Select Your Language

Notifications

webdunia
webdunia
webdunia
webdunia

ಹಳೇ ಬಾಟಲಿಯಲ್ಲಿ ಹಳೆಯ ಮದ್ಯವೇ: ಇದು 'ತೀರ್ಥ'

ಹಳೇ ಬಾಟಲಿಯಲ್ಲಿ ಹಳೆಯ ಮದ್ಯವೇ: ಇದು 'ತೀರ್ಥ'
MOKSHA
ಚಿತ್ರ- ತೀರ್ಥ
ನಿರ್ದೇಶನ- ಸಾಧು ಕೋಕಿಲಾ
ತಾರಾಗಣ- ಸುದೀಪ್, ಸಲೋನಿ, ಅನಂತನಾಗ್, ಗೀತಾ, ಅವಿನಾಶ್, ದೊಡ್ಡಣ್ಣ

ವರ್ಷದ ನಂತರ ಬಂದಿರುವ 'ತೀರ್ಥ' ಸೇವನೆ ಮಾಡಲೂ ಆಗದಷ್ಟು ಅಡ್ಡ ವಾಸನೆ ಬೀರುತ್ತಿದೆ. ಪ್ರೇಕ್ಷಕರೇ ಹೇಳುವ ಮಾತೆಂದರೆ ಇಷ್ಟು ತಡವಾಗಿ ತೀರ್ಥ ನೀಡುವ ಬದಲು ನೀಡದಿದ್ದರೇ ಚೆನ್ನಾಗಿರುತ್ತಿತ್ತು ಅಂತ.

ಹೌದು. ಚಿತ್ರದ ಬಗ್ಗೆ ನೋಡಿದಾಗ ಅಪ್ಪ ನಿಷ್ಟಾವಂತ ಶಿಕ್ಷಕ. ಶಿಕ್ಷಣ ನೀಡುವುದೇ ಅವನ ದ್ಯೇಯ. ಒಂದು ರೀತಿಯಲ್ಲಿ ಕಟ್ಟುನಿಟ್ಟಿನ ವ್ಯಕ್ತಿತ್ವ ಉಳ್ಳ ಮನುಷ್ಯ. ತಾನು ಗಣೀತದಲ್ಲಿ ಸಾಧಿಸಿದ ಪಾಂಡಿತ್ಯಕ್ಕಿಂತ ಹೆಚ್ಚು ಮಗ ಗಳಿಸಲಿ ಎಂದು ಆಶಿಸುವ ಪಿತೃ ಹೃದಯಿ. ಆದರೆ ಮಗ ತೀರ್ಥ (ಸುದೀಪ್) ಅಟ್ಟರ್ ಅಬ್ಬೇಪಾರಿ. ಓದಿಗೆ ಸಲಾಂ ಹೊಡೆದು, ಬೇರೆಲ್ಲಾ ಕೆಲಸ ಮಾಡುತ್ತಿರುತ್ತಾನೆ. ಆದರೆ ಕಲಿಕೆ ಬಿಟ್ಟರೆ ಬೇರೆಲ್ಲಾ ವಿಧದಲ್ಲೂ ಸಾಧನೆ ಮಾಡುತ್ತಾನೆ. ಇದು ಊರವರಿಗೆಲ್ಲಾ ಇಷ್ಟವಾಗುತ್ತದೆ. ಆದರೆ ತಂದೆಗೆ ಮಾತ್ರ ಮೈ ಉರಿಯುತ್ತದೆ.

ಗಣಿತ ಬಿಟ್ಟು ಬೇರೆನನ್ನೂ ಕಲಿತರೆ ಮನೆಯಲ್ಲಿ ಜಾಗ ಇಲ್ಲ ಎನ್ನುತ್ತಾನೆ. ಮಗ ಒಮ್ಮೆ ತಪ್ಪು ಮಾಡಿದ್ದಕ್ಕೆ ಮುನಿಸಿಕೊಂಡು ಕೊಠಡಿಯಲ್ಲಿ ತುರುಕುತ್ತಾನೆ. ಜಸ್ಟ್ ಪಾಸ್ ಆದ ಮಗನನ್ನು ಫೇಲ್ ಮಾಡಿಸಿ ಬಿಡುತ್ತಾನೆ. ಅಲ್ಲಿಗೆ ಮಗನ ವಿದ್ಯೆಗೆ ತೀರ್ಥ ಬೀಳುತ್ತದೆ. ತನಗೆ ತೋಚಿದ ಮಾರ್ಗದಲ್ಲಿ ಸಾಗುತ್ತಾನೆ. ರೌಡಿಯಾಗುತ್ತಾನೆ. ಇದರಲ್ಲೂ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ರೌಡಿ ಪಾತ್ರ ಈತನದ್ದು. ಹೀಗಿದ್ದ ಮೇಲೆ ಒಬ್ಬ ಹುಡುಗಿ ಬೀಳಲೇ ಬೇಕು. ಇಲ್ಲೂ ಅದೇ ಆಗುತ್ತದೆ ಎಂದು ವಿವರಿಸಿ ಹೇಳಬೇಕಾಗಿಲ್ಲ.

ಅದ್ಯಾವ ಮಾನದಂಡದಲ್ಲಿ ಸಾಧು ಕೋಕಿಲಾ ಚಿತ್ರ ಮಾಡಿದ್ದಾರೋ, ಗೊತ್ತಿಲ್ಲ. ಚಿತ್ರವಂತೂ ಹಳೇ ಬಾಟಲಿಯಲ್ಲಿ ಹಳೇ ಮದ್ಯವನ್ನೇ ಸುರುವಿದಂತಾಗಿದೆ. ಸಾಧು ಸಂಗೀತ ನಿರ್ದೇಶನಕ್ಕೆ ಮಾತ್ರ ಸೀಮಿತ ಆಗಿದ್ದರೆ ಒಳ್ಳೆಯದು ಅನ್ನಿಸುವುದು ಸುಳ್ಳಲ್ಲ. ಚಿತ್ರ ಬಹುತೇಕ ಸಂದರ್ಭದಲ್ಲಿ ಓಟದ ವೇಗವನ್ನೇ ಕಳೆದುಕೊಂಡು ನಿಂತೇ ಬಿಡುತ್ತದೆ. ಒಂದಿಷ್ಟು ಫೈಟ್, ನಟಿಯ ನಗುವಿಗೆ ಒಂದಿಷ್ಟು ಚಿತ್ರ ಓಡುತ್ತದೆ. ಸುದೀಪ್ ನಟನೆ ಬಗ್ಗೆ ಎರಡು ಮಾತೇ ಇಲ್ಲ. ಆದರೆ, ಪೋಷಕ ನಟರ ಅಭಿನಯದಿಂದ ಕೊಂಚ ಚಿತ್ರ ಸಹ್ಯ ಅನ್ನಿಸುತ್ತದೆ.

ಅನಂತನಾಗ್ ಅಭಿನಯ ಅತ್ಯದ್ಬುತ. ನಟಿ ಗೀತಾ ಶ್ರದ್ದೆಯಿಂದ ನಟಿಸಿದ್ದಾರೆ. ಅವಿನಾಶ್, ದೊಡ್ಡಣ್ಣ, ಶೋಭರಾಜ್, ಯತಿರಾಜ್ ಅಭಿನಯ ಪರವಾಗಿಲ್ಲ. ನೀನಾಸಂ ಅಶ್ವತ್ಥ್, ರೇಖಾ ಉತ್ತಮ ಅನ್ನಿಸುತ್ತಾರೆ. ದುನಿಯಾ ರಶ್ಮಿ ಕರೆಸಿದ ಪರಿ ನೋಡಿದರೆ, ತಾನಿನ್ನೂ ಚಿತ್ರರಂಗದಲ್ಲೇ ಇದ್ದೇನೆ ಎನ್ನುವುದನ್ನು ಸಾಬೀತು ಪಡಿಸಲು ಅಂತ ಅನ್ನಿಸುತ್ತದೆ.

ಗುರುಕಿರಣ್ ಒಂದು ಹಾಡು ಉತ್ತಮ. ಉಳಿದ್ಯಾವುದೂ ಮನಸ್ಸಲ್ಲಿ ಏನು, ಬಾಯಲ್ಲೂ ನಿಲ್ಲುವುದಿಲ್ಲ. ದಾಸರಿ ಸೀನು ಕ್ಯಾಮರಾ ಕೈಚಳಕ ಕಳೆದುಕೊಂಡಿದೆ. ಇನ್ನಷ್ಟು ಶ್ರಮಿಸಿದ್ದರೆ ಒಳ್ಳೆ ಚಿತ್ರ ಮಾಡಬಹುದಿತ್ತೇನೋ!

Share this Story:

Follow Webdunia kannada