Select Your Language

Notifications

webdunia
webdunia
webdunia
webdunia

ನಿಜವಾದ ರಾಜಕುಮಾರಿ

ನಿಜವಾದ ರಾಜಕುಮಾರಿ

ಇಳಯರಾಜ

PTI
ಬಹುದಿನಗಳ ಹಿಂದೆ ಒಬ್ಬ ರಾಜಕುಮಾರನಿದ್ದ, ಆತನಿಗೆ ತಾನು ರಾಜಕುಮಾರಿಯೊಬ್ಬಳ ಜತೆ ಮದುವೆ ಆಗ ಬೇಕೆಂಬ ಬಯಕೆ ಇತ್ತು.

ಆದರೆ ರಾಜಕುಮಾರಿ ನಿಜವಾದ ರಾಜಕುಮಾರಿ ಆಗಬೇಕು ಎಂಬುದು ಆತನ ಹಠ. ಹೀಗೆ ಆತ ನಿಜವಾದ ರಾಜಕುಮಾರಿ ಹುಡುಕಾಟದಲ್ಲಿ ಜಗತ್ತಿನಾದ್ಯಂತ ಸಂಚಾರ ನಡೆಸಿದನು .

ಆದರೆ ಆತ ಕಂಡ ಯುವತಿಯರಲ್ಲಿ ಏನಾದರೊಂದು ತಪ್ಪುಗಳನ್ನು ಕಾಣುತ್ತಿದ್ದ. ಆತ ಅನೇಕ ರಾಜಕುಮಾರಿಯನ್ನು ಪತ್ತೆಮಾಡಿದ್ದ ಆದರೆ ಅವರು ನಿಜವಾದ ರಾಜಕುಮಾರಿಯೇ ಎಂಬುದನ್ನು ನಿರ್ಧರಿಸುವುದು ರಾಜಕುಮಾರನಿಗೆ ಅಸಾದ್ಯವಾಗಿತ್ತು. ಅಂತಿಮವಾಗಿ ರಾಜಕುಮಾರ ಬೇಸರದಿಂದ ತನ್ನ ಅರಮನೆಗೆ ಮರಳುತ್ತಾನೆ.

ಒಂದು ದಿನ ರಾತ್ರಿ ಜೋರಿನಿಂದ ಗುಡುಗು ಸಿಡಿಲಿನಿಂದ ಕೂಡಿದ್ದ ಭಾರಿ ಮಳೆ ಸುರಿಯುತ್ತಿತ್ತು. ಇದ್ದಕ್ಕಿದ್ದಂತೇ ಅರಮನೆಯ ಬಾಗಿಲನ್ನು ಜೋರಾಗಿ ಬಡಿಯುತ್ತಿರುವ ಶಬ್ದ ಕೇಳಿ ಬಂತು. ರಾಜ ಕುಮಾರನ ತಂದೆ ಸ್ವತ್ಹ ಹೋಗಿ ಬಾಗಿಲು ತೆರೆಯುತ್ತಾರೆ. ಬಾಗಿಲು ತೆರೆದಾಗ ಬಾಗಿಲ ಹೊರಗಡೆ ಸುಂದರವಾದ ಒಬ್ಬಳು ರಾಜಕುಮಾರಿ ನಿಂತಿದ್ದಳು. ಅವಳು ಮಳೆಯಿಂದ ಸುಪೂರ್ಮವಾಗಿ ತೊಯ್ದು ಹೋಗಿದ್ದಳು. ನಾನು ಒಳಗೆ ಬರಬಹುದೇ ನಾನು ನಿಜವಾದ ರಾಜಕುಮಾರಿ ಎಂದು ಹೇಳಿದಳು.

ಅದರ ಬಗ್ಗೆ ಬಹು ಬೇಗ ಗೊತ್ತಾಗುತ್ತದೆ ಎಂದು ಮನಸ್ಸಿನಲ್ಲೇ ಯೋಚಿಸಿದ ರಾಜಕುಮಾರನ ತಾಯಿ ಅವಳನ್ನು ಒಳಗೆ ಕರೆಸುತ್ತಾರೆ. ರಾಜಕುಮಾರನ ತಾಯಿ ನೇರವಾಗಿ ಮಲಗುವ ಕೊಠಡಿಗೆ ಹೋಗಿ, ಮಂಚಕ್ಕೆ ಹೊದಿಸಿದ್ದ ಎಲ್ಲಾ ಬಟ್ಟೆಗಳನ್ನು ತೆಗೆದಳು ಮತ್ತು ಮಂಚದ ಮೇಲೆ ಸಣ್ಣ ಗಾತ್ರದ 3 ಬಟಾಣಿಗಳನ್ನು ಹಾಕುತ್ತಾಳೆ. ಅದರ ಮೇಲೆ ನಂತರ ಅದರ ಮೇಲುಗಡೆ ಒಂದರ ಮೇಲೊಂದರಂತೆ 20 ಚಾಪೆಗಳನ್ನು ಹಾಕುತ್ತಾಳೆ. ಅದರ ಮೇಲೆ 20 ಗರಿಯಿಂದ ಕೂಡಿರುವ ಹೊದಿಕೆಯನ್ನು ಹಾಕುತ್ತಾಳೆ. ಈ ಮಂಚದ ಮೇಲೆ ರಾಜಕುಮಾರಿ ಮಲಗ ಬೇಕಾಗಿರುತ್ತದೆ.

ಮರುದಿಮ ಬೆಳಗ್ಗೆ ರಾಜಕುಮಾರನ ತಾಯಿ ಹೇಗೆ ನಿನ್ನೆ ರಾತ್ರಿ ಮಲಗಿದೆ ಎಂದು ರಾಜಕುಮಾರಿಯನ್ನು ಪ್ರಶ್ನಿಸುತ್ತಾಳೆ. ಆಗ ರಾಜಕುಮಾರಿ ಬಹಳ ಕೆಟ್ಟದಾಗಿ ನಾನು ನಿದ್ರೆ ಮಾಡಿದೆ. ನಿನ್ನೆ ಇಡೀ ರಾತ್ರಿ ನನಗೆ ಸರಿಯಾಗಿ ನಿದ್ರೆ ಮಾಡಲಾಗಲಿಲ್ಲ. ನನ್ನ ಮಂಚದ ಕೆಳಗೆ ಏನು ಇತ್ತು ಎಂಬುದು ನನಗೆ ಗೊತ್ತಿಲ್ಲ. ಆದರೆ ಯಾವುದೋ ಗಟ್ಟಿ ವಸ್ತು ನನ್ನ ಮಂಚದಲ್ಲಿತ್ತು ಎಂದು ಹೇಳಿದಳು.

ಇದನ್ನು ಕೇಳಿದ ರಾಜಕುಮಾರನ ತಾಯಿ ಇವಳು ನಿಜವಾದ ರಾಜಕುಮಾರಿ ಎಂದು ನಿರ್ಧರಿಸಿದಳು. ಏಕೆಂದರೆ 20 ಚಾಪೆ ಮತ್ತು 20 ಗರಿಗಳಿಂದ ಕೂಡಿದ್ದ ಹೊದಿಕೆ ಇದ್ದರೂ ಕಠಿಣ ವಸ್ತುವಿನ ಇರುವಿಕೆಯನ್ನು ಅರಿಯಲು ಸಾದ್ಯವಾಗುವುದು ಒಬ್ಬ ನಿಜವಾದ ರಾಜಕುಮಾರಿಗೆ ಮಾತ್ರ ಸಾದ್ಯ.
ಇದರ ಪ್ರಕಾರ ರಾಜಕುಮಾರ ಅವಳೊಂದಿಗೆ ಮದುವೆ ಯಾಗುತ್ತಾನೆ.

Share this Story:

Follow Webdunia kannada