Select Your Language

Notifications

webdunia
webdunia
webdunia
webdunia

ಬೆಳಗು

ಬೆಳಗು
ರಜನಿ

ಕೆಂಪು ಆಗಸವಿತ್ತು
ಹಕ್ಕಿಗಳ ಚಿಲಿಪಿಲಿಯಿತ್ತು
ಗಾಳಿಯು ನಯವಾಗಿ ಬೀಸುತ್ತಿತ್ತು

ಹೂವದುವು ಅರಳಿತ್ತು
ಕಂಪನ್ನು ಸೂಸಿತ್ತು
ಇಬ್ಬನಿಯು ಹೂಗಳಿಗೆ ಮುತ್ತಿಡುತಲಿತ್ತು

ಕೋಗಿಲೆಯು ಹಾಡಿತ್ತು
ಚಿಟ್ಟೆಯದು ಹಾರಿತ್ತು
ದುಂಬಿಯದು ಮಕರಂದ ಹೀರುತ್ತಿತ್ತು

ಶಬ್ಧಗಳು ಅಡಗಿತ್ತು
ಮೌನವೆಲ್ಲೆಡೆ ತುಂಬಿತ್ತು
ಪ್ರಾರ್ಥನೆಯ ನಿನಾದ ಕೇಳಿ ಬರುತ್ತಿತ್ತು

ಲೋಕವದು ಏಳುತ್ತಿತ್ತು
ಮುಖದಲ್ಲಿ ನಗುವಿತ್ತು
ಉತ್ಸಾಹದ ಚಿಲುಮೆ ಚಿಮ್ಮುತ್ತಿತ್ತು

ಪದಪುಂಜ ಸಿಗುತ್ತಿಲ್ಲ
ವರ್ಣಿಸಲೆ ಆಗುತ್ತಿಲ್ಲ
ಆ ಬೆಳಗ ಶುಭವಾದ ನೋಟವನ್ನೆಲ್ಲ

ಆ ಬೆಳಗು ಬಲು ಸೊಗಸು
ಅರಳುವುದು ಆಗಲೇ ಮನಸು
ಮೂಡುವುದು ನೂರಾರು ಕನಸು

ಆಸ್ವಾದಿಸಲು ಬನ್ನಿ
ಒಗ್ಗೂಡಿ ಬನ್ನಿ
ಆ ಬೆಳಗ ಸೊಗಸನ್ನು ನೋಡಬನ್ನಿ



Share this Story:

Follow Webdunia kannada