Webdunia - Bharat's app for daily news and videos

Install App

ಆಲಸಿ ಗುಂಡ ಮತ್ತು ಸ್ಕೇಟಿಂಗ್ ಬೂಟ್

Webdunia
ಬಹಳ ವರ್ಷಗಳ ಹಿಂದೆ ಒಂದು ಊರಿನಲ್ಲಿ ಗುಂಡನೆಂಬ ಮುದ್ದಾದ ಬಾಲಕನಿದ್ದ. ಗುಂಡನ ಮನೆ ಹಿಮ ಪರ್ವತದ ಕೆಳಗೆ ಇತ್ತು. ಗುಂಡ ಒಬ್ಬ ಉತ್ತಮ ಹುಡುಗನಾಗಿದ್ದ. ಆದರೆ ಆತ ಬಾರಿ ಆಲಸಿಯಾಗಿದ್ದ. ಆತ ಯಾವುದನ್ನೂ ಬಯಸುತ್ತಿರಲಿಲ್ಲ. ಆತ ಚಳಿ ಕಾಯಿಸಲು ಬಿಸಿಲ ಅಡಿ ಮನೆಯ ಮೂಲೆಯೊಂದರಲ್ಲಿ ಮುದುರಿಕೊಂಡು ಮಲಗುತ್ತಿದ್ದ ಮತ್ತು ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ.

ಗುಂಡನ ತಾಯಿಗೆ ಮಗ ಒದಲು ಕಲಿಯಬೇಕು ಮತ್ತು ಚುರುಕಿನವನಾಗ ಬೇಕೆಂಬ ಬಯಕೆಯನ್ನು ಇರಿಸಿದ್ದಳು. ಆದರೆ ತಾಯಿ ಹಲವು ಬಾರಿ ಗುಂಡನಿಗೆ ಓದಲು ಕಲಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಅದು ಯಾವುದೂ ಫಲಕಾರಿಯಾಗದೆ ಕೊನೆಗೆ ತನ್ನ ಪ್ರಯತ್ನವನ್ನು ಕೈಬಿಟ್ಟಿದ್ದಳು.

ಇದಾದ ಸ್ವಲ್ಪ ಸಮಯದ ನಂತರ ಒಬ್ಬ ಯುವ ವ್ಯಕ್ತಿ ದೂರದ ಊರಿನಿಂದ ಗುಂಡನ ಮನೆಗೆ ಬರುತ್ತಾನೆ. ಆತ ಬರುವಾಗ ಈವರೆಗೆ ನೆರೆಯವರು ಕಾಣದ ಸ್ಕೇಟಿಂಗ್ ಬೂಟ್ಸ್‌ಗಳನ್ನು ತಂದಿದ್ದ. ಆ ವ್ಯಕ್ತಿ ಆ ಸ್ಕೇಟಿಂಗ್ ಬೂಟನ್ನು ಬಳಸಿ ಹಿಮ ಪರ್ವತದಲ್ಲಿ ವೇಗದಿಂದ ಆ ಕಡೆ ಈ ಕಡೆ ಹೋಗುತ್ತಿದ್ದ. ಇದನ್ನು ಕಂಡ ಗುಂಡನಿಗೆ ಬಹಳ ಕುತೂಹಲ ಮತ್ತು ಆಶ್ಚರ್ಯವಾಯಿತು. ಗುಂಡ ವೇಗದಲ್ಲಿ ಆ ವ್ಯಕ್ತಿಯ ಕಡೆ ಒಡಿ ಹೋಗುತ್ತಾನೆ.

ಹೀಗೆ ಒಂದು ದಿನ ಆ ಯುವಕ ಗುಂಡನಿಗೆ ಸ್ಕೇಟಿಂಗ್ ಬೂಟಿನಲ್ಲಿ ಆಡಲು ಬಿಡುತ್ತಾನೆ. ಗುಂಡ ಬಹಳ ಆನಂದಿಸುತ್ತಾನೆ. ಮೊದಲ ಬಾರಿಗೆ ಗುಂಡ ಬೀಳುತ್ತಾನೆ ಆದರೆ ದೃತಿ ಗೆಡದೆ ಹಿಡಿದ ಕೆಲಸ ಬಿಡದಂತೆ ಛಲದಿಂದ ಆ ಸ್ಕೇಂಟಿಂಗ್ ಬೂಟ್ ಧರಿಸಿ ಆಡುತ್ತಾನೆ.

ಇದನ್ನು ಕಂಡ ಯುವಕ ಗುಂಡ ನನ್ನ ಚಿಕ್ಕಮ್ಮ ನಿನಗೆ ಓದಿಸ ಬೇಕು ಎಂದು ಭಾರಿ ಪ್ರಯತ್ನಿಸುತ್ತಿದ್ದಾಳೆ. ಏಕೆ ನೀನು ಓದು ಕಲಿಯುವುದಿಲ್ಲ? ನೀನು ಬಹಳ ಆಲಸಿ ಯಾಗಿದ್ದು ಒಂದು ವೇಳೆ ನೀನು ಓದು ಕಲಿತರೆ ನಾನು ನಿನಗೆ ಹೊಸ ವರ್ಷದಲ್ಲಿ ಇಂತಹುದೇ ಒಳ್ಳೆಯ ಸ್ಕೇಟಿಂಗ್ ಬೂಟನ್ನು ತೆಗೆದು ಕೊಡುತ್ತೇನೆ ಎಂದು ಹೇಳುತ್ತಾನೆ.

ಇದನ್ನು ಕೇಳಿದ ಗುಂಡ ತನ್ನ ಕಣ್ಣನ್ನು ಮಿಣುಕಿಸುತ್ತಾನೆ ಮತ್ತು ನನಗೆ ಆ ಸ್ಕೇಟಿಂಗ್ ಬೂಟು ಬೇಕು ಅದಕ್ಕಾಗಿ ನಾನು ಒದಲು ಕಲಿಯುತ್ತೇನೆ ಎಂದು ಪಣತೊಡುತ್ತಾನೆ. ಒಂದು ಸಾರಿ ಕೆಲಸವನ್ನು ಮಾಡಬೇಕು ಎಂದು ಗುಂಡ ಪಣ ತೊಟ್ಟರೆ, ಅವನು ಹಿಂಜರಿಯುದಿಲ್ಲ ಅದನ್ನು ಮಾಡೇ ತೀರುತ್ತಾನೆ.

ಈ ಮುಂಚೆ ಗುಂಡನಿಗೆ ಓದಿಸಲು ಬಹಳವಾಗಿ ಕಷ್ಟಪಟ್ಟಿದ್ದ ತಾಯಿಗೆ ಈ ಬಾರಿ ಯಾವುದೇ ಕಷ್ಟವಾಗಲಿಲ್ಲ.

ಹೊಸ ವರ್ಷದ ಬೆಳಗ್ಗೆ ಗುಂಡನಿಗೆ ಒಂಗು ಕೆಂಪು ಬಣ್ಣದ ಪೆಟ್ಟಿಗೆ ಸಿಕ್ಕಿತು. ಅದರ ಮೇಲೆ ಇದನ್ನು ಓದಲು ಸಾದ್ಯವಾಗುವವರಿಗೆ ಇದರ ಒಳಗಿದ್ದ ವಸ್ತುವನ್ನು ಹೊಂದಲು ಸಾದ್ಯ ಎಂದು ಬರೆದಿತ್ತು.

ಗುಂಡ ಇದರ ಮೇಲಿದ್ದ ಎಲ್ಲಾ ಶಬ್ದಗಳನ್ನು ಸ್ಪಷ್ಟವಾಗಿ ಮತ್ತು ಶೀಘ್ರದಲ್ಲಿ ಓದಿದಳು ಮತ್ತು ಸ್ಕೇಟಿಂಗ್ ಬೂಟನ್ನು ತನ್ನದಾಗಿಸಿದನು. ತದ ನಂತರ ಗುಂಡ ಯಾವತ್ತೂ ಆಲಸಿಯಾಗಿ ಬಿಸಿಲಿನಲ್ಲಿ ಚಳಿಕಾಯಿಸುತ್ತಿರಲಿಲ್ಲ. ಯಾವತ್ತೂ ಕ್ರಿಯಾತ್ಮಕನಾಗಿದ್ದ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಆಚರಿಸಲು 5 ಸಲಹೆಗಳು

ಮುಟ್ಟಿನ ನೋವು ಕಡಿಮೆ ಮಾಡಲು ಇಲ್ಲಿದೆ ಕೆಲವು ಸೂಪರ್ ಉಪಾಯಗಳು

ಕ್ರಿಸ್ಮಸ್‌ ವಿಶೇಷ: ಹಬ್ಬದ ಸೀಸನ್‌ಗಾಗಿ ಪ್ಲಮ್ ಕೇಕ್‌ ಪ್ರಯತ್ನಿಸಲೇಬೇಕು

ನಿಮ್ಮ ಆಹಾರದಲ್ಲಿ ಕಿವಿ ಹಣ್ಣು ಸೇರಿಸಲು 5 ಕಾರಣಗಳು

Show comments