Publish Date: Fri, 21 Oct 2016 (11:34 IST)
Updated Date: Fri, 21 Oct 2016 (11:55 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಇನ್ನೊಬ್ಬ ಬೆಡಗಿ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಅರ್ಚನಾ ನರಸಿಂಹಸ್ವಾಮಿ.
ಪುನೀತ್ ರಾಜ್ ಕುಮಾರ್ ಪ್ರೊಡಕ್ಷನ್ ನ ಮನೆದೇವ್ರು ಧಾರವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಅರ್ಚನಾ “ನೂರೊಂದು ನೆನಪು” ಎಂಬ ಸಿನಿಮಾಕ್ಕೆ ಆಯ್ಕೆಯಾಗಿದ್ದಾರೆ. ಮೂವರು ನಾಯಕಿಯರಲ್ಲಿ ಅರ್ಚನಾ ಕೂಡಾ ಒಬ್ಬರು.
ಅಂದ ಹಾಗೆ ಅರ್ಚನಾಗೆ ಇದು ಮೊದಲ ಸಿನಿಮಾ. “ಆ ದಿನಗಳು” ಸಿನಿಮಾ ಖ್ಯಾತಿಯ ಚೇತನ್ ಚಿತ್ರದ ನಾಯಕ. ಕುಮರೇಶ್ ನಿರ್ದೇಶಕರು. ಅಂದ ಹಾಗೆ ಇದು ಮರಾಠಿ ಕಾದಂಬರಿ ಆಧರಿತ ಚಿತ್ರದ ರಿಮೇಕ್. ಈಗಾಗಲೇ ಚಿತ್ರೀಕರಣವೂ ಬಹುತೇಕ ಮುಕ್ತಾಯಗೊಂಡಿದೆಯಂತೆ. ಅಲ್ಲಿಗೆ ಕಲರ್ಸ್ ಕನ್ನಡ ವಾಹಿನಿಯ ಮತ್ತೊಬ್ಬ ಸುಂದರಿ ಬೆಳ್ಳಿ ತೆರೆ ಪ್ರವೇಶಿಸುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ