನ್ನು ಕೊಡುತ್ತಾನೆ. ಇನ್ನು ಕೆಲಸ ಶುರುಹಚ್ಚು ಒಂದು ವೇಳೆ ನೀನು ಬೆಳಗಿನ ಹೊತ್ತಿಗೆ ಈ ಹುಲ್ಲುಗಳನ್ನು ಚಿನ್ನವಾಗಿ ಪರಿವರ್ತಿಸದಿದ್ದರೆ ನಿನ್ನನ್ನು ಸಾಯಿಸಲಾಗುವುದು ಎಂದು ಹೇಳಿ, ಬಾಗಿಲು ಮುಚ್ಚುತ್ತಾನೆ.

ಏಕಾಂಗಿಯಾದ ಹುಡುಗಿ, ಬಹಳ ಬೇಸರದಿಂದ ಕುಳಿತಿರುತ್ತಾಳೆ. ಹೊತ್ತು ಹೋದಂತೆ ಅವಳ ಚಿಂತೆ ಹೆಚ್ಚುತ್ತಾ ಹೋಯಿತು. ಕೊನಗೆ ಅವಳು ಅಳಲು ಪ್ರಾರಂಭಿಸಿದಳು. ಆ ಹೊತ್ತಿಗೆ ಮುಚ್ಚಿದ್ದ ಬಾಗಿಲು ತೆರೆಯಲ್ಪಟ್ಟಿತು ಮತ್ತು ಒಬ್ಬ ಕುಬ್ಜ ವ್ಯಕ್ತಿ ಒಳಗಡೆ ಪ್ರವೇಶಿಸಿ,
ಕುಬ್ಜ ವ್ಯಕ್ತಿ: ಏನಾಯಿತು ನನ್ನ ಮಗಳೇ ಏಕೆ ಅಳುತ್ತಿದ್ದೀ? ಎಂದು ಕೇಳುತ್ತಾನೆ.
ಹುಡುಗಿ: ಹಾ, ನಾನು ಈ ಹುಲ್ಲುಗಳನ್ನು ಚಿನ್ನದ ನೂಲುಗಳನ್ನಾಗಿ ನೇಯಬೇಕು. ಒಂದು ವೇಳೆ ಸಾದ್ಯವಾಗದಿದ್ದರೆ ನನ್ನನ್ನು ಕೊಲ್ಲುತ್ತಾರೆ ಎಂದು ದುಃಖದಿಂದ ಹೇಳುತ್ತಾಳೆ.
ಕುಬ್ಜ ವ್ಯಕ್ತಿ: ಒಂದು ವೇಳೆ ನಾನು ಹಾಗೆ ಮಾಡಿದರೆ ನೀನು ನನಗೆ ಏನು ಕೊಡುವಿ ಎಂದು ಕೇಳಿದನು.

ಹುಡುಗಿ: ನಾನು ನಿನಗೆ ನನ್ನ ಕೊರಳವಸ್ತ್ರವನ್ನು ಕೊಡುತ್ತೇನೆ.
ಕೂಡಲೇ ಕುಬ್ಜ ವ್ಯಕ್ತಿ ಕೊರಳವಸ್ತ್ರವನ್ನು ತೆಗೆದು ಕೊಂಡು, ಅಲ್ಲಿದ್ದ ಹುಲ್ಲುಗಳನ್ನು ಚರಕದಲ್ಲಿ ತಿರುಗಿಸಿ ನೂಲುಗಳನ್ನಾಗಿ ಪರಿವರ್ತಿಸುತ್ತಾನೆ. ಬೆಳಗೆ ಬಂದು ರಾಜ ಕೊಠಡಿ ಬಾಗಿಲು ತೆರೆಯುತ್ತಾನೆ. ನೋಡಿದರೆ ಕೊಠಡಿ ತುಂಬಾ ಚಿನ್ನ. ರಾಜನಿ ಅಚ್ಚರಿ ಉಂಟಾಗಿ ತುಬಾ ಖುಷಿಪಡುತ್ತಾನೆ. ಈಗ ರಾಜನ ಮನಸ್ಸು ಹೆಚ್ಚಿನ ಚಿನ್ನಕ್ಕೆ ಹಾತೊರೆಯುತ್ತದೆ. ರಾಜ ಗಿರಾಣಿಗಾರನ ಮಗಳನ್ನು ಹುಲ್ಲು ತಂಬಿದ್ದ ದೊಡ್ಡ ಕೊಠಡಿಗೆ ಕರೆದು ಕೊಂಡು ಹೋಗಿ ಬೆಳಗಾಗುವದರೊಳಗೆ ಇವುಗಳನ್ನೆಲ್ಲಾ ಚಿನ್ನವಾಗಿ ಪರಿವರ್ತಿಸ ಬೇಕು ಇಲ್ಲವಾದಲ್ಲಿ ನಿನ್ನನ್ನು ಕೊಲ್ಲಾಲಾಗುವುದು ಎಂದು ಗದರಿಸಿ, ಬಾಗಿಲು ಮುಚ್ಚಿ ಹೋಗುತ್ತಾನೆ. ಹುಡುಗಿಗೆ ಏನು ಮಾಡುವುದೆಂದು ತೋಚದೆ ಅಳಲು ಪ್ರಾರಂಭಿಸುತ್ತಾಳೆ. ಆಗ ಮತ್ತೊಮ್ಮೆ ಆ ಕುಬ್ಜ ವ್ಯಕ್ತಿ ಬಾಗಿಲು ತೆರೆದು ಒಳಗೆ ಬರುತ್ತಾನೆ.

ಕುಬ್ಜ ವ್ಯಕ್ತಿ: ಇದನ್ನು ಚಿನ್ನವಾಗಿ ಪರಿವರ್ತಿಸಿದರೆ ನೀನು ನನಗೆ ಏನು ಕೊಡುತ್ತೀ ಎಂದು ಕೇಳುತ್ತಾನೆ.
ಹುಡುಗಿ: ನಾನು ನನ್ನ ಕೈ ಉಂಗುರವನ್ನು ಕೊಡುತ್ತೇನೆ ಎಂದು ಹೇಳುತ್ತಾಳೆ.
ಕುಬ್ಜ ವ್ಯಕ್ತಿ ಆ ಉಂಗುರವನ್ನು ತೆಗೆದು ಕೊಂಡು ಅಲ್ಲಿದ್ದ ಎಲ್ಲಾ ಹುಲ್ಲುಗಳನ್ನು ಚರಕದಿಂದ ನೂಲುಗಳನ್ನಾಗಿ ಪರಿವರ್ತಿಸುತ್ತಾನೆ. ಇದನ್ನು ನೋಡಿದ ರಾಜ ಬಹಳ ಸಂತೋಷ ಪಟ್ಟು ಮತ್ತಷ್ಟು ಚಿನ್ನಕ್ಕೆ ಹಾ ತೊರೆಯುತ್ತಾನೆ ಮತ್ತು ಅವಳನ್ನು ಇನ್ನಷ್ಟು ದೊಡ್ಡ ಕೊಠಡಿಗೆ ಕರೆದು ಕೊಂಡು ಹೋಗಿ ಇಲ್ಲಿದ್ದ ಎಲ್ಲಾ ಹುಲ್ಲುಗಳನ್ನು ಚಿನ್ನವನ್ನಾಗಿ ಮಾಡಿದರೆ ನಾನು ನಿನ್ನನ್ನು ಮದುವೆ ಯಾಗುತ್ತೇನೆ ಎಂದು ಹೇಳುತ್ತಾನೆ. ಮತ್ತೊಮ್ಮೆ ಹುಡುಗಿ ಚಿಂತಾಕ್ರಾಂತಳಾಗುತ್ತಾಳೆ. ಆಗ ಆ ಕುಬ್ಜ ವ್ಯಕ್ತಿ ಬರುತ್ತಾನೆ.

ಕುಬ್ಜ ವ್ಯಕ್ತಿ: ನಾನು ಮತ್ತೊಮ್ಮೆ ಈ ಹುಲ್ಲುಗಳನ್ನು ಚಿನ್ನವಾಗಿಸಿದರೆ ನೀನು ನನಗೆ ಏನು ಕೊಡುವಿ?.
ಹುಡುಗಿ: ನನ್ನಲ್ಲಿ ನಿನಗೆ ಕೊಡಲು ಏನು ಉಳಿದಿಲ್ಲ ಎಂದು ಬೇಸರದಿಂದ ನುಡಿಯುತ್ತಾಳೆ.
ಕುಬ್ಜ ವ್ಯಕ್ತಿ: ಒಂದು ವೇಳೆ ನೀನು ರಾಣಿಯಾದರೆ ನಿನಗೆ ಹುಟ್ಟಿದ ಮೊದಲ ಮಗುವನ್ನು ನನಗೆ ಕೊಡುವ ಭರವಸೆ ಕೊಡು ಎಂದು ಹೇಳಿದ.
ಬೇರೆ ಏನು ದಾರಿ ಕಾಣದ ಗಿರಾಣಿಗಾರನ ಹುಡುಗಿ ಕುಬ್ಜ ವ್ಯಕ್ತಿಗೆ ಭರವಸೆ ನೀಡುತ್ತಾಳೆ. ಈ ಕುಬ್ಜ ವ್ಯಕ್ತಿ ಮತ್ತೊಮ್ಮೆ ಅಲ್ಲಿದ್ದ ಎಲ್ಲಾ ಹುಲ್ಲುಗಳನ್ನು ಚಿನ್ನವಾಗಿ ಪರಿವರ್ತಿಸುತ್ತಾನೆ.
ಬೆಳಗ್ಗೆ ರಾಜ ಬಂದು ಚಿನ್ನದ ಹುಲ್ಲುಗಳನ್ನು ನೋಡಿ ಸಂತೋಷಗೊಳ್ಳುತ್ತಾನೆ ಮತ್ತು ಭರವಸೆ ನೀಡಿದಂತೆ ಗಿರಾಣಿಗಾರನ ಸುಂದರ ಮಗಳೊಂದಿಗೆ ಮದುವೆಯಾಗುತ್ತಾನೆ ಮತ್ತು ಗಿರಾಣಿ ಮಗಳು ರಾಣಿಯಾಗುತ್ತಾಳೆ.

ಒಂದು ವರ್ಷದ ಬಳಿಕ ಸುಂದರವಾದ ಮಗುವಿನ ಜನನವಾಗುತ್ತದೆ. ಆದರೆ ರಾಣಿ ತಾನು ಆ ಕುಬ್ಜ ವ್ಯಕ್ತಿಗೆ ಕೊಟ್ಟ ಭರವಸೆಯನ್ನು ಮರೆತಿರುತ್ತಾಳೆ. ಒಂದು ದಿನ ಆ ಕುಬ್ಜ ವ್ಯಕ್ತಿ ಇವಳ ಕೊಠಡಿಯಲ್ಲಿ ಪ್ರತ್ಯಕ್ಷನಾಗಿ, ಮಗುವನ್ನು ಕೊಡುವಂತೆ ಕೇಳುತ್ತಾನೆ. ಇದನ್ನು ಕೇಳಿ ಆಘಾತಕ್ಕೊಳಗಾದ ರಾಣಿ ನಿನಗೆ ನನ್ನ ಎಲ್ಲಾ ಸಂಪತ್ತನ್ನು ಕೊಡುತ್ತೇನೆ ಆದರೆ ಮಗುವನ್ನು ಕೇಳಬೇಡ ಎಂದು ಮೊರೆ ಇಡುತ್ತಾಳೆ.

ಆಗ ಕುಬ್ಜ ವ್ಯಕ್ತಿ ನನಗೆ ಸಂಪತ್ತಿನ ಆಶೆ ಇಲ್ಲ ನಾನು ಪ್ರೀತಿಸುವುದು ಜೀವಂತ ವಸ್ತುವನ್ನು ಎಂದು ಉತ್ತರಿಸುತ್ತಾನೆ. ಆಗ ರಾಣಿ ಅಳಲು ಪ್ರಾರಂಭಿಸುತ್ತಾಳೆ. ಇದನ್ನು ಕಂಡು ಕುಬ್ಜ ವ್ಯಕ್ತಿ ಕನಿಕರ ಹೊಂದಿ ನಾನು ನಿನಗೆ ಮೂರು ದಿನಗಳ ಕಾಲವಕಾಶ ಕೊಡ್ಡುತ್ತೇನೆ. ಅದರ ಒಲಗೆ ನೀನು ನನ್ನ ಹೆಸರನ್ನು ಹೇಳಿದರೆ ನಾನು ನಿನ್ನ ಮಗುವನ್ನು ಬಿಟ್ಟುಬಿಡುತ್ತೇನೆ ಎಂದು ಹೇಳುತ್ತಾನೆ.

ರಾತ್ರಿ ಇಡೀ ರಾಣಿ ಆ ಕುಬ್ಜನ ಹೆಸರನ್ನು ಯೋಚಿಸುದರಲ್ಲೇ ನಿದ್ದೆ ಗೆಡುತ್ತಾಳೆ. ಇದೇ ವೇಳೆ ಕೆಲವು ವಿಶಿಷ್ಟ ಹೆಸರನ್ನು ಪತ್ತೆಹಚ್ಚಲು ತಮ್ಮ ಮಾಹಿತಿದಾರರನ್ನು ಎಲ್ಲಾ ಕಡೆ ಕಳುಹಿಸುತ್ತಾಳೆ. ಮರುದಿನ ಕುಬ್ಜ ವ್ಯಕ್ತಿ ಬಂದಾಗ ಈ ವಿವಿದ ಹೆಸರುಗಳನ್ನು ಅವನ ಮುಂದಿರಿಸುತ್ತಾಳೆ. ಆದರೆ ಅದೆಲ್ಲದಕ್ಕೂ ಆತ ತಲೆ ಅಲ್ಲಾಡಿಸಿ ಇದು ನನ್ನ ಹೆಸರಲ್ಲ ಎಂದು ಹೇಳುತ್ತಾನೆ.


2ನೇ ದಿನವು ಆಕೆ ವಿವಿದ ವಿಚಿತ್ರ ಹೆಸರುಗಳನ್ನು ಹೇಳುತ್ತಾಳೆ ಆದರೆ ಅದೆಲ್ಲದಕ್ಕೂ ಆತ ನಿರಾಕರಿಸುತ್ತಾನೆ.
3ನೇ ದಿನ ಒಬ್ಬ ಮಾಹಿತಿದಾರ ವಪಾಸಾಗಿ, ನಾನು ಯಾವುದೇ ನೂತನ ಹೆಸರು ಪತ್ತೆಹಚ್ಚಿಲ್ಲ. ಆದರೆ ನಾನು ನಿನ್ನೆ ರಾತ್ರಿ ಗುಡ್ಡದ ಮೇಲಿರುವ ಸಣ್ಣ ಕಾಡಿನಿಂದ ವಾಪಸು ನಡೆದುಕೊಂಡು ಬರುತ್ತಿರುವಾಗ ನಾನು ಒಂದು ಸಣ್ಣ ಮನೆಯನ್ನು ನೋಡಿದೆ. ಆ ಮನೆಯ ಮುಂದೆ ಬೆಂಕಿ ಹಾಕಿ ಅದರ ಸುತ್ತ ತಿರುಗುತ್ತಿದ್ದ ಸಣ್ಣ ವ್ಯಕ್ತಿ
"ಇಂದು ನಾನು ಬೇಯಿಸುತ್ತಿದ್ದೇನೆ, ನಾಳೆ ನಾನು ಮದ್ಯ ಸೇವಿಸುತ್ತೇನೆ, ಇನ್ನೊಂದು ದಿನ ನಾನು ರಾಣಿಯ ಮಗುವನ್ನು ಇಲ್ಲಿಗೆ ತರುತ್ತೇನೆ, ಒ ನಾನು ಎಷ್ಟು ಅದೃಷ್ಟವಂತ ನನ್ನ ಹೆಸರು ದಂದಂ ಎಂದು ಯಾರಿಗೂ ತಿಳಿದಿಲ್ಲ" ಎಂದು ಕೂಗಾಡುತ್ತಿದ್ದ ಎಂದು ಹೇಳಿದ.

ಈ ಹೆಸರು ಕೇಳಿ ಬಹಳ ಸಂತೋಷಕ್ಕೊಳಗಾದ ರಾಣಿ ಅಂದಿನ ಸಂಜೆ ಆ ಕುಬ್ಜನ ಬರುವಿಕೆಗಾಗಿ ಕಾಯುತ್ತಿದ್ದಳು. ಸಂಜೆಯ ವೇಳೆ ಕುಬ್ಜ ವ್ಯಕ್ತಿ ಅರಮನೆಗೆ ಪ್ರವೇಶಿಸಿದ.
ಕುಬ್ಜ ವ್ಯಕ್ತಿ: ಓ ರಾಣಿ ನನ್ನ ಹೆಸರು ಏನು?
ರಾಣಿ: ನಿನ್ನ ಹೆಸರು ಬಂಗು ಅಲ್ಲವೆ?
ಕುಬ್ಜ ವ್ಯಕ್ತಿ: ಅಲ್ಲ ಎಂದು ಘರ್ಜಿಸಿದ.ರಾಣಿ ಅನಾವಶ್ಯಕವಾಗಿ ಬೇರೆ ಹೆಸರನ್ನು ಕೇಳುತ್ತಿದ್ದಳು. ಅದಕ್ಕೆಲ್ಲಾ ಆತ ಅಲ್ಲ ಎಂದು ಉತ್ತರಿಸುತ್ತಿದ್ದ.

ಕೊನೆಗೆ ರಾಣಿ ನಿನ್ನ ಹೆಸರು ದಂದಂ ಅಲ್ಲವೇ ಎಂದು ಕೇಳಿದಳು. ಆಗ ಕುಬ್ಜ ವ್ಯಕ್ತಿ ನಿನಗೆ ಪಿಶಾಚಿ ಹೇಳಿ ಕೊಟ್ಟಿತು ಎಂದು ಜೋರಾಗಿ ಬೊಬ್ಬೆ ಹಾಕಲು ಪ್ರಾರಂಭಿಸಿತು. ಮತ್ತು ತನ್ನ ಬಲ ಗಾಲನ್ನು ಬಲವಾಗಿ ತುಳಿಯಿತು ಆ ರಭಸಕ್ಕೆ ಅದು ಮಹಡಿ ಮುಖಾಂತರ ಹೋಯಿತು. ಆವೇಷದಲ್ಲಿ ಅವನು ತನ್ನ ಎಡ ಗಾಲನ್ನು ಎರಡೂ ಕೈಗಳಿಂದ ಹಿಡಿದು, ತನ್ನನ್ನು ಎರಡು ಭಾಗಗಳಾಗಿ ಹರಿದು ಬಿಟ್ಟನು. ಅಲ್ಲಿಗೆ ಕುಬ್ಜ ದಂದಂನ ಕಥೆ ಮುಗಿಯಿತು.

Share this Story:

Follow Webdunia kannada