ಪುಟ್ಟನೊಮ್ಮೆ ಪುಟ್ಟ ಆನೆ ಚಿತ್ರವನ್ನು ಬರೆದನು
ಅದಕೆ ಜೀವವನ್ನು ನೀಡು ಎಂದು ದೇವರಲ್ಲಿ ಮೊರೆದನು.
ಅವನ ಬಯಕೆಯಂತೆ ಆನೆ
ಜೀವವನ್ನು ತಳೆಯಿತು
ನೋಡನೋಡತಿರಲು ಅದುವೆ
ದೊಡ್ಡದಾಗಿ ಬೆಳೆಯಿತು.
ಪುಟ್ಟಾ ನನಗೆ ತುಂಬಾ ಹಸಿವೆ
ತಿನಲು ನೀಡು ಎಂದಿರೆ
ಪುಟ್ಟ ಓಡಿ ಹೋಗಿ ಚಾಕಲೇಟನೊಂದ ತಂದಿರೆ.
ಅದನು ನೋಡಿ ಆನೆ ಗೊಳ್ಳನೆಂದು ಆಗ ನಕ್ಕಿತು
ಮರಳಿ ಚಿತ್ರವಾಗಿ ಹಾಳೆಯೊಳಗೆ ಅದು ಹೊಕ್ಕಿತು
ಇದನು ಕಂಡ ಪುಟ್ಟನಾಗ ಮನಸಿನೊಳಗೆ ನೊಂದನು
ಆನೆಗನ್ನ ನೀಡುವಂತೆ ಬೆಳೆವೆ ನಾನು ಎಂದನು.
-ಗುರುರಾಜ ಬೆಣಕಲ್