ಹಿಂದಿನ ಕಾಲದಲ್ಲಿ ಒಬ್ಬ ರಾಜನಿದ್ದ. ಆತನ ಹೆಣ್ಣುಮಕ್ಕಳು ಬಹಳ ಸುಂದರವಾಗಿದ್ದರು. ಅದರಲ್ಲಿ ರಾಜನ ಕೊನೆಯ ಪುತ್ರಿ ಚಂದ್ರಮುಖಿ ಬಹಳ ಸ್ಪುರರೂಪಿಯಾಗಿದ್ದಳು. ರಾಜನ ಕೋಟೆಯ ಸಮೀಪವೇ ಒಂದು ದೊಡ್ಡ ಹಾಗು ದಟ್ಟ ಅಡವಿ ಇತ್ತು. ಆ ಅಡವಿಯ ಮದ್ಯೆ ಒಂದು ಆಳವಾದ ಸಂದರವಾದ ಕೊಳ ಇತ್ತು. ರಾಜನ ಸಣ್ಣ ಪುತ್ರಿ ಹೆಚ್ಚಿನ ಭಾರಿ ಆ ಕೊಳದ ಬದಿ ಹೋಗಿ ಆಡುತ್ತಿದ್ದಳು. ಚಿನ್ನದ ಚೆಂಡನ್ನು ಗಾಳಿಗೆ ಎಸೆದು ಅದನ್ನು ಬೊಗಸೆಯಲ್ಲಿ ಹಿಡಿಯುವುದು ಚಂದ್ರಮುಖಿಯ ನೆಚ್ಚಿನ ಆಟವಾಗಿತ್ತು. ಒಂದು ಬಾರಿ ಆ ರೀತಿ ಆಡುತ್ತಿರುವಾಗ ಆ ಚಿನ್ನದ ಚೆಂಡು ತನ್ನ ಕೈತಪ್ಪಿ ಹತ್ತಿರದ ಕೊಳಕ್ಕೆ ಬಿದ್ದಿತು. ಆ ಕೊಳ ಭಾರೀ ಆಳವಾಗಿದ್ದು, ಯಾರು ಅದರ ತಳವನ್ನು ನೋಡಲು ಸಾದ್ಯವಾಗುವಂತಿರಲಿಲ್ಲ. ಚೆಂಡು ಕೊಳಕ್ಕೆ ಬಿದ್ದದನ್ನು ಕಂಡು ಚಂದ್ರಮುಖಿ ಜೋರಾಗಿ ಅಳಲು ಪ್ರಾರಂಭಿಸಿದಳು. ಹೀಗೆ ಚಂದ್ರಮುಖಿ ಅಳುತ್ತಿರುವಾಗ ಕೊಳದಿಂದ, ರಾಜಕುಮಾರಿ ನೀವು ಏಕೆ ಅಳುತ್ತಿದ್ದೀರಿ ಎಂಬ ಪ್ರಶ್ನೆ ಹೊರಬಂದಿತು. ಚಂದ್ರಮುಖಿ ಕೊಳದತ್ತ ನೋಡುತ್ತಾಳೆ ಆಗ ಒಂದು ಮಂಡೂಕ ಭಾವಿಯಿಂದ ತನ್ನ ತಲೆ ಹೊರಹಾಕಿದ್ದನ್ನು ನೋಡಿದಳು.ಹಾ ನೀನು ಮುದಿಯ ಜಲ ಜೀವಿ, ಈಗ ಮಾತನಾಡಿದ್ದು ನಿನಾ? ನನ್ನ ಚಿನ್ನದ ಚೆಂಡು ಕೊಳಕ್ಕೆ ಬಿದ್ದಿದೆ ಅದಕ್ಕೆ ನಾನು ಅಳುತ್ತಿದ್ದೇನೆ ಎಂದು ಹೇಳಿದಳು.ಆಗ ಮಂಡೂಕ ನೀನು ಅಳಬೇಡ, ನಾನು ಆ ಚೆಂಡನ್ನು ವಾಪಸುತರುತ್ತೇನೆ. ಆದರೆ ಅದರ ಬದಲಿಗೆ ನೀನು ಏನು ಕೊಡುವಿ? ಎಂದು ಕೇಳಿತು.ಅದಕ್ಕೆ ರಾಜಕುಮಾರಿ ಚಂದ್ರಮುಖಿ, ನಿನಗೆ ಏನು ಬೇಕು ನನ್ನ ಚಿನ್ನದ ಕಿರೀಟ, ಮುತ್ತು ರತ್ನಗಳು ಏನು ಬೇಕು ಕೇಳು ಎಂದು ಉತ್ತರಿಸಿದಳು.ಆದಕ್ಕೆ ಪ್ರತಿಕ್ರಿಯಿಸಿದ ಮಂಡೂಕ ನನಗೆ ಬಟ್ಟೆ, ಕಿರೀಟಗಳ ಅಗತ್ಯವಿಲ್ಲ. ಒಂದು ವೇಳೆ ನೀನು ನನ್ನನ್ನು ಪ್ರೀತಿಸುವುದಾದರೆ ನನ್ನ ಸಹವರ್ತಿಯಾಗಿರಬೇಕು. ನನ್ನನ್ನು ನಿನ್ನ ಅರಮನೆಗೆ ಕರೆದುಕೊಂಡು ಹೋಗಿ, ನಿನ್ನೊಂದಿಗೆ ಚಿನ್ನದ ತಟ್ಟೆಯಲ್ಲಿ ಊಟಮಾಡಲು ಬಿಡಬೇಕು ಮತ್ತು ನಿನ್ನ ಹಾಸಿಗೆಯಲ್ಲಿ ಮಲಗಲು ಬಿಡಬೇಕು ಆ ಭರವಸೆ ಕೊಟ್ಟಗೆ ನಾನು ನಿನ್ನ ಚಿನ್ನದ ಚೆಂಡನ್ನು ಕೊಳದಿಂದ ವಾಪಸು ತರುತ್ತೇನೆ ಎಂದು ಹೇಳಿತು.ಆಗ ರಾಜಕುಮಾರಿ ಒಂದು ವೇಳೆ ನೀನು ನನಗೆ ಚೆಂಡನ್ನು ವಾಪಸುಕೊಟ್ಟರೆ ನಾನು ನಿನ್ನ ಬಯಕೆಯನ್ನು ಈಡೇರಿಸುತ್ತೇನೆ ಎಂದು ಹೇಳಿದಳು. ಆದರೆ ತನ್ನ ಮನಸ್ಸಿನಲ್ಲೇ ಈ ಹುಚ್ಚು ಮಂಡೂಕ ಏನು ಮಾತನಾಡುತ್ತಿದೆಯೋ, ಅದು ಬೇರೆ ಮಂಡೂಕದೊಂದಿಗೆ ಇಲ್ಲೇ ಇರಬೇಕು. ಅದು ಮಾನವರ ಜತೆ ಜೀವಿಸಲು ಸಾದ್ಯವಿಲ್ಲ ಎಂದು ಯೋಚಿಸಿದಳು. ಆದರೆ ಚಂದ್ರಮುಖಿ ಭರವಸೆ ಸಿಕ್ಕ ಕೂಡಲೇ ಮಂಡೂಕ ಕೊಳದ ಒಳಕ್ಕೆ ಹೋಗಿ ಆ ಚಿನ್ನದ ಚೆಂಡನ್ನು ಮೇಲಕ್ಕೆ ತಂದು ಹುಲ್ಲಿನ ಮೇಲೆ ಬಿಸಾಕಿತು. ರಾಜಕುಮಾರಿ ತನ್ನ ಚೆಂಡನ್ನು ಮತ್ತೊಮ್ಮೆ ನೋಡಿದ ಖುಷಿಯಲ್ಲಿ ಅದನ್ನು ಹಿಡಿದು ಅರೆಮನೆಯತ್ತ ಓಡುತ್ತಾ ಹೋದಳು. ಈ ಕಡೆ ಮಂಡೂಕ ರಾಜಕುಮಾರಿಯನ್ನು ಎಷ್ಟು ಕರೆದರೂ ಅದು ಕೇಳಿಸಲಿಲ್ಲ.
ಮರುದಿನ ರಾಜಕುಮಾರಿ ತನ್ನ ಸಹೋದರಿ ಜತೆಗೂಡಿ ತನ್ನ ಚಿನ್ನದ ತಟ್ಟೆಯಲ್ಲಿ ಊಟಮಾಡುತ್ತಿದ್ದಳು, ಆಗ ಹೊರಗಿನಿಂದ ಶಬ್ದ ಕೇಳಲು ಪ್ರಾರಂಭವಾಯಿತು. ನಂತರ ಬಾಗಿಲು ಬಡಿಯತ್ತಾ ಓ ರಾಜನ ಕೊನೆಯ ಪುತ್ರಿ ಚಂದ್ರಮುಖಿಯೇ ಬಂದು ಬಾಗಿಲು ತೆರೆ ಎಂಬ ಶಬ್ದ ಕೇಳಿಬಂದಿತು.
ರಾಜಕುಮಾರಿ ಯಾರು ನನ್ನನ್ನು ಕರೆಯುತ್ತಿದ್ದಾರೆ ಎಂದು ತಿಳಿಯಲು ಬಾಗಿಲು ತೆರೆಯುತ್ತಾಳೆ. ಆಗ ಆ ಮಂಡೂಕವನ್ನು ನೋಡುತ್ತಾಳೆ. ದಡಾರನೇ ಬಾಗಿಲು ಹಾಕಿ ಪೆಚ್ಚು ಮುಖ ಹಿಡಿದು ಕೊಂಡು ಮೇಜಿನ ಸಮೀಪ ಕೂರುತ್ತಾಳೆ. ಇದನ್ನು ಅರಿತ ರಾಜ ನಿನ್ನನ್ನು ಕರೆದದ್ದು ಯಾರಾದರು ದೈತ್ಯನೇ ಎಂದು ಕೇಳಿದನು. ಅದಕ್ಕೆ ಚಂದ್ರಮುಖಿ ಅಲ್ಲ ಅದು ದೈತ್ಯವಲ್ಲ ಅದು ಒಂದು ಕುರೂಪಿ ಮಂಡೂಕ ಎಂದು ಉತ್ತರಿಸಿದಳು. ಆ ಮಂಡೂಕಕ್ಕೆ ನಿನ್ನಿಂದ ಏನು ಬೇಕು ಎಂದು ರಾಜ ಕೇಳಿದನು. ಆಗ ರಾಜಕುಮಾರಿ ನಿನ್ನೆ ನಡೆದ ಘಟನೆ ಮತ್ತು ತಾನು ಕೊಟ್ಟ ಭರವಸೆಯ ಬಗ್ಗೆ ವಿವರವಾಗಿ ತಂದೆಗೆ ತಿಳಿಸುತ್ತಾಳೆ.
ಮತ್ತೊಮ್ಮೆ ಹೊರಗಿನಿಂಗ ಆ ಮಂಡೂಕ ಬಾಗಿಲು ತೆಗೆಯುವಂತೆ ರಾಜಕುಮಾರಿಗೆ ಹೇಳುತ್ತದೆ. ಆಗ ರಾಜ ನಿನು ಕೊಟ್ಟ ಭರವಸೆಯನ್ನು ನೀನು ಈಡೇರಿಸಲೇ ಬೇಕು ಹೋಗಿ ಬಾಗಿಲು ತೆರೆ ಎಂದು ಆಗ್ರಹಿಸಿದರು.
ರಾಜಕುಮಾರಿ ಬಾಗಿಲು ತೆರೆದಂತೆ ಮಂಡೂಕ ರಾಜಕುಮಾರಿ ಕುಳಿತಿದ್ದ ಕುರ್ಚಿಯ ಸಮೀಪಕ್ಕೆ ಹಾರಿತು. ಮತ್ತು ತನ್ನನ್ನು ಕುರ್ಚಿಯ ಮೇಲೆ ಎತ್ತಿ ಕೂರಿಸುವಂತೆ ರಾಜಕುಮಾರಿಯಲ್ಲಿ ಕೇಳಿತು. ರಾಜಕುಮಾರಿ ಇದಕ್ಕೆ ಹಿಂಜರಿದಳು ಆಗ ರಾಜ ಮಂಡೂಕವನ್ನು ಮೇಲಕೆತ್ತುವಂತೆ ರಾಜಕುಮಾರಿಗೆ ಆದೇಶ ನೀಡಿದನು.
ರಾಜಕುಮಾರಿ ಮಂಡೂಕವನ್ನು ಅರೆಮನ್ನಸ್ಸಿನಿಂದ ಮೇಲಕೆತ್ತಿ ಕುರ್ಚಿಯಲ್ಲಿ ಕೂರಿಸಿದಳು. ಕುರ್ಚಿಯಲ್ಲಿ ಕೂತ ಮಂಡೂಕ ಅವಳ ಚಿನ್ನದ ತಟ್ಟೆಯನ್ನು ತನ್ನತ್ತ ದೂಡುವಂತೆ ಹೇಳಿತು.
ರಾಜಕುಮಾರಿ ಮನಸ್ಸಿಲ್ಲದೆ ಹಾಗೆ ಮಾಡಿದಳು. ಮಂಡೂಕ ಆ ತಟ್ಟೆಯಲ್ಲಿ ಊಟಮಾಡಿ, ಸಂತೋಷವಾದಂತೆ ಕಂಡುಬಂತು. ಕೊನೆಗೆ ಮಂಡೂಕ ನನಗೆ ತೃಪ್ತಿಯಾಗಿದೆ ಆದರೆ ಯಾಕೋ ಆಯಾಸ ಎನಿಸುತ್ತಿದೆ. ನನ್ನನ್ನು ನಿನ್ನ ಮಲಗುವ ಕೊಠಡಿಗೆ ಕರೆದುಕೊಂಡು ಹೋಗಿ ನಮಗೆ ಮಲಗಲು ನಿನ್ನ ಹಾಸಿಗೆಯನ್ನು ತಯಾರು ಮಾಡು ಎಂದು ಹೇಳಿತು. ಅದನ್ನು ಕೇಳಿದ ರಾಜಕುಮಾರಿ ಜೋರಾಗಿ ಅಳಲು ಪ್ರಾರಂಭಿಸಿದಳು.
ಇದರಿಂದ ಕುಪಿತರಾದ ರಾಜ ನಿನ್ನ ಕಷ್ಟಕಾಲದಲ್ಲಿ ಸಹಾಯಮಾಡಿದವರಿಗೆ ನೀನು ಈಗ ಸಹಾಯ ಮಾಡಲೇ ಬೇಕು ಎಂದು ಆಜ್ಞೆ ಇತ್ತರು. ಬೇರೆ ದಾರಿಕಾಣದ ರಾಜಕುಮಾರಿ ಮಂಡೂಕವನ್ನು ತನ್ನ ಎರಡು ಕೈಬೆರಳುಗಳಿಂದ ಎತ್ತಿ ತನ್ನ ಕೊಠಡಿಯ ಒಂದು ಮೂಲೆಯಲ್ಲಿ ಹಾಕಿ ಮಲಗಲು ಅನುವಾದಾಗ, ನನ್ನನ್ನು ಹಾಸಿಗೆ ಮೇಲೆ ಇಡು ಇಲ್ಲವಾದರೆ ನಾನು ರಾಜನಿಗೆ ಹೇಳುತ್ತೇನೆ ಎಂದು ಮಂಡೂಕ ಗದರಿಸಿತು.
ಇದರಿಂದ ಕುಪಿತಗೊಂಡ ರಾಜಕುಮಾರಿ ಮಂಡೂಕವನ್ನು ಹಿಡಿದು ಹಿಂಸಾತ್ಮಕವಾಗಿ ಅದನ್ನು ಗೋಡೆಗೆ ಬಿಸಾಕಿದಳು. ಆದರೆ ಕೆಳಗೆ ಬೀಳುತ್ತಿದ್ದಂತೆ ಆ ಮಂಡೂಕ ಒಬ್ಬ ಸುದರವಾದ ರಾಜಕುಮಾರನಾಗಿ ಪರಿವರ್ತಿತನಾದ.
ನಂತರ ರಾಜ ನನ್ನನ್ನು ಹೇಗೆ ಕ್ರೂರ ಮಾಂತ್ರಿಕ ಮಂಡೂಕನಾಗಿ ಪರಿವರ್ತಿಸಿದ ಮತ್ತು ನಿನ್ನಿಂದಲೇ ನನ್ನನ್ನು ಬಿಡುಗಡೆ ಮಾಡಲು ಸಾದ್ಯವಿತ್ತು ಎಂಬುದರ ಬಗ್ಗೆ ವಿವರವಾಗಿ ಹೇಳುತ್ತಾನೆ.ನಂತರ ಒಂದು ದಿನ ಇಬ್ಬರೂ ಮದುವೆಯಾಗಿ ರಾಜಕುಮಾರನ ಸ್ವಂತ ಅಧಿಪತ್ಯಕ್ಕೆ ಖುಷಿಯಿಂದ ಹೋಗುತ್ತಾರೆ.