ಅಪರೂಪಕ್ಕೆ ತಿಮ್ಮನ ಗೆಳೆಯ ತಿಮ್ಮನನ್ನು ಪ್ರಾಣಿಸಂಗ್ರಹಾಲಯಕ್ಕೆ ಕರೆದುಕೊಂಡು ಹೋದ. ಅದು ತಿಮ್ಮನ ಪ್ರಥಮ ಪ್ರಾಣಿಸಂಗ್ರಹಾಲಯ ಬೇಟಿಯಾಗಿತ್ತು.
ಆತನು ಆನೆಯನ್ನು ಈವರೆಗೆ ನೋಡಿರಲಿಲ್ಲ. ನೋಡಪ್ಪಾ ಇದೇ ಆನೆ ಎಂದು ಗೆಳೆಯ ತಿಮ್ಮನಿಗೆ ತೋರಿಸಿದ.
ತಿಮ್ಮ ಆನೆಯನ್ನು ಹಿಂದೆ ಹೋಗಿ ಮುಂದೆ ಹೋಗಿ ಪದೇ ಪದೇ ನೋಡುತ್ತಿದ್ದ . ಇದನ್ನು ಗಮನಿಸಿದ ಆತನ ಸ್ನೇಹಿತ ಯಾಕೆ ಆ ರೀತಿ ನೋಡುತ್ತಿದ್ದೀಯ ಎಂದು ಕೇಳಿದಾಗ ಏನಿಲ್ಲಾ ಈ ಪ್ರಾಣಿಯ ಬಾಲ ಮುಂದಿದೆಯಾ ಹಿಂದಿದೆಯಾ ಅಂತ ಗೊತ್ತಾಗ್ತಿಲ್ಲ ಎಂದು ಮತ್ತೆ ನೋಡಲು ಪ್ರಾರಂಭಿಸಿದ.