Select Your Language

Notifications

webdunia
webdunia
webdunia
webdunia

ಹಕ್ಕಿ ಕೊಕ್ಕಿನ ರಾಜ

ಹಕ್ಕಿ ಕೊಕ್ಕಿನ ರಾಜ

ಇಳಯರಾಜ

PTI
ಒಬ್ಬ ರಾಜನಿಗೆ ಒಂದು ಮಗಳಿದ್ದಳು. ವಳು ಬಹಳ ಸುಂದರಿಯಾಗಿದ್ದಳು.

ಆದರೆ ಅವಳು ಎಷ್ಟು ಜಂಬದವಳು ಮತ್ತು ದುರಾಭಿಮಾನಿಯಾಗಿದ್ದಳೆಂದರೆ ಬರುವ ಎಲ್ಲಾ ವರಗಳಿಗೆ ಅವಳು ಅವಮಾನ ಮಾಡುತ್ತಿದ್ದಳು ಮತ್ತು ಅವರು ನನಗೆ ಸರಿಯಾದ ವರ ಅಲ್ಲ ಎಂದು ಅವರನ್ನು ನಿರಾಕರಿಸುತ್ತಿದ್ದಳು ಇದರ ಜತೆಗೆ ಬಂದ ವರಗಳನ್ನು ತಮಾಷೆ ಮಾಡುತ್ತಿದ್ದಳು.

ಒಂದು ದಿನ ರಾಜ ಒಂದು ದೊಡ್ಡ ಹಬ್ಬವನ್ನು ಬಹಿರಂಗವಾಗಿ ಪ್ರಕಟಿಸಿದನು ಮತ್ತು ದೂರ ದಿಂದ ಮದುವೆಯಾಗುವಂತ ಯುವಕರನ್ನು ಇದಕ್ಕೆ ಆಹ್ವಾನಿಸಿದನು. ಅವರೆಲ್ಲರು ಸಾಲಾಗಿ ಕುಳಿತು ರಾಜಕುಮಾರಿಯನ್ನು ನೋಡಲು ಪ್ರಾರಂಭಿಸದರು. ಆದರೆ ರಾಜಕುಮಾರಿ ಎಲ್ಲರನ್ನೂ ತಮಾಷೆ ಮಾಡಲು ಶುರುಹಚ್ಚಿದಳು. ಪ್ರತಿ ವರರಿಗೂ ಅಡ್ಡಹೆಸರನ್ನು ಇಡುತ್ತಾಇದ್ದಳು. ವಿಶೇಷವಾಗಿ ಒಬ್ಬ ಯುವ ರಾಜನ ಗಲ್ಲ ವಕ್ರವಾಗಿತ್ತು ಅದನ್ನು ನೋಡಿ ರಾಜಕುಮಾರಿ ನಗಲು ಪ್ರಾರಂಭಿಸಿದಳು ಮತ್ತು ಆ ಯುವ ರಾಜನನ್ನು ಹಕ್ಕಿಯ ಕೊಕ್ಕಿನವ ಎಂದು ಅಡ್ಡ ಹೆಸರು ಇಟ್ಟಳು.

ಇದರಿಂದ ಕುಪಿತ ಗೊಂಡ ರಾಜ ನನ್ನ ಅರಮನೆ ದ್ವಾರದ ಬಳಿ ಬರುವ ಮೊದಲ ಬಿಕ್ಷುಕನಿಗೆ ನಾನು ತನ್ನ ಮಗಳನ್ನು ಮದುವೆ ಮಾಡಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದನು.
ಇದಾದ ಎರಡು ದಿನಗಳ ನಂತರ ಒಬ್ಬ ಹಾಡುಗಾರ ಅರಮನೆಯ ದ್ವಾರದ ಹತ್ತಿರ ಬೇಡುತ್ತಾ ಬರುತ್ತಿದ್ದ. ಅದನ್ನು ಕಂಡ ರಾಜ ಅವನನ್ನು ಮೇಲೆ ಕರೆದು ತರುವಂತೆ ಅಜ್ಞಾಪಿಸಿದನು. ಆ ಭಿಕ್ಷುಕ ರಾಜ ಮತ್ತು ರಾಜಕುಮಾರಿ ಎದುರು ಹಾಡಿ, ಏನಾದರು ಕೊಡುವಂತೆ ಕೇಳುತ್ತಾನೆ. ಆಗ ರಾಜ ನನಗೆ ನಿನ್ನ ಹಾಡು ಕೇಳಿ ಸಂತೋಷವಾಗಿದೆ. ನಾನು ನನ್ನ ಕಡೆಯ ಮಗಳನ್ನು ನಿನ್ನ ಹೆಂಡತಿಯಾಗಿ ಕೊಡುತ್ತೇನೆ ಎಂದು ಹೇಳಿದ. ಇದನ್ನು ಕೇಳಿದ ರಾಜಕುಮಾರಿ ಹೆದರಿದಳು. ಆದರೆ ರಾಜ ತನ್ನ ಪ್ರತಿಜ್ಞೆಗೆ ಪಟ್ಟು ಬಿದ್ದು ರಾಜಕುಮಾರಿಯ ಎಲ್ಲಾ ಮನವಿಯನ್ನು ನಿರಾಕರಿಸಿದ.

ನಂತರ ಪುರೋಹಿತರನ್ನು ಕರೆದು ಮದುವೆ ಕಾರ್ಯಕ್ರಮವನ್ನು ಪೋರೈಸಿ. ಮಗಳನ್ನು ಆ ಬಿಕ್ಷುಕನೊಂದಿಗೆ ಕಳುಹಿಸಿದ. ಬಿಕ್ಷುಕ ತನ್ನ ಹೆಂಡತಿಯನ್ನು ಬರೆಗಾಲಲ್ಲೇ ಕರೆದುಕೊಂಡು ಹೋದ. ಹೀಗೆ ಹೋಗುತ್ತಾ ಒಂದು ಸಣ್ಣ ಗುಡಿಸಲಿನ ಹತ್ತಿರ ಬಂದರು. ಅದನ್ನು ನೊಡಿದ ರಾಜಕುಮಾರಿ ಯಾರದು ಆ ದರಿದ್ರ ಮುರುಕು ಗುಡಿಸಲು ಎಂದು ಪ್ರಶ್ನಿಸುತ್ತಾಳೆ. ಆಗ ಬಿಕ್ಷುಕ ಅದು ನನ್ನ ಗುಡಿಸಲು. ಇಲ್ಲಿ ನಾವಿಬ್ಬರು ಜೀವಿಸಲಿದ್ದೇವೆ ಎಂದು ಉತ್ತರಿಸಿದ.

ಮನಸ್ಸಿಲ್ಲದ ಮನಸ್ಸಿನಿಂದ ಗುಡಿಸಲಿನ ಒಳಗೆ ಪ್ರವೇಶಿಸಿದ ರಾಜಕುಮಾರಿ ಎಲ್ಲ ನಮ್ಮ ಕೆಲಸದಾಳುಗಳು ಎಂದು ಕೇಳಿದಳು. ಆಗ ಗಂಡ ಯಾವ ಕೆಲಸದಾಳುಗಳು. ಇಲ್ಲಿ ಯಾವುದೇ ಕೆಲಸದಾಳುಗಳು ಇಲ್ಲ. ಎಲ್ಲಾ ಕೆಲಸವೂ ನೀನೇ ಮಾಡ ಬೇಕು ಎಂದು ಪ್ರತಿಕ್ರಿಯಿಸಿದ. ಆದರೆ ಅಡಿಗೆ ಅಥವಾ ಒಲೆ ಉರಿಸಲು ಗೊತ್ತಿಲ್ಲದ ರಾಜಕುಮಾರಿ ಬಹಳ ದುಖಃ ಪಟ್ಟಳು. ಹೀಗೆ ಎರಡು ಮೂರು ದಿನಗಳ ನಂತರ ಶೇಖರಿಸಿದ್ದ ಆಹಾರ ಕಾಲಿಯಾಯಿತು. ಆಗ ಬಿಕ್ಷುಕ ನಾವು ಈ ರೀತಿ ಇದ್ದರೆ ನಮಗೆ ತಿನ್ನಲು ಏನು ಇರುವುದಿಲ್ಲ. ಅದಕ್ಕಾಗಿ ನಾವು ಇನ್ನು ಬುಟ್ಟಿನೇಯ್ದು ಹಣಮಾಡಬೇಕು ಎಂದು ಹೇಳಿದನು.

ಹೀಗೆ ಬುಟ್ಟಿ ನೇಯಲು ಬೇಕಾದ ಸಾಮಾನುಗಳನ್ನು ಕಾಡಿನಿಂದ ಬಿಕ್ಷುಕ ತರುತ್ತಾನೆ. ರಾಜಕುಮಾರಿ ಆವುಗಳನ್ನು ನೇಯಲು ಹೋದಾಗ ತನ್ನ ಕೈಗೆ ಗಾಯಮಾಡುತ್ತಾಳೆ. ಆಗ ಬಿಕ್ಷುಕ ಗಂಡ, ನೀನು ನಿನ್ನ ಕೆಲಸಗಳನ್ನು ಹಾಳುಗೆಡವುತಿದ್ದಿ. ಇನ್ನು ನಾವು ಮಡಿಕೆಗಳನ್ನು ಮಾರಿ ಹಣಮಾಡಬೇಕು ಅದಕ್ಕಾಗಿ ನೀನು ಮಾರುಕಟ್ಟೆಯಲ್ಲಿ ಕುಳಿತು ಮಡಿಕೆಗಳನ್ನು ಮಾರಬೇಕು ಎಂದು ಹೇಳುತ್ತಾನೆ.

ಇದನ್ನು ಕೇಳಿದ ರಾಜಕುಮಾರಿ ಆಘಾತಕ್ಕೊಳಗಾಗುತ್ತಾಳೆ ಒಂದು ವೇಳೆ ನನ್ನ ತಂದೆಯ ಕಡೆಯವರು ನಾನು ಮಾರುಕಟ್ಟೆಯಲ್ಲಿ ಕುಳಿತು ಮಡಿಕೆ ಮಾರುವುದನ್ನು ನೋಡಿದರೆ ನಗುತ್ತಾರೆ ಎಂದು ಗಂಡನಿ ಹತ್ತಿರ ಗೋಗರೆಯುತ್ತಾಳೆ ಆದರೆ ಅವಳ ಯಾವ ವಿವರಣೆಗಳನ್ನು ಗಂಡ ಕೇಳುವುದಿಲ್ಲ.

ಮೊದಲ ದಿನ ಎಲ್ಲವೂ ಸರಿಯಾಗಿ ನಡೆಯಿತು ಎಲ್ಲರು ರಾಜಕುಮಾರಿಯ ಸುಂದರ ರೂಪ ನೋಡಿ ಹೆಚ್ಚಿನ ಮಡಿಕೆಗಳನ್ನು ಖರೀಧಿಸಿದರು. ನಂತರ ಗಂಡ ಇನ್ನೊಮ್ಮೆ ಮಡಿಕೆಗಳ ಸಂಗ್ರಹವನ್ನು ಖರೀಧಿಸಿದನು. ಈ ಮಡಿಕೆಗಳನ್ನು ಮಾರುವುದಕ್ಕಾಗಿ ರಾಜಕುಮಾರಿ ಮಾರುಕಟ್ಟೆಯ ಒಂದು ಮೂಲೆಯಲ್ಲಿ ತನ್ನ ಅಂಗಡಿಯನ್ನು ಇಟ್ಟಳು. ಆಗ ಒಬ್ಬ ಕುಡುಕ ಕುದುರೆಸವಾರ ಅವಳ ಅಂಗಡಿಯ ಮದ್ಯದಲ್ಲೇ ಎತ್ವಾತದ್ವಾ ಕುದುರೆ ಒಡಿಸಿ ಇದ್ದ ಎಲ್ಲಾ ಮಡಿಕೆಗಳು ಪುಡಿ ಪುಡಿಯಾಗಿ ಕೆಳಕ್ಕೆ ಬಿದ್ದವು. ರಾಜಕುಮಾರಿ ಅಳುತ್ತಾ ಗಂಡನಲ್ಲಿ ಈ ವಿಷಯ ತಿಳಿಸಿದಳು ಆಗ ಗಂಡ ಕೋಪದಿಂದ, ಯಾರಾದರೂ ಅಂಗಡಿಯನ್ನು ಮಾರುಕಟ್ಟೆಯ ಮೂಲೆಯಲ್ಲಿ ಇಡುತ್ತಾರೋ ಎಂದು ಗದರಿಸುತ್ತಾನೆ. ಅರಮನೆಯಲ್ಲಿ ಅಡಿಗೆ ಕೆಲಸ ಖಾಲಿ ಇದ್ದು, ನೀನು ಇನ್ನು ಮುಂದೆ ಅರಮನೆಯಲ್ಲಿ ಅಡಿಗೆಕೆಲಸದವಾಳಾಗಿ ಕೆಲಸ ಮಾಡು ಎಂದು ಹೇಳಿ ಗಂಡ ಅವಳನ್ನು ಅರಮನೆಯ ಅಡಿಗೆಯಾಳುವಾಗಿ ಕಳುಹಿಸುತ್ತಾನೆ.
ಅರಮನೆಯಲ್ಲಿ ಅಡಿಗೆ ಕೆಲಸದವಳಾಗಿ ರಾಜಕುಮಾರಿ ಕೊಳಕು ತಟ್ಟೆಗಳನ್ನು ತೊಳೆಯುವ ಕೆಲಸ ಮಾಡುವಂತಾಯಿತು. ನಂತರ ಉಳಿದಿದ್ದ ಆಹಾರಗಳನ್ನು ಮನೆಗೆ ತರುತಿದ್ದಳು.

ಕೆಲವು ದಿನಗಳ ನಂತರ ರಾಜನ ಹಿರಿಯ ಮಗನ ಮದುವೆ ಸಮಾರಂಭ ನಡೆಯ ಬೇಕಾಗಿತ್ತು ಆ ಸಮಾರಂಭದಲ್ಲಿ ಬಿಕ್ಷುಕನ ಹೆಂಡತಿ ರಾಜಕುಮಾರಿಯನ್ನು ಸಂತೋಷ ಕೂಟ ಕೊಠಡಿಯ ದ್ವಾರ ಪಾಲಕನಾಗಿ ನೇಮಿಸಲಾಯಿತು. ಹೊಚ್ಚ ಹೊಸ ಉಡುಗೆ ತೊಡುಗೆಗಳನ್ನು ಹಾಕಿ ಸುಂದರ ಯುವತಿಯರು ಈ ಕೊಠಡಿಗೆ ಪ್ರವೇಶಿಸಿದರು. ಇವರ ಆಡಂಬರವನ್ನು ನೋಡಿ ರಾಜಕುಮಾರಿ ಮರುಕ ಪಡಲು ಪ್ರಾರಂಭಿಸದಳು ಮತ್ತು ತನ್ನ ಹಣೆ ಬರಹವನ್ನು ದೂಷಿಸಿದಳು.

ಇದೇ ವೇಳೆ ರಾಜನ ಪುತ್ರ ಪ್ರವೇಶಿಸುತ್ತಾನೆ. ದ್ವಾರದಲ್ಲಿ ನಿಂತಿದ್ದ ಸುದರ ಕುಮಾರಿಯನ್ನು ನೋಡಿದ ಕೂಡಲೇ ಆತ ಅವಳನ್ನು ತನ್ನ ಕೈಯಿಂದ ಸೆರಹಿಡಿದು, ಕುಣಿಯುವಂತೆ ಹೇಳಿದ. ಅವಳು ಇದರಿಂದ ಹೆದರಿ ಕುಣಿಯಲು ನಿರಾಕರಿಸಿದಳು. ಕೈಹಿಡಿದ ರಾಜಕುಮಾರ ಅವಳೇ ಅಡ್ಡಹೆಸರಿಟ್ಟಿದ್ದ ಹಕ್ಕಿ ಕೊಕ್ಕಿನ ರಾಜನಾಗಿದ್ದ. ಆ ರಾಜನನ್ನು ಅಂದು ತಮಾಷೆ ಮಾಡಿದ್ದಳು.

ರಾಜಕುಮಾರ ಅವಳನ್ನು ಕೊಠಡಿಗೆ ಎಳೆದು ಕೊಂಡುಹೋಗುತ್ತಾನೆ. ಆಗ ಅಲ್ಲಿದ್ದ ಎಲ್ಲಾ ಅಡುಗೆ ಪದಾರ್ಥಗಳು ನೆಲದಲ್ಲಿ ಎಲ್ಲೆಂದರಲ್ಲಿ ಚೆಲ್ಲಾ ಪಿಲ್ಲಿಯಾಗುತ್ತದೆ. ಇದನ್ನು ಕಂಡು ನೆರೆದಿದ್ದ ಅಥಿತಿಗಳು ಜೋರಾಗಿ ನಗಲು ಪ್ರಾರಂಭಿಸಿದರು. ಇದರಿಂದ ಬಹಳ ಅವಮಾನಕ್ಕೀಡಾದ ರಾಜಕುಮಾರಿ ಅಲ್ಲಿಂದ ಹೊರಕ್ಕೆ ಓಡಿ ಹೋಗುತ್ತಾಳೆ. ಆದರೆ ಹೊರಗೆ ಹೋಗುತ್ತಿದ್ದಂತೆ ಒಬ್ಬ ಪುರುಷ ಅವಳ ಕೈಹಿಡಿದು ಮೇಲೆ ತರುತ್ತಾನೆ. ಮುಖ ಎತ್ತಿ ಆ ಪುರುಷನನ್ನು ನೋಡುವಾಗ ಅದು ಪುನಃ ಹಕ್ಕಿ ಕೊಕ್ಕಿನ ರಾಜನಾಗಿರುತ್ತಾನೆ.
ಆತ ಸಮಾದಾನದಿಂದ ಹೆದರಬೇಡ, ನಿನ್ನ ಜತೆಗಿದ್ದ ಬಿಕ್ಷುಕ ಮತ್ತು ಕುಡುಕ ಕುದುರೆ ಸವಾರ ನಾನೆ. ಇದೆಲ್ಲಾ ನಿನ್ನ ಪ್ರೀತಿಗಾಗಿ ನಾಟಕ ಮಾಡಿದ್ದು. ಇದೆಲ್ಲಾ ನಿನ್ನ ಗರ್ವ ಮತ್ತು ದುರಾಭಿಮಾನವನ್ನು ಮುರಿಯಲು ಮಾಡಿದ ನಾಟಕವಾಗಿತ್ತು ಎಂದು ಹೇಳಿದನು.

ಇದನ್ನು ಕೇಳಿದ ರಾಜಕುಮಾರಿ ಜೋರಾಗಿ ಅಳಲು ಪ್ರಾರಂಭಿಸಿದಳು. ನಾನು ನಿನ್ನ ಹೆಂಡತಿಯಾಗಲು ಯೋಗ್ಯವಲ್ಲ. ನಾನು ನಿಮಗೆ ತಂಬಾ ಅವಮಾನ ಮಾಡಿದ್ದೇನೆ ಎಂದು ಪಶ್ಚಾತಾಪದಿಂದ ನುಡಿಯುತ್ತಾಳೆ. ಅದಕ್ಕೆ ರಾಜಕುಮಾರ ಆ ಕೆಟ್ಟ ದಿನಗಳೆಲ್ಲಾ ಇತಿಹಾಸ ಸೇರಿದೆ. ನಾವೀಗ ನಮ್ಮ ಮದುವೆಯನ್ನು ಸಂಭ್ರಮಿಸೋಣ ಎಂದು ಪ್ರತಿಕ್ರಿಯಿಸಿದ.
ನಂತರ ಅವರಿಬ್ಬರ ಮದುವೆಯನ್ನು ಬಹಳ ಸಂಭ್ರಮದಿಂದ ಆಚರಿಸಿಲಾಯಿತು. ನೆರೆದಿದ್ದ ಎಲ್ಲರೂ ಅವರ ಸುಖ ಜೀವನಕ್ಕಾಗಿ ಹಾರೈಸಿದರು.

Share this Story:

Follow Webdunia kannada