ರಜನಿ ಭಟ್
ನಮ್ಮೂರ ಜಾತ್ರೆಗೆ ಹೋಗಬೇಕು
ತೇರು ಎಳೆಯುವುದನ್ನು ನೋಡಬೇಕು
ದೇವರ ದರುಶನ ಮಾಡಬೇಕು
ಬೇಕಾದ ವರವನು ಕೇಳಬೇಕು
ರಾಜ ಬೀದಿಗೆ ಹೋಗಬೇಕು
ತೇರಿನ ಶೃಂಗಾರ ನೋಡಬೇಕು
ತೇರು ಎಳೆಯಲು ಹೋಗಬೇಕು
ದೇವರ ಅನುಗ್ರಹ ಪಡೆಯಬೇಕು
ಅಮ್ಮನ ಜೊತೆಗೆ ಹೋಗಬೇಕು
ಬಳೆಗಳ ಅಂಗಡಿ ನುಗ್ಗಬೇಕು
ಬಣ್ಣದ ಬಳೆಗಳ ತೊಡಬೇಕು
ಮುದ್ದಿನ ಸುಂದರಿ ನಾನಾಗಬೇಕು
ಅಣ್ಣನ ಜೊತೆಯಲಿ ಹೋಗಬೇಕು
ಉಯ್ಯಾಲೆಯಲ್ಲಿ ಕೂರಬೇಕು
ಜಂಬೋ ಸರ್ಕಸ್ ನೋಡಬೇಕು
ತುಂಬಾ ಮಜವನು ಪಡೆಯಬೇಕು
ಅಪ್ಪನ ಜೊತೆಯಲಿ ಹೋಗಬೇಕು
ಐಸ್‌ಕ್ರೀಂ ಲಾಲಿಪಪ್ ತಿನ್ನಬೇಕು
ಕಡಲೇ ಜೋಳಪುರಿ ತಿನ್ನಬೇಕು
ತಣ್ಣನೆ ಜ್ಯೂಸ್ ಕುಡಿಯಬೇಕು