Webdunia - Bharat's app for daily news and videos

Install App

ಏಂಜೆಲಾ

Webdunia
ಒಂದು ಊರಿನಲ್ಲಿ ಗಂಡ ಹೆಂಡತಿ ವಾಸಿಸುತ್ತಿದ್ದರು ಅವರಿಗೆ ಮಕ್ಕಳು ಇಲ್ಲ ಎಂಬ ಕೊರಗು ಇತ್ತು. ಈ ಗಂಡ ಹೆಂಡದಿರು ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು.

ಆ ಮನೆ ಹಿಂದುಗಡೆ ಒಂದು ಸಣ್ಣ ಕಿಟಕಿ ಇತ್ತು. ಅದರಿಂದ ಒಬ್ಬ ಸುಂದರವಾದ ಉದ್ಯಾನವನ್ನು ನೋಡ ಬಹುದಿತ್ತು. ಆ ಉದ್ಯಾವನವನ ಸುಂದರ ಹೂಗಳು ಮತ್ತು ತರಕಾರಿಗಳಿಂದ ಕೂಡಿತ್ತು. ಆದರೆ ಅದರ ಸುತ್ತ ಕೋಟೆ ಆವರಿಸಿತ್ತು. ಆ ಕೋಟೆಯ ಒಳಗೆ ಹೋಗಲು ಹೆದರುತ್ತಿದ್ದರು ಕಾರಣ ಅಲ್ಲಿ ಒಬ್ಬಳು ಕೆಟ್ಟ ಮಾಟಗಾತಿ ಇದ್ದಳು. ಅವಳಿಗೆ ಎಲ್ಲರೂ ಹೆದರುತ್ತಿದ್ದರು.

ಒಂದು ದಿನ ಆ ಮನೆಯ ಒಡತಿ ಕಿಟಕಿ ಪಕ್ಕದಲ್ಲಿ ಕೂತು ಆ ಉದ್ಯಾನ ವನವನ್ನು ನೋಡುತ್ತಿದ್ದಳು. ಅಲ್ಲಿ ಅವಳು ಉತ್ತಮ ಮೂಲಂಗಿ ದಷ್ಟ ಪುಷ್ಟವಾಗಿ ಬೆಳೆದಿರುವುದನ್ನು ನೋಡಿ ಆಸೆ ಪಟ್ಟಳು ಆದರೆ ಅದನ್ನು ತೆಗೆದು ಕೊಂಡು ಬರಲು ಸಾದ್ಯವಿರಲಿಲ್ಲ ಏಕೆಂದರೆ ಆ ಕೋಟೆಯಲ್ಲಿ ಮಾಟಗಾತಿ ಇದ್ದಳು. ಇದರಿಂದ ಮನೆಯ ಒಡತಿ ಬಹಳ ಬೇಸರ ಗೊಂಡು ಅಳಲು ಶುರು ಹಚ್ಚಿದಳು.

ಗಂಡನಿಗೆ ಹೆಂಡತಿಯ ದುಖಃವನ್ನು ನೋಡಲು ಸಾದ್ಯವಾಗಲಿಲ್ಲ. ಆದದ್ದು ಆಗಲಿ ಎಂದು ಎಣಿಸಿ ಆ ಮೂಲಂಗಿಯನ್ನು ಕೊಂಡು ಬರಲು ಸಂಜೆ ವೇಳೆ ಕೋಟೆಯತ್ತ ಹೋಗಿ ಅದನ್ನು ತೆಗೆದು ಕೊಂಡು ಬಂದು ಹೆಂಡತಿಗೆ ಕೊಟ್ಟ ಹೆಂಡತಿಗೆ ಅದನ್ನು ನೋಡಿ ಬಹಳ ಸಂತೋಷವಾಗಿ ಅದರಿಂದ ಪದಾರ್ಥವನ್ನು ಮಾಡಿ ತಿಂದರು.

ಆ ಪದಾರ್ಥ ಎಷ್ಟು ರುಚಿಯಾಗಿತ್ತೆಂದರೆ ಹೆಂಡತಿಗೆ ಅದನ್ನು ಇನ್ನೊಮ್ಮೆ ತಿನ್ನಬೇಕೆಂಬ ಬಯಕೆ ಆಯಿತು. ಹೆಂಡತಿಯನ್ನು ನಿರಾಶೆ ಗೊಳಿಸಲು ಬಯಸದ ಗಂಡ ಅದನ್ನು ಮತ್ತೊಮ್ಮೆ ತರಲು ಕೋಟೆ ಕಡೆ ಹೋದ. ಕೋಟೆಯನ್ನು ಹತ್ತಿದಾಗ ಎದುರಿಗೆ ಆ ಮಾಟಗಾತಿ ಎದುರಾದಳು. ಮಾಟಗಾತಿ ಈತ ಮೂಲಂಗಿ ಕದಿಯುದನ್ನು ನೋಡಿ ಕುಪಿತ ಗೊಂಡಳು. ಇದರಿಂದ ಗಂಡನಿಗೆ ಬಹಳ ಹೆದರಿಕೆಯಾಗಿ ನಾನು ಉದ್ದೇಶಪೂರ್ವಕವಾಗಿ ಇದನ್ನು ಕದಿಯಲಿಲ್ಲ ನನ್ನ ಹೆಂಡತಿಗೆ ಇದಕ್ಕಾಗಿ ಕೊರಗುತ್ತಿದ್ದಾಳೆ ಅದಕ್ಕಾಗಿ ನಾನು ಬಂದೆ ನನ್ನನ್ನು ಕ್ಷಮಿಸು ಎಂದು ಅಂಗಲಾಚಿದ.

ಆಗ ಮಾಟಗಾತಿ ನಾನು ನಿನಗೆ ಈ ಎಲ್ಲಾ ಮೂಲಂಗಿಯನ್ನು ಕೊಂಡಯ್ಯಲು ಕೊಂಡೊಯ್ಯಲು ಬಿಡುತ್ತೇನೆ ಆದರೆ ನೀನು ನನಗೆ ನಿನ್ನ ಮೊದಲ ಮಗುವನ್ನು ನನಗೆ ಒಪ್ಪಿಸ ಬೇಕು ಎಂದು ಷರತ್ತು ಹಾಕಿದಳು.

ಹಿಂದು ಮುಂದು ಯೋಚಿಸದೆ ಗಂಡ ಇದಕ್ಕೆ ಒಪ್ಪಿದ. ಸ್ವಲ್ಪ ಸಮಯದ ನಂತರ ಅವರಿಗೆ ಹೆಣ್ಣು ಮಗು ಹುಟ್ಟಿತು. ಅದನ್ನು ಆ ಮಾಟಗಾತಿ ತನ್ನ ಕೋಟೆಗೆ ಕೊಂಡೊಯ್ದಳು. ಅದಕ್ಕೆ ಮಾಟಗಾತಿ ಏಂಜೆಲಾ ಎಂದು ಹೆಸರಿಟ್ಟಳು.

ಆ ಹುಡುಗಿ ದೊಡ್ಡವಳಾದಳು, ಅವಳು ಬಹಳ ಸುಂದರಿಯಾಗಿದ್ದಳು. ಏಂಜೆಲಾ 12 ವರ್ಷದವಳಾದಾಗ ಅವಳನ್ನು ಒಂದು ಎತ್ತರವಾದ ಗೋಪುರದ ಮೇಲೆ ಇರಿಸಿದಳು. ಆ ಗೋಪುರಕ್ಕೆ ಯಾವುದೇ ಮೆಟ್ಟಿಲುಗಳು ಅಥವ ಬಾಗಿಲುಗಳು ಇರಲಿಲ್ಲ ಕೇವಲ ಕಿಟಕಿ ಮಾತ್ರವಿತ್ತು.

ಮಾಟಗಾತಿ ಅವಳನ್ನು ಬೇಟಿಯಾಗ ಬೇಕೆಂದಿದ್ದರೆ, ಆ ಗೋಪುರದ ಕೆಳಗೆ ನಿಂತು ಏಂಜೆಲಾ ಏಂಜೆಲಾ ನಿನ್ನ ಕೂದಲನ್ನು ಕೆಳಗೆ ಬಿಡು ಎಂದು ಕೂಗು ಕೊಡುತ್ತಿದ್ದಳು. ಏಂಜೆಲಾ ಸುಂದರವಾದ ಗಟ್ಟಿ ಮುಟ್ಟಾದ ಚಿನ್ನದ ಕೂದಲನ್ನು ಹೊಂದಿದ್ದಳು. ಹುಡುಗಿ ಕಿಟಕಿಯ ಬಳಿ ಬಂದು ತನ್ನ ಕೂದಲನ್ನು ಕೆಳಗೆ ಬಿಡುತ್ತಿದ್ದಳು ಮತ್ತು ಅದನ್ನು ಹಿಡಿದು ಕೊಂಡು ಮಾಟಗಾತಿ ಮೇಲೆ ಬರುತ್ತಿದ್ದಳು.

ಹೀಗೆ ಕೆಲವು ವರ್ಷ ಕಳೆದ ನಂತರ ಆ ಅರಣ್ಯದ ಕಡೆ ರಾಜಕುಮಾರನ ಮಗ ಬರುತ್ತಾನೆ. ಆತ ಹಾದುಹೋಗುತ್ತಿರುವಾಗ ಅವನ ಕಿವಿಗೆ ಇಂಪಾದ ಹಾಡು ಕೇಳಿಸುತ್ತದೆ ಅದು ಏಂಜೆಲಾನ ಮಧುರ ಕಂಠವಾಗಿತ್ತು. ರಾಜಕುವರ ಆ ಗೋಪುರವನ್ನು ಹತ್ತಲು ಪ್ರಯತ್ನಿಸುತ್ತಾನೆ ಆದರೆ ಅದಕ್ಕೆ ಬಾಗಿಲು ಇಲ್ಲದನ್ನು ಕಾಣದೆ ನಿರಾಶೆಯಿಂದ ತನ್ನ ಅರಮನೆಗೆ ವಾಪಸಾಗುತ್ತಾನೆ. ಆದರೆ ಅವನಿಗೆ ಆ ಇಂಪಾಗಿ ಹಾಡಿದ ಹುಡುಗಿಯನ್ನು ನೋಡುವ ಹೆಬ್ಬಯಕೆ ಉಂಟಾಗುತ್ತದೆ.

ಹೀಗೆ ಒಂದು ದಿನ ಅವನು ಗೋಪುರದ ಮುಂದೆ ನಿಂತಿದ್ದಾಗ ಮಾಟಗಾತಿ ಬರುವುದನ್ನು ನೋಡುತ್ತಾನೆ. ಅವಳು ಆ ಗೋಪುರದ ಕೆಳಗೆ ಬಂದು ಏಂಜೆಲಾ ಏಂಜೆಲಾ ನಿನ್ನ ಕೂದಲನ್ನು ಕೆಳಗೆ ಬಿಡು ಎಂದು ಕರೆಯುದನ್ನು ಕೇಳುತ್ತಾನೆ ಮತ್ತು ಏಂಜೆಲಾ ತನ್ನ ಕೂದಲನ್ನು ಕೆಳಗೆ ಹಾಕಿ ಅದರ ಮುಖಾಂತರ ಮಾಟಗಾತಿ ಮೇಲೇರುದನ್ನು ನೋಡುತ್ತಾನೆ.

ಮರು ದಿನ ರಾಜಕುವರ ಗೋಪುರದ ಕೆಳಗೆ ನಿಂತು ಏಂಜೆಲಾ ಏಂಜೆಲಾ ನಿನ್ನ ಕೂದಲನ್ನು ಕೆಳಗೆ ಬಿಡು ಎಂದು ಕೂಗುತ್ತಾನೆ. ಆಗ ಏಂಜೆಲಾ ಕಿಟಕಿ ಸಮೀಪ ಬಂದು ತನ್ನ ಕೂದಲನ್ನು ಕೆಳಗೆ ಬಿಡುತ್ತಾಳೆ. ರಾಜಕುವರನನ್ನು ನೋಡಿ ಮೊದಲಿಗೆ ಹೆದರುತ್ತಾಳೆ ಆದರೆ ರಾಜಕುವರನ ಪ್ರೀತಿಯ ಮಾತುಗಳನ್ನು ಕೇಳಿ ಅವನನ್ನು ಮೇಲಕ್ಕೆ ಬರಲು ಬಿಡುತ್ತಾಳೆ.

ಏಂಜೆಲಾಳನ್ನು ನೋಡಿ ರಾಜಕುವರ ತನ್ನನ್ನು ಮದುವೆಯಾಗುವೆಯಾ ಎಂದು ಕೇಳುತ್ತಾನೆ.

ಸುಂದರವಾದ ರಾಜಕುವರನನ್ನು ನೋಡಿ ಮದುವೆಯಾಗಲು ಒಪ್ಪುತ್ತಾಳೆ ಮತ್ತು ಗೋಪುರದಿಂದ ಕೆಳಗೆ ಇಳಿಯುವುದಕ್ಕೆ ಉಪಾಯ ಹುಡುಕುತ್ತಾರೆ. ರಾಜಕುವರ ಪ್ರತಿ ಸಲ ಬರುವಾಗ ರೇಷ್ಮೆ ತುಂಡನ್ನು ತರಲು ಹೇಳುತ್ತಾಳೆ ಮತ್ತು ನಾನು ಅದರಿಂದ ಏಣಿಯನ್ನು ತಯಾರಿಸಿ ಕೆಳಗೆ ಬರುತ್ತೇನೆ ಎಂದು ಉಪಾಯ ಹೂಡುತ್ತಾರೆ ಮತ್ತು ಸಂಜೆವರೆಗೆ ಭೇಟಿಯಾಗದಿರುವ ಶಪತ ಮಾಡುತ್ತಾರೆ.

ದಿನದಂದು ಆ ಮಾಟಗಾತಿ ಬರುತ್ತಾಳೆ. ಆದರೆ ಏಂಜೆಲಾ ಬಾಯಿ ತಪ್ಪಿ ಅಜ್ಜಿ ನೀವು ಮೇಲೆ ಬರಲು ಇಷ್ಟು ಕಷ್ಟ ಪಡುತ್ತೀರಿ ಆದರೆ ರಾಜಕುವರ ನಿಮಿಷದಲ್ಲಿ ಇದನ್ನು ಹತ್ತಿ ಮೇಲಕ್ಕೆ ಬರುತ್ತಾನೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಮಾಟಗಾತಿ ಕುಪಿತಗೊಂಡು ಅವಳನ್ನು ಹಿಗ್ಗಾ ಮುಗ್ಗು ಬಯ್ದು ಅವಳ ಸುದರವಾದ ಕೂದಲನ್ನು ತುಂಡರಿಸಿ ದೂರದ ಮರುಭೂಮಿ ಕಡೆ ಬಿಡುತ್ತಾಳೆ. ಅಲ್ಲಿ ಏಂಜೆಲಾ ಬಹಳ ದುಸ್ಥಿತಿಯಿಂದ, ದುಖಃದಿಂದ ದಿನ ಕಳೆಯುತ್ತಾಳೆ.

ಇದರ ಅರಿವಿಲ್ಲದ ರಾಜಕುವರ ಸಂಜೆ ಗೋಪುರದ ಕೆಳಗೆ ಬಂದು ಏಂಜೆಲಾ ಏಂಜೆಲಾ ನಿನ್ನ ಕೂದಲನ್ನು ಕೆಳಗೆ ಬಿಡು ಎಂದು ಕೂಗುತ್ತಾನೆ. ಮೇಲಿದ್ದ ಮಾಟಗಾತಿ ಕೂದಲನ್ನು ಕೆಳಗೆ ಬಿಡುತ್ತಾಳೆ. ಮೇಲೇರಿದ ರಾಜಕುವರ ಅವಳನ್ನು ನೋಡಿ ಗಾಬರಿಗೊಳ್ಳುತ್ತಾನೆ. ಮಾಟಗಾತಿ ಸಿಟ್ಟಿನಿಂದ ನಾನು ಅವಳನ್ನು ದೂರದ ಮರುಭೂಮಿಗೆ ಬಿಟ್ಟಿದ್ದೇನೆ. ನೀನು ಇನ್ನು ಅವಳನ್ನು ನೋಡಲು ಸಾದ್ಯವಿಲ್ಲ ಎಂದು ಹೇಳುತ್ತಾಳೆ.

ಇದರಿಂದ ವಿಚಲಿತನಾದ ರಾಜಕುವರ ದುಖಃದಿಂದ ಗೋಪುರದಿಂದ ಕೆಳಗೆ ಹಾರುತ್ತಾನೆ. ಹಾರುವ ಬರದಲ್ಲಿ ಅವನ ಕಣ್ಣಿಗೆ ಮುಳ್ಳು ತಾಕಿ ಕುರುಡನಾಗುತ್ತಾನೆ. ಆತ ಏಂಜೆಲಾ ಕಳೆದು ಹೋಗಿದ್ದರ ದುಖಃದಿಂದ ಅರಣ್ಯದಲ್ಲೆಲ್ಲಾ ತಿರುಗಾಡುತ್ತಾನೆ. ಕೆಲವು ವರ್ಷ ಅದೇ ರೀತಿ ತಿರುಗಾಡಿ ಅಂತಿಮವಾಗಿ ಏಂಜೆಲಾ ಇದ್ದ ಮರುಭೂಮಿ ಮುಟ್ಟುತ್ತಾನೆ.

ಅಲ್ಲಿ ಅವನು ಏಂಜೆಲಾನ ಸುಮದುರ ಕಂಠದಿಂದ ಹಾಡುವುದನ್ನು ಕೇಳಿಸಿಕೊಳ್ಳುತ್ತಾನೆ ಮತ್ತು ಆ ದಿಕ್ಕಿನಲ್ಲಿ ನಡೆಯುತ್ತಾನೆ. ಏಂಜೆಲಾ ರಾಜಕುವರನ ಗುರುತು ಹಿಡಿಯುತ್ತಾಳೆ ಮತ್ತು ಅವನ ಮೇಲೆ ಬಿದ್ದು ಜೋರಾಗಿ ಅಳುತ್ತಾಳೆ. ಅವಳ ಕಣ್ಣೀರು ರಾಜಕುವರನ ಕಣ್ಣಿಗೆ ಬೀಳುತ್ತದೆ. ಅದರಿಂದ ರಾಜಕುವರನ ಕಣ್ಣು ಸರಿಯಾಗಿ ಮುಂಚಿನಂತೆ ಕಾಣಲು ಸಾದ್ಯವಾಗುತ್ತದೆ.

ಅವರಿಬ್ಬರು ಆ ಸ್ಥಳವನ್ನು ಬಿಟ್ಟು ಅರಮನೆಯ ಹುಡುಕಾಟದಲ್ಲಿ ತಿರುಗಾಡುತ್ತಾರೆ. ಸ್ವಲ್ಪ ದಿನದ ತಿರುಗಾಟದ ನಂತರ ರಾಜಕುಮಾರನ ಅಧಿಪತ್ಯಕ್ಕೆ ಬರುತ್ತಾರೆ. ಅವರನ್ನು ಬಹಳ ಸಡಗರದಿಂದ ಬರಮಾಡಿ ಕೊಳ್ಳಲಾಗುತ್ತದೆ. ನಂತರ ಅವರಿಬ್ಬರು ಮದುವೆಯಾಗಿ ಬಹಳ ಸಂತೋಷದಿಂದ ಆಡಳಿತ ನಡೆಸುತ್ತಾರೆ.
ಆದರೆ ಆ ಮಾಟಗಾತಿಗೆ ಏನಾಯಿತು ಎಂದು ಯಾರಿಗೂ ಗೊತ್ತಾಗಲಿಲ್ಲ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಆಚರಿಸಲು 5 ಸಲಹೆಗಳು

ಮುಟ್ಟಿನ ನೋವು ಕಡಿಮೆ ಮಾಡಲು ಇಲ್ಲಿದೆ ಕೆಲವು ಸೂಪರ್ ಉಪಾಯಗಳು

ಕ್ರಿಸ್ಮಸ್‌ ವಿಶೇಷ: ಹಬ್ಬದ ಸೀಸನ್‌ಗಾಗಿ ಪ್ಲಮ್ ಕೇಕ್‌ ಪ್ರಯತ್ನಿಸಲೇಬೇಕು

Show comments