Select Your Language

Notifications

webdunia
webdunia
webdunia
webdunia

ಸಂಚಾರಿ: ಸಂಗೀತ ಬಿಟ್ಟರೆ ಅಂಥಾದ್ದೇನಿಲ್ಲ

ಸಂಚಾರಿ: ಸಂಗೀತ ಬಿಟ್ಟರೆ ಅಂಥಾದ್ದೇನಿಲ್ಲ
MOKSHA
ಸಂಚಾರಿಯನ್ನು ನೋಡಲು ಹೋದರೆ ಒಂದೆರಡು ಹಾಡು ರಂಜಿಸುತ್ತದೆ ಅನ್ನೋದು ಬಿಟ್ಟರೆ ಪರಚಿ ಹಾಕುವ ಸನ್ನಿವೇಶಗಳು, ಅಸಂಬದ್ಧ ಕಥೆ, ಅಭಿನಯ ಬಾರದ ತಾರಾಗಣದ ನಡುವೆ ಚಿತ್ರ ಮ್ಯಾರಾಥಾನ್ ಓಟ ಓಡುತ್ತದೆ.

ಚಿತ್ರ ನಿರ್ಮಿಸುವವರಿಗೆ ಆಟ, ನೋಡುವವರಿಗೆ ಪ್ರಾಣ ಸಂಕಟ ಅನ್ನದೆ ವಿಧಿಯಿಲ್ಲ. ಲಕ್ಷ್ಮಯ್ಯ, ರಾಮಪ್ಪ ಹಾಗೂ ಪ್ರಭಾಕರ್ ಮೂವರು ನಿರ್ಮಿಸಿದ್ದು, ಪ್ರತಿಯೊಬ್ಬರೂ ನಷ್ಟವನ್ನು ಶೇ.33ರಷ್ಟು ಮಾತ್ರ ಹೊರಬೇಕಾಗುತ್ತದೆ ಎಂಬುದು ಒಪ್ಪಿಕೊಳ್ಳಲೇಬೇಕಾದ ಸಂಗತಿ. ಕಿರಣ್ ಗೋವಿ ಬಹಳ ಪ್ರಯತ್ನದ ನಂತರವೂ ಅಂತಿಮವಾಗಿ ಸೋತಿದ್ದಾರೆ.

ಚಿತ್ರದ ನಾಯಕ ಹಾಗೂ ನಾಯಕಿ ಇಬ್ಬರೂ ಮಾತಿನ ಜತೆ ಅಭಿನಯವನ್ನೂ ಮರೆತಿದ್ದಾರೆ. ಕಥೆಯ ಬಗ್ಗೆ ಕೇಳುವುದೇ ಬೇಡ. ನಾಯಕ ಸುಪಾರಿ ಕಿಲ್ಲರ್. ಹುಡುಗಿಯರಿಂದ ಯಾವಾಗಲೂ ಮಾರು ದೂರ ಇರುವಾತ. ಹೀಗಿದ್ದಾಗ್ಯೂ ಒಬ್ಬ ಹುಡುಗಿ ಎಲ್ಲಾ ಸಿನಿಮಾಗಳಂತೆ ಇಲ್ಲೂ ನಾಯಕ ಮನ ಕದಿಯುತ್ತಾಳೆ. ಅಲ್ಲಿಂದ ಕತ್ತಿ ಮಚ್ಚು ಬದಿಗಿಡುವ ನಾಯಕ ಪ್ಯಾರ್, ಇಷ್ಕ್, ಮೊಹಬ್ಬತ್ ಅನ್ನಲು ಆರಂಭಿಸುತ್ತಾನೆ. ಹುಡುಗಿಯ ಸುದ್ದಿಗೆ ಬಂದವರನ್ನು ಮಾತ್ರ ಚಚ್ಚಿ ಬಿಸಾಕುತ್ತಾನೆ.

ನಾಯಕ ರಾಜ್‌ಗೆ ಹೋಲಿಸಿದರೆ ಬಿಯಂಕಾ ದೇಸಾಯಿ ಅಭಿನಯವೇ ವಾಸಿ. ರಾಜ್ ಒಂದೋ ನಾಯಕನಟನಾಗುವ ಕನಸು ಬಿಡಬೇಕು. ಇಲ್ಲವೇ ಮೊದಲು ಅಭಿನಯ ಕಲಿಯಬೇಕು. ಸಂಭಾಷಿಸುವಾಗ ಕೊಂಚ ಭಾವನೆ ಅನ್ನೋದನ್ನಾದರೂ ಮುಖದಲ್ಲಿ ವ್ಯಕ್ತಪಡಿಸೋದನ್ನು ಕಲಿಯಬೇಕು. ಇಲ್ಲವಾದರೆ ಪ್ರೇಕ್ಷಕರಿಗೆ ಖಂಡಿತಾ ಶಿಕ್ಷೆಯೇ ಸರಿ.

ಸಂಗೀತ ನಿರ್ದೇಶಕ ಅರ್ಜುನ್ ಮಾತ್ರ ಈ ಚಿತ್ರದ ಏಳಿಗೆಗಾಗಿ ಏಕಾಂಗಿ ಹೋರಾಟ ಮಾಡಿದ್ದಾರೆ. ಇವರ ಸಂಗೀತ ಚಿತ್ರದುದ್ದಕ್ಕೂ ಕೇಳುವಂತಿದೆ ಅನ್ನೋದು ಬಿಟ್ಟರೆ, ಗೆಲ್ಲಿಸಲು ಕೇವಲ ಇದು ಸಾಕಾಗದು.

Share this Story:

Follow Webdunia kannada