ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ ಆತನಿಗೆ 7 ಜನ ಗಂಡು ಮಕ್ಕಳು ಇದ್ದರು. ಆದರೆ ಹೆತ್ತವರು ತಮಗೆ ಒಂದು ಹೆಣ್ಣು ಮಗಳು ಇಲ್ಲ ಎಂದು ಬಹಳ ಕೊರಗುತ್ತಿದ್ದರು. ಅಂತಿಮವಾಗಿ ಅವರಿಗೆ ಒಂದು ಹೆಣ್ಣು ಮಗು ಹುಟ್ಟಿತು. ಆದರೆ ಆ ಹೆಣ್ಣು ಮಗು ಬಹಳ ದುರ್ಬಲ ಹಾಗು ಸಣ್ಣಗಾತ್ರದ್ದಾಗಿದ್ದುದು ಹೆತ್ತವರನ್ನು ಚಿಂತಾಕ್ರಾಂತರನ್ನಾಗಿ ಮಾಡಿಸಿತು. ನಂತರ ಹೆತ್ತವರು ಅವಳಿಗೆ ಪವಿತ್ರ ಸ್ಥಾನ ಮಾಡಿಸಲು ನಿರ್ಧರಿಸಿದರು.ತರಾತುರಿಯಲ್ಲಿ ತಂದೆ ಒಬ್ಬ ಮಗನನ್ನು ಪವಿತ್ರ ನದಿಯಿಂದ ಸ್ವಲ್ಪ ನೀರು ತರಲು ಕಳುಹಿಸಿದನು. ಆದರೆ ಇವನ ಜತೆಗೆ ಉಳಿದ 6 ಗಂಡು ಮಕ್ಕಳು ಆ ನದಿಯ ಕಡೆ ಹೋದರು. ಪ್ರತಿಯೊಬ್ಬರೂ ಕೊಡಕ್ಕೆ ನೀರು ತಂಬಿಸುವ ಭರದಲ್ಲಿ ಆ ಕೊಡ ನದಿಯಲ್ಲಿ ಬಿದ್ದಿತು. ಇದರಿಂದ ಮಕ್ಕಳಿಗೆ ಹೆದರಿಕೆಯಾಯಿತು. ಮನೆಗೆ ಹೋಗಿ ತಂದೆಯನ್ನು ಹೇಗೆ ಎದುರಿಸವುದು ಎಂದು ಯೋಚಿಸಿ ಭಯಬೀತರಾದರು.ಈ ಕಡೆ ಮಕ್ಕಳು ಬರದಿದ್ದುದನ್ನು ಕಂಡ ತಂದೆ ಸಹನೆ ಕಳೆದು ಕೊಳ್ಳಲಾರಂಭಿಸಿದನು. ತನ್ನ ಮುದ್ದಿನ ಹೆಣ್ಣು ಮಗು ಪವಿತ್ರಸ್ಥಾನವಿಲ್ಲದೆ ಸಾಯುತ್ತದೆ ಎಂಬ ಆತಂಕದಿಂದ ಭಯಗೊಂಡ ತಂದೆ ಕೋಪದಿಂದ ನನ್ನ ಗಂಡು ಮಕ್ಕಳು ಕಾಗೆಗಳಾಗಿ ಪರಿವರ್ತನೆ ಯಾಗಲಿ ಎಂದು ಶಾಪ ಇಟ್ಟನು. ಇದಾದ ಕೂಡಲೇ ಅವನ ಮನೆಯ ಮೇಲಿಂದ 7 ಕಾಗೆಗಳು ಕೂಗಾಡುತ್ತಾ ಹಾರುತ್ತಾ ಇರುದನ್ನು ಕಂಡನು. ತಮ್ಮ ಶಾಪವನ್ನು ಹಿಂತೆಗೆದು ಕೊಳ್ಳಲು ಸಾದ್ಯವಾಗದ ಹೆತ್ತವರು, ಕಳೆದು ಹೋದ ಮಕ್ಕಳಿಗಾಗಿ ಮರುಕ ಪಟ್ಟರು. ಆದರೆ ತಮ್ಮ ಮಗಳು ಬಲಾಡ್ಯವಾಗಿ, ಸುಂದರವಾಗಿ ಬೆಳೆಯುತ್ತಿದ್ದುದನ್ನು ಕಂಡು ಆ ದುಃಖವನ್ನು ಮರೆತರು.ಬಹಳ ದಿನದ ವರೆಗೆ ತನಗೆ ಸಹೋದರರು ಇದ್ದಾರೆ ಎಂಬ ಅರಿವಿಲ್ಲದ ಹೆಣ್ಮು ಮಗಳು. ಒಂದು ದಿನ ಜನರು ಅವಳ ಅಣ್ಣಂದಿರ ಕುರಿತು ಮಾತನಾಡುತ್ತಿದ್ದುದು ಕಿವಿಗೆ ಬಿದ್ದಿತು. ಇದರಿಂದ ಬಹಳ ಬೇಸರಗೊಂಡ ಆಕೆ ತನ್ನ ತಂದೆಯಲ್ಲಿ ಅಣ್ಣಂದಿರ ಬಗ್ಗೆ ಕೇಳಿದಳು. ತಂದೆ ಬೇರೆ ದಾರಿ ಕಾಣದೆ ಆ ದುಃಖತಪ್ತ ಕಥೆಯನ್ನು ಹೇಳಿದನು.ನಂತರ ಆ ಕುಮಾರಿ ತನ್ನ ಅಣ್ಣಂದಿರನ್ನು ಹುಡುಕಿ ತರಲು ನಿರ್ಧರಿಸಿದಳು ಮತ್ತು ಒಂದು ದಿನ ತನ್ನ ಹೆತ್ತವರ ಸ್ಮರಣಾರ್ತವಾಗಿ ಉಂಗುರವನ್ನು ತೆಗೆದು ಕೊಂಡು ತನ್ನ ಅಣ್ಣಂದಿರನ್ನು ಮುಕ್ತವಾಗಿಸಲು ರಹಸ್ಯವಾಗಿ ಮನೆಯಿಂದ ಹೊರ ಬಿದ್ದಳು.ಹೀಗೆ ಹುಡುಕುತ್ತಾ ಹುಡುಕುತ್ತಾ ಕುಮಾರಿ ಸೂರ್ಯನ ಎದುರಿಗೆ ಬಂದಳು. ಆದರೆ ಅದು ಬಹಳ ಬಿಸಿ ಮತ್ತು ಭಯಾನಕವಾಗಿತ್ತು. ಕೂಡಲೇ ಅವಳು ಅಲ್ಲಿಂದ ಓಡಿ ಚಂದ್ರನ ಎದುರಿಗೆ ಬಂದಳು. ಆದರೆ ಅದು ಬಹಳ ತಂಪು ಮತ್ತು ಕೆಟ್ಟದೃಷ್ಟಿಯಿಂದ ನೋಡುತ್ತಿತ್ತು. ಇದನ್ನು ಕಂಡು ಕೂಡಲೇ ಅಲ್ಲಿಂದ ಕಾಲು ಕಿತ್ತು, ನಕ್ಷತ್ರಗಳ ಹತ್ತಿರ ಹೋದಳು. ನಕ್ಷತ್ರಗಳು ಬಹಳ ಸ್ನೇಹಪೂರ್ವಕಾವಗಿದ್ದವು. ಬೆಳಗಿನ ನಕ್ಷತ್ರ ಇವಳಿಗೆ ಒಂದು ವಕ್ರ ಮೂಳೆಯನ್ನು ಕೊಡುತ್ತಾ, ಈ ಮೂಳೆ ನಿನ್ನ ಅಣ್ಣಂದಿರು ಇರುವ ಗಾಜಿನ ಕೋಟೆಯ ಬೀಗವನ್ನು ತೆರೆಯಲು ಸಹಕರಿಸುತ್ತದೆ ಎಂದು ಹೇಳಿತು.
ಅದನ್ನು ತನ್ನ ಕರವಸ್ತ್ರದಲ್ಲಿ ಸುತ್ತಿ, ಗಾಜಿನ ಕೋಟೆಯ ಕಡೆ ನಡೆದಳು. ಗಾಜಿನ ಕೋಟೆಯ ಹತ್ತಿರ ತಲುಪಿದ ಕುಮಾರಿ ಅದರ ಬೀಗ ಮುದ್ರಿತ ಬಾಗಿಲನ್ನು ತೆಗೆಯಲು ಆ ಸಣ್ಣ ಮೂಳೆಗಾಗಿ ತನ್ನ ಕರವಸ್ತ್ರವನ್ನು ಬಿಡಿಸಿದಳು. ಆದರೆ ಆ ಕರವಸ್ತ್ರದಲ್ಲಿ ಆ ಸಣ್ಣ ಮೂಳೆ ಕಾಣಲಿಲ್ಲ. ಅದು ಕಳೆದು ಹೋಗಿತ್ತು. ಇದರಿಂದ ಬೇಸರ ಗೊಂಡ ಕುಮಾರಿ ಅಂತಿಮವಾಗಿ ತನ್ನ ಕೈ ಬೆರಳನ್ನು ಆ ಬೀಗದ ರಂದ್ರದೊಳಗೆ ಹಾಕಿದಳು ಅದೃಷ್ಟವಶಾತ್ ಬಾಗಿಲಿನ ಬೀಗ ತೆರೆಯಲ್ಪಟ್ಟಿತು.
ಅವಳು ಆ ಕೋಟೆಯೊಳಗೆ ಪ್ರವೇಶಿಸಿದಂತೆ ಒಬ್ಬ ಕುಬ್ಜ ಎದುರಾಗಿ ನಿನಗೆ ಏನು ಬೇಕು? ಎಂದು ಕೇಳುತ್ತಾನೆ. ನನಗೆ ನನ್ನ ಸಹೋದರರು, 7 ಕಾಗೆಗಳು ಬೇಕು ಎಂದು ಕುಮಾರಿ ಉತ್ತರಿಸಿದಳು. ಆಗ ಆ ಕುಬ್ಜ ನನ್ನ ಕಾಗೆಗಳು ಹೊರಗೆ ಹೋಗಿದ್ದಾವೆ. ಅವು ಬರುವವರೆಗೆ ನೀನು ಕಾಯಬಹುದು ಎಂದು ಹೇಳಿತು.
ನಂತರ ಆ ಕುಬ್ಜ 7 ಕಾಗೆಗಳಿಗೆ ತಿನ್ನಲು 7 ತಟ್ಟೆಯಲ್ಲಿ ಮತ್ತು ಲೋಟದಲ್ಲಿ ಆಹಾರ ತಂದಿಟ್ಟಳು. ಕುಮಾರಿ ಪ್ರತಿ ತಟ್ಟೆಯಿಂದ ಸ್ವಲ್ಪ ಆಹಾರ ಸೇವಿಸಿದಳು ಮತ್ತು ಪ್ರತಿ ಲೋಟೆಯಿಂದ ಸ್ವಲ್ಪ ನೀರನ್ನು ಕುಡಿದಳು. ಕೊನೆಯ ಲೋಟೆಯಲ್ಲಿ ತನ್ನ ಜತೆಗೆ ತಂದಿದ್ದ ಉಂಗುರವನ್ನು ಹಾಕಿದಳು.
ಆಗ ಕಾಗೆಗಳು ಕೂಗಾಡುವ ಶಬ್ದ ಕೇಳಲು ಪ್ರಾರಂಭಿಸಿತು. ಕೂಡಲೇ ಕುಮಾರಿ ಅಡಗಿ ಕೂತಳು. ಕಾಗೆಗಳು ಬಂದು ತಮ್ಮ ಆಹಾರವನ್ನು ತಿನ್ನಲು ತಯಾರಾದವು. ಆಗ ಒಂದು ಕಾಗೆ ಇನ್ನೊಂದರ ಹತ್ತಿರ ಯಾರೋ ನನ್ನ ಆಹಾರವನ್ನು ಸೇವಿಸುತ್ತಿದ್ದಾರೆ?. ಯಾರೋ ನನ್ನ ಲೋಟದಿಂದ ನೀರು ಕುಡಿಯುತ್ತಿದ್ದಾರೆ? ಇದರಲ್ಲಿ ಮಾನವ ಬಾಯಿಯ ವಾಸನೆ ಇದೆ ಎಂದು ಹೇಳಿತು.
7ನೇ ಕಾಗೆ ತನ್ನ ಲೋಟದಿಂದ ಕುಡಿಯುತ್ತಿದ್ದಾಗ ಉಂಗುರ ಕೆಳಗೆ ಬಿತ್ತು. ಅದನ್ನು ನೋಡಿದ ಕಾಗೆ ಅದು ತನ್ನ ಹೆತ್ತವರ ಉಂಗುರ ಎಂಬುದನ್ನು ಗುರುತಿಸಿತು ಮತ್ತು ದೇವರೇ ನನ್ನ ತಂಗಿ ಇಲ್ಲಿ ಇರುವಂತೆ ಅನುಗ್ರಹಿಸು ಆಗ ನಾವು ಬಚಾವಾಗುತ್ತೇವೆ ಎಂದು ಹೇಳಿತು.
ಇದನ್ನು ಕೇಳಿದ ಕೂಡಲೇ ಅವಿತಿದ್ದ ಕುಮಾರಿ ಎದುರು ಬಂದಳು. ಕೂಡಲೇ ಕಾಗೆಗಳು ತಮ್ಮ ಮಾನವ ರೂಪಕ್ಕೆ ವಾಪಾಸಾದರು ಮತ್ತು ತಮ್ಮ ತಂಗಿಯನ್ನು ಅಪ್ಪಿಕೊಂಡರು. ನಂತರ ಖುಷಿಯಿಂದ ಎಲ್ಲರೂ ಒಟ್ಟಿಗೆ ತಮ್ಮ ಮನೆಗೆ ತೆರಳಿದರು.