ಸುಗ್ರೀವ: 18 ಗಂಟೆಯ ಯತ್ನಕ್ಕೋಸ್ಕರ ನೋಡಬಹುದು!
ಚಿತ್ರ : ಸುಗ್ರೀವತಾರಾಗಣ : ಶಿವರಾಜ್ ಕುಮಾರ್, ಯಜ್ಞಾಶೆಟ್ಟಿ ಮುಂತಾದವರು.ನಿರ್ದೇಶನ : ಪ್ರಶಾಂತ್ ಮತ್ತು ಹತ್ತು ನಿರ್ದೇಶಕರು.ನಿರ್ಮಾಪಕ: ಅಣಜಿ ನಾಗರಾಜ್ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಪಕ ಅಣಜಿ ನಾಗರಾಜ್ ಮತ್ತು ನಿರ್ದೇಶಕ ಪ್ರಶಾಂತ್ ಸೇರಿಕೊಂಡು 18 ಗಂಟೆಗಳಲ್ಲಿ ಸಿಂಪಲ್ ಚಿತ್ರವೊಂದನ್ನು ಶೂಟಿಂಗ್ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಸುಗ್ರೀವ ಚಿತ್ರದಲ್ಲಿ ಶಿವರಾಜ್ ಕುಮಾರ್ ಮೆಕಾನಿಕ್ ವೃತ್ತಿ ಮಾಡಿಕೊಂಡಿರುತ್ತಾರೆ. ಜೊತೆಗೆ ಡ್ಯಾನ್ಸ್ ಮಾಡುವ ಕಲೆಯನ್ನೂ ಕರಗತ ಮಾಡಿಕೊಂಡಿರುತ್ತಾರೆ. ಅವರ ಮಗನಿಗೂ ಡ್ಯಾನ್ಸ್ ಮೇಲೆ ಎಲ್ಲಿಲ್ಲದ ಆಸಕ್ತಿ. ತಮ್ಮ ಮಗನನ್ನು ಉತ್ತಮ ಡ್ಯಾನ್ಸರ್ ಮಾಡಬೇಕೆಂಬ ಶಿವಣ್ಣನ ಕನಸು ನುಚ್ಚು ನೂರಾಗುತ್ತದೆ. ಮಗನಿಗೆ ಹಾರ್ಟ್ ಪ್ರಾಬ್ಲಂ. ಆತ ಬದುಕಬೇಕೆಂದರೆ 35 ಲಕ್ಷ ಬೇಕು. ಬಡ ಶಿವಣ್ಣನಿಗೆ ದುಡ್ಡಿನದ್ದೇ ಚಿಂತೆ ಆಗುತ್ತದೆ. ದುಡ್ಡು ಸಿಗದೆ ಕಂಗಾಲಾಗುವ ಶಿವಣ್ಣ, ಕೊನೆಗೆ ಮಗನನ್ನು ಉಳಿಸಿಕೊಳ್ಳಲು ಇಡೀ ಆಸ್ಪತ್ರೆಯನ್ನೇ ಒತ್ತೆಯಿಟ್ಟುಕೊಳ್ಳುತ್ತಾರೆ. ಇದೇ ಚಿತ್ರದ ಹೈಲೈಟ್.
ಪ್ರತಿಯೊಬ್ಬರಿಗೂ ಕಥೆ ಇಷ್ಟವಾಗುತ್ತದೆ. ಶಿವಣ್ಣನ ಅಭಿನಯವಂತೂ ಅದ್ಬುತ. ಯಜ್ಞಾಶೆಟ್ಟಿ ಕಣ್ಣೀರಲ್ಲೇ ಮುಳುಗಿ ಏಳುತ್ತಾರೆ. 18 ಗಂಟೆಗಳಲ್ಲಿ ಚಿತ್ರೀಕರಣ ಮಾಡಿ ಗುಣಮಟ್ಟ ನೀಡಲು ಯತ್ನಿಸಿದ ಚಿತ್ರತಂಡದ ಪ್ರಯತ್ನವನ್ನು ಶ್ಲಾಘಿಸಲೇಬೇಕು.ಮೊದಲಾರ್ಧ ಆಮೆಗತಿಯಲ್ಲಿ ಸಾಗುವ ಚಿತ್ರ ದ್ವಿತೀಯಾರ್ಧದಲ್ಲಿ ಚುರುಕುಗೊಳ್ಳುತ್ತದೆ. ಆದರೆ ಕುತೂಹಲ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಕ್ಯಾಮರಾ ಕೆಲಸ ಕಡಿಮೆ ಎನಿಸುತ್ತದೆ. ಎಡಿಟಿಂಗ್ ಹಾಗೂ ರೀ ರೆಕಾರ್ಡಿಂಗ್‌ನಲ್ಲಿ ಜೀವ ಇಲ್ಲ. ವಿಶೇಷ ಪ್ರಯತ್ನ ಮಾಡಿದ್ದಾರಲ್ಲ ಎಂಬುದಕ್ಕೆ ಒಮ್ಮೆ ಈ ಚಿತ್ರ ನೋಡಬೇಕು.ಸುಗ್ರೀವ ಚಿತ್ರಕ್ಕೆ 10 ಕನ್ನಡದ ನಿರ್ದೇಶಕರು, 10 ಸಹಾಯಕ ನಿರ್ದೇಶಕರು, 10 ಕ್ಯಾಮರಾಮನ್‌ಗಳು, 45 ಕ್ಯಾಮರಾ ಸಹಾಯಕರು 500 ಕೆಲಸಗಾರರು, 30 ನಟನಟಿಯರು, ಇಬ್ಬರು ನೃತ್ಯ ನಿರ್ದೇಶಕರು ಸುಗ್ರೀವ ಚಿತ್ರಕ್ಕೆ ಬೆವರು ಸುರಿಸಿದ್ದಾರೆ. ಗುರುಕಿರಣ್ ಸಂಗೀತ, ರಾಮ್ ನಾರಾಯಣ್ ಸಂಭಾಷಣೆ ಈ ಚಿತ್ರಕ್ಕಿದೆ.