ರಶ್ಮಿ ಪೈ
ಬೀಡಿ ಸಿಗಾರ್ ಸೇದಬೇಡ
ರೋಗ ಬೇಗನೆ ಬರುವುದು
ಮಟ್ಕಾ ಗುಟ್ಕಾ ಚಟವೆ ಬೇಡ
ಇದ್ದ ಹಣವ ಕಳೆಯಲು || 1||
ಬ್ರಾಂಡಿ ವಿಸ್ಕಿ ಸೇವಿಸದಿರು
ಮತ್ತು ಕುತ್ತು ತರುವುದು
ಪೋಲಿಗಳ ಸಂಗ ಮಾಡಬೇಡ
ಪೋಲಿಸರ ಗುದ್ದು ಸಿಗುವುದು || 2||
ಗುರುಹಿರಿಯರಿಗೆ ಋಣಿಯಾಗಿದ್ದರೆ
ಉನ್ನತ ಸ್ಥಾನದಿ ನೀ ಮೆರೆವೆ
ಎಲ್ಲರೊಂದಿಗೆ ಸ್ನೇಹದಿಂದ ಬೆರೆತಿರೆ ಎಂದೂ
ಜನಮನದ ವಿಶ್ವಾಸ ನೀ ಅರಿವೆ || 3||
ಉತ್ತಮ ವಿದ್ಯೆಯ ಕಲಿಯುತಲಿದ್ದರೆ
ಜ್ಞಾನ ಶಿಖರವನು ಚುಂಬಿಸುವೆ
ದೇಶದ ಹಿತಕ್ಕೆ ದುಡಿಯುತಲಿದ್ದರೆ
ದೇಶಪ್ರೇಮಿಯ ಗೌರವವ ಪಡೆವೆ|| 4||