Select Your Language

Notifications

webdunia
webdunia
webdunia
webdunia

ಅವನೀತ್ ಆಂಟಿಯ ಮೊಬೈಲ್ ಫೋನ್

ಮಕ್ಕಳ ಕಥೆ: ಪುಸ್ತಕ ವಿಮರ್ಶೆ

ಅವನೀತ್ ಆಂಟಿಯ ಮೊಬೈಲ್ ಫೋನ್
WD
ಚಿಕ್ಕಿ ಬೆಕ್ಕು ಮತ್ತು ಗಗನ್ ತುಂಬಾ ಬೆಸ್ಟ್ ಫ್ರೆಂಡ್ಸ್. ಗಗನ್‌ನ ಅಜ್ಜಿ ಇವರಿಬ್ಬರಿಗೆ ಒಳ್ಳೊಳ್ಳೆಯ ಕಥೆಗಳನ್ನು ಹೇಳುತ್ತಿರುತ್ತಾರೆ. ಅದಕ್ಕೆ ಇವರಿಬ್ಬರಿಗೆ ಅಜ್ಜಿಯನ್ನು ಕಂಡರೆ ತುಂಬಾ ಪ್ರೀತಿ.

ಒಂದು ದಿನ ಅಜ್ಜಿ ಇವರಿಬ್ಬರಿಗೂ ಕಥೆಹೇಳಲು ಹೊರಟಾಗ ಅವನೀತ್ ಆಂಟಿ ಬರುತ್ತಾರೆ. ಅವನೀತ್ ಆಂಟಿ ಮಾತಿನ ಮಲ್ಲಿ. ಇವರು ಬಂದರೆ ಅಜ್ಜಿ ಕಥೆ ಹೇಳುವುದನ್ನು ನಿಲ್ಲಿಸಿ ಅವನೀತ್ ಆಂಟಿ ಜೊತೆ ಮಾತನಾಡಲು ಪ್ರಾರಂಭಿಸುತ್ತಾರೆ.

ಇನ್ನು ಅಜ್ಜಿ ನಮಗೆ ಕಥೆ ಹೇಳುವುದಿಲ್ಲ ಎಂದು ಗಗನ್ ಮತ್ತು ಚಿಕ್ಕಿ ಆಟವಾಡಲು ಪ್ರಾರಂಭಿಸುತ್ತಾರೆ. ಆಟವಾಡುವಾಗ ಅವನೀತ್ ಆಂಟಿಯ ಮೊಬೈಲ್ ಬಿದ್ದು ಒಡೆದು ಹೋಗುತ್ತದೆ.

ಅವನೀತ್ ಆಂಟಿಗೆ ತುಂಬಾ ಕೋಪ ಬಂದಿದೆ ಎಂದು ಎಣಿಸಿ ಗಗನ್ " ಸಾರಿ ಅವನೀತ್ ಆಂಟಿ" ಎನ್ನುತ್ತಾನೆ. ಆದರೆ ಅವನೀತ್ ಆಂಟಿ ಕೋಪಗೊಳ್ಳದೆ ಗಗನ್ ಮತ್ತು ಚಿಕ್ಕಿಯನ್ನು ಕ್ಷಮಿಸುತ್ತಾರೆ.

ಲೇಖಕಿ ಕವಿತಾ ಸಿಂಗ್ ಅವನೀತ್ ಆಂಟಿಯ ಮೂಲಕ ಮಾನವೀಯತೆಯ ಸಂಬಂಧಗಳ ಪ್ರಾಮುಖ್ಯತೆಯನ್ನು ಈ ಕಥೆಯಲ್ಲಿ ಮಕ್ಕಳಿಗೆ ತಿಳಿಯಪಡಿಸುತ್ತಾರೆ.

ಒಡೆದುಹೋದ ಮೊಬೈಲ್‌ಗಾಗಿ ಅವನೀತ್ ಆಂಟಿ ಗಗನ್ ಮತ್ತು ಚಿಕ್ಕಿ ಜೊತೆ ಕೋಪಮಾಡಿಕೊಳ್ಳಬಹುದಿತ್ತು, ಮೊಬೈಲ್ ಮತ್ತೆ ಪಡೆಯಬಹುದು, ಆದರೆ ಒಡೆದುಹೋದ ಮನಸ್ಸನ್ನು ಸರಿಪಡಿಸುವುದು ಕಷ್ಟ ಎಂದು ತಿಳಿದ ಆಂಟಿ ತನ್ನ ಉದಾರ ಮನೋಭಾವದಿಂದ ಚಿಕ್ಕಿ ಮತ್ತು ಗಗನ್‌ನನ್ನು ಕ್ಷಮಿಸಿ ಬಾಂಧವ್ಯದ ನೆಲೆಯನ್ನು ಗಟ್ಟಿಗೊಳಿಸಿದ್ದಾರೆ.

ಇದರೊಂದಿಗೆ ಚಿಕ್ಕಿ ಮತ್ತು ಗಗನ್‌ನ ಗಾಢವಾದ ಸ್ನೇಹದ ಮೂಲಕ ಗೆಳೆತನದ ಮಹತ್ವವನ್ನು ಕೂಡಾ ಮಕ್ಕಳಿಗೆ ಈ ಕಥೆಯ ಮೂಲಕ ತಿಳಿಸುತ್ತಿದ್ದಾರೆ. ಅಲ್ಲದೆ ಆಕರ್ಷಕವಾದ ಚಿತ್ರಗಳ ಮೂಲಕ ಮಕ್ಕಳಿಗೆ ಈ ಪುಸ್ತಕವನ್ನು ಓದಲು ಪ್ರೇರೇಪಿಸುವಂತೆ ಮಾಡಿದೆ. ಇದರಲ್ಲಿ ಆಂಗ್ಲ ರೂಪಾಂತರವೂ ಇದೆ.

ಪುಸ್ತಕ: ಅವನೀತ್ ಆಂಟಿಯ ಮೊಬೈಲ್ ಫೋನು
ಪ್ರಕಾಶಕರು: ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18
ಲೇಖಕರು: ಕವಿತಾ ಸಿಂಗ್ ಕಾಳೆ
ಅನುವಾದ: ಅಶ್ವಿನಿ ಭಟ್
ಬೆಲೆ: 100 ರೂಪಾಯಿಗಳು

Share this Story:

Follow Webdunia kannada