Article Kannada Cinema Star %e0%b2%ae%e0%b3%87%e0%b2%98%e0%b2%a8%e0%b2%be 108012100010_1.htm

Select Your Language

Notifications

webdunia
webdunia
webdunia
webdunia

ಮೇಘನಾ

ಮೇಘನಾ
ಸೇಬುಗಲ್ಲದ ಮೇಘನಾ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು ಗಣೇಶ ಚಿತ್ರದಿಂದ. ಜಗ್ಗೇಶ್, ಅನಂತ್‌ನಾಗ್, ದಿನೇಶ್‌ಬಾಬುರಂತಹ ಘಟಾನುಘಟಿಗಳ ಮಧ್ಯೆ ಪುಟ್ಟ ಪಾತ್ರದ ಮೂಲಕ ಕಣ್ಣುಬಿಟ್ಟ ಮೇಘನಾಳ ಅಭಿನಯ ಚಾತುರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಿರುತೆರೆಯ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಮೇಘನಾಗೆ ಶಿವ ಧಾರಾವಾಹಿ ಮೂಲಕ ಹೆಚ್ಚಿನ ಪ್ರಚಾರ ಸಿಕ್ಕಿತ್ತು. ಈ ಧಾರಾವಾಹಿಯಲ್ಲಿನ ಇವರ ಅಭಿನಯವನ್ನು ಕಂಡು ಗಣೇಶ ಚಿತ್ರದ ಪಾತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ಆರಿಸಿದರಂತೆ.

ಜಗ್ಗೇಶ್-ಅನಂತ್‌ನಾಗ್‌ ರಂತಹ ನಟರೊಂದಿಗೆ ಅಭಿನಯಿಸಲು ಮೊದಮೊದಲು ಭಯಪಟ್ಟ ಮೇಘನಾಗೆ ಸಿಕ್ಕಿದ್ದು ಈ ಇಬ್ಬರ ಸಹಕಾರ. ಇದನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ ಮೇಘನಾಗೆ ಮುಂದೆ ಮತ್ತೊಂದು ಆಫರ್ ಕಾದಿತ್ತು. ಉಷಾ ನವರತ್ನರಾಂರವರ ಹೊಸರಾಗ ಕಾದಂಬರಿ ಆಧರಿಸಿ ಕೃಷ್ಣಾ ನಾಡಿಗ್ ನಿರ್ದೇಶಿಸುತ್ತಿರುವ ಕರೆಯೇ ಕೋಗಿಲೆ ಮಾಧವನಾ ಚಿತ್ರದಲ್ಲಿ ದೊರೆತ ಪಾತ್ರವನ್ನು ಮೇಘನಾ ಸಮರ್ಥವಾಗಿ ಬಳಸಿಕೊಂಡಿದ್ದಾಳೆ ಎಂಬ ಸುದ್ದಿಯಿದೆ.

ಪ್ರಸ್ತುತ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಎ ಓದುತ್ತಿರುವ ಮೇಘನಾ ಪಠ್ಯೇತರ ಚಟುವಟಿಕೆಗಳಲ್ಲೂ ಪ್ರವೀಣೆ. ಅಭಿನಯಕ್ಕೆ ಸವಾಲೆಸೆಯುವ ಪಾತ್ರಗಳಲ್ಲಿ ನಟಿಸಬೇಕು ಎಂಬುದು ಈಕೆಯ ಮನದಾಸೆಯಂತೆ. ಪ್ರತಿಭೆ-ಸೌಂದರ್ಯ ಎರಡೂ ಇರುವ ಮೇಘನಾರಂಥವರಿಂದ ಕನ್ನಡ ಚಿತ್ರರಂಗದ ನಾಯಕಿಯರ ಕೊರತೆ ನೀಗುವುದೇ ಎಂಬುದನ್ನು ಕಾದು ನೋಡಬೇಕಿದೆ.

Share this Story:

Follow Webdunia kannada