ಅಪ್ಪನೊಡನೆ ಕೆರೆಯ ದಡದಿ ಹೊರಟ ನಮ್ಮ ಪುಟ್ಟ
ನೀರಿನೊಳಗೆ ತೇಲೋ ರವಿಯ ಎಡೆಗೆ ದೃಷ್ಟಿ ನೆಟ್ಟ
ಒಡನೆ ಹೋಗಿ ನೀರಿನೊಳಗೆ ಕರವನಿಟ್ಟ ಪುಟ್ಟ
ಸೋಜಿಗದಿ ತಂದೆಯಲ್ಲಿ ಹೀಗೆ ಪ್ರಶ್ನೆ ಇಟ್ಟ
ಅಪ್ಪಾ ಹೇಳು ಮೇಲೆ ಇರುವ ರವಿಯು ಇವನು ತಾನೇ ?
ಉರಿವ ರವಿಯು ಏಕೆ ಇಲ್ಲ ತಣ್ಣಗಿರುವ ಶಾನೆ ?
ತಂದೆ ನುಡಿದ ರವಿಯ ಬಿಂಬ ಇಹುದು ನೀರಿನಲ್ಲಿ
ಶಿವನ ಬಿಂಬದಂತೆ ಮನುಜ ಇರುವ ಹಾಗೆ ಜಗದಲಿ
-ಗುರುರಾಜ ಬೆಣಕಲ್