Select Your Language

Notifications

webdunia
webdunia
webdunia
webdunia

ಹೆಂಡ್ತೀರದ್ದೇ ದರ್ಬಾರ್! ನೋಡಿ ಮಜಾ ಮಾಡಿ

ಹೆಂಡ್ತೀರದ್ದೇ ದರ್ಬಾರ್! ನೋಡಿ ಮಜಾ ಮಾಡಿ
MOKSHA
ಬಹು ನಿರೀಕ್ಷೆಯ ಹೆಂಡ್ತೀರ್ ದರ್ಬಾರ್ ಬಿಡುಗಡೆ ಕಂಡಿದೆ. ನಟ ರಮೇಶ್ ಅರವಿಂದ್ ಮೇಲಿನ ಅಪಾರ ನಿರೀಕ್ಷೆ ಹಾಗೂ ಚಿತ್ರದ ಕಾಮಿಡಿ ಟಚ್ ಚಿತ್ರದೆಡೆಗೆ ಒಂದೇ ನೋಟದಲ್ಲಿ ಮನಸೂರೆಗೊಳ್ಳುವಂತೆ ಮಾಡುತ್ತದೆ.

ಮತ್ತೊಂದು ಚಿತ್ರದ ಮೂಲಕ ತಾವು ಹಾಸ್ಯ ಪಾತ್ರಕ್ಕೆ ಫಿಟ್ ಅನ್ನುವುದನ್ನು ರಮೇಶ್ ತೋರಿಸಿದ್ದಾರೆ. ಲವಲವಿಕೆಯ ಇವರ ಅಭಿನಯ ಮೆಚ್ಚುಗೆ ಆಗುತ್ತದೆ. ಕೆಲವೊಮ್ಮೆ ಭಾವುಕರಾಗುವ ರಮೇಶ್ ಇಲ್ಲೂ ಕೆಲವೆಡೆ ಗಂಭೀರ ಪತ್ರ ನಿಭಾಯಿಸಿದ್ದಾರೆ.

ಚಿತ್ರವೊಂದರಲ್ಲಿ ಹೇಗೆ ಬೇಕಾದರೂ ನಟಿಸಬಲ್ಲೆ ಎನ್ನುವುದಕ್ಕೆ ಇವರು ಮತ್ತೊಂದು ಸಾಕ್ಷಿ ನೀಡಿದ್ದಾರೆ. ಇತ್ತೀಚೆಗೆ ಹಾಸ್ಯ ಚಿತ್ರಗಳ ಮೂಲಕ ಹೆಸರು ಮಾಡುತ್ತಿರುವ ಇವರಿಗೆ ನಿಜಕ್ಕೂ ಇದೊಂದು ಬ್ರೇಕ್ ನೀಡಿದರೆ, ಮುಂದೆ ಇದೇ ಮಾದರಿಯ ಚಿತ್ರಕ್ಕೆ ಫಿಟ್ ಆಗುವ ಸಂಶಯವಿದೆ.

ಚಿತ್ರದಲ್ಲಿ ಮೀನಾ ಇದ್ದಾರೆ. ಅವರ ಅಭಿನಯದ ಬಗ್ಗೆಯೂ ಚಕಾರವೆತ್ತುವಂತಿಲ್ಲ. ಆದರೂ, ಹಾಸ್ಯಕ್ಕೆ ಅಷ್ಟು ಸೂಟ್ ಆಗಲ್ಲ ಅನ್ನಿಸುತ್ತದೆ. ಹಾಗಂತ ತೆಗೆದು ಹಾಕುವಂತಿಲ್ಲ. ಇಂದಿನ ಕೆಲ ನಟಿಯರು ಸಹಜವಾಗಿ ಅಭಿನಯಿಸಿದರೂ ಅದು ಹಾಸ್ಯದಂತೆ ಭಾಸವಾಗುವಾಗ, ಇವರ ಅಭಿನಯ ಉತ್ತಮ ಅನ್ನಬಹುದು.

ಸೂಕ್ಷ್ಮ ಸಂವೇದಿ ನಿರ್ದೇಶಕ ಶೇಖರ್ ಇದನ್ನು ನಿರ್ದೇಶಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ರಾಮಚಂದ್ರ ನಿರ್ಮಾಣ ಒಪ್ಪಿಕೊಳ್ಳುವ ರೀತಿಯಲ್ಲೇ ಇದೆ. ಚಿತ್ರದಲ್ಲಿ ಕೊಂಚ ಹಾಗೂ ಕೆಲವರ ಅಭಿನಯ ರಂಗಭೂಮಿಗೆ ಥಳುಕುಹಾಕಿದಂತೆ ಕಂಡುಬಂದರೂ, ಅದು ಸಂದರ್ಭ ಆದರಿಸಿ ಅಗತ್ಯವೇನೋ ಅನ್ನಿಸುತ್ತದೆ.

ರಮೇಶ್ ಅರವಿಂದ್, ಸಾಧು ಕೋಕಿಲ, ರಂಗಾಯಣ ರಘು ಮೊದಲಾದವರ ಹಾಸ್ಯ ರಸದೌತಣ ನೀಡಲು ಮೋಸ ಮಾಡುವುದಿಲ್ಲ. ನಿರ್ದೇಶನ, ಛಾಯಾಗ್ರಹಣ ಪರವಾಗಿಲ್ಲ. ಹಾಡುಗಳು ಅಡ್ಡಿ ಇಲ್ಲ. ಚಿತ್ರದ ಅಭಿನಯದ ಎದುರು ಇವೆಲ್ಲವನ್ನೂ ಮರೆಬಹುದು. ಆಕ್ಷನ್ ಅಗತ್ಯ ಚಿತ್ರದಲ್ಲಿ ಇಲ್ಲ. ಒಟ್ಟಾರೆ ಕೌಟುಂಬಿಕ ವೀಕ್ಷಕರನ್ನು ಇದು ಮೆಚ್ಚಿಸುವಲ್ಲಿ ಸಂಶಯವಿಲ್ಲ.

Share this Story:

Follow Webdunia kannada