ಮೀಸೆ ಚಿಗುರುತಿರೆ ಮಂಗಣ್ಣ
ಬಯಸಿದ ಮದುವೆಗೆ ಎಂದಣ್ಣ
ಹೊರೆ ವಿಜ್ಞಾಪನೆ ಪತ್ರಿಕೆಗೆ
ನೀಡಿದ ಕನ್ನೆಯ ಬೇಡಿಕೆಗೆ
ಬಂದವು ಏನಿತೋ ಸಂಬಂಧ
ಮುರಿದವು ಆಗದೆ ಅನುಬಂಧ
ಕೊನೆಗೂ ಒಂದೆಡೆ ಮಾತುಕತೆ
ಸಫಲವು ಆಯಿತು ನೀಗಿ ವ್ಯಥೆ
ಮದುವೆಯಾದೊಡೆ ಮಂಗಣ್ಣ
ಹೆಂಡತಿ ನೋಡಲು ಎಂದಣ್ಣ
ಮುಸುಕನು ಮೇಲೆ ಎತ್ತಿದ್ದ
ಎದೆ ಧಸಕೆಂದು ಸತ್ತಿದ್ದ
ಕಂಡನು ಮೆಳ್ಳೆಯು ಇಹಕಣ್ಣ
ಸುಟ್ಟ ಇಜ್ಜಲಿಯ ಮುಖಬಣ್ಣ
-ಗುರುರಾಜ ಬೆಣಕಲ್