Select Your Language

Notifications

webdunia
webdunia
webdunia
webdunia

ವಿಚಿತ್ರ ಪ್ರೇಮಿ; ಹೊಸಬರ ಯತ್ನಕ್ಕೆ ಪರವಾಗಿಲ್ಲ

ವಿಚಿತ್ರ ಪ್ರೇಮಿ; ಹೊಸಬರ ಯತ್ನಕ್ಕೆ ಪರವಾಗಿಲ್ಲ
ಚಿತ್ರ: ವಿಚಿತ್ರ ಪ್ರೇಮಿ
ತಾರಾಗಣ: ರವಿ ಕುಮಾರ್, ದಿವ್ಯಾ ಶ್ರೀಧರ್
ನಿರ್ದೇಶನ: ಕುರುಡಿ ಬಣಕಾರ
ಸಂಗೀತ: ಗಂಧರ್ವ

ವಿಚಿತ್ರ ಪ್ರೇಮಿ ಅನ್ನುವ ಚಿತ್ರ ಕೊನೆಗೂ ಬಿಡುಗಡೆ ಆಗಿದೆ. ಹೊಸಬರ ಹೊಸ ಚಿತ್ರವಾದ ಇದನ್ನು ಜನ ಅಷ್ಟಕ್ಕಷ್ಟೆ ಅನ್ನುವ ರೀತಿ ಒಪ್ಪಿದ್ದಾರೆ.
ರವಿ ಕುಮಾರ್, ದಿವ್ಯಾ ಶ್ರೀಧರ್ ನಾಯಕ-ನಾಯಕಿಯರಾಗಿ ಇಲ್ಲಿ ನಟಿಸಿದ್ದಾರೆ. ಇವರ ಅಭಿನಯವನ್ನು ಜನ ಅಡ್ಡಿ ಇಲ್ಲ ಅನ್ನುವಷ್ಟು ಒಪ್ಪಿದ್ದಾರೆ. ಕುರುಡಿ ಬಣಕಾರ ಅವರ ನಿರ್ದೇಶನವನ್ನೂ ಜನ ಕೈ ಬಿಟ್ಟಿಲ್ಲ.
NRB

ಚಿತ್ರದ ನಾಯಕ ಹಾಗೂ ನಾಯಕಿ ವೈದ್ಯರಾಗಿ ಮಿಂಚಿದ್ದಾರೆ. ಈ ರೀತಿ ಚಿತ್ರ ಇದುವರೆಗೂ ಸಾಲು ಸಾಲಾಗಿ ಬರುತ್ತಿರುವ ಸ್ಲಂ ರಿಲೇಟೆಡ್ ಚಿತ್ರವಲ್ಲ. ಕತೆ ಹಾಗೂ ಚಿತ್ರಕ್ಕೆ ಒಂದು ಹೈಟೆಕ್ ಟಚ್ ಇದೆ. ಸಾಕಷ್ಟು ಅವಕಾಶಗಳಿದ್ದು, ನಿರ್ದೇಶಕರು ಕೆಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಮಧುರ ಪ್ರೀತಿಯನ್ನು ತೋರಿಸುವ ಚಿತ್ರದಲ್ಲಿ ಅಭಿನಯವನ್ನು ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ನಾಯಕಿ ಯಾವುದೇ ತರಬೇತಿ ಇಲ್ಲದೇ ಸಹಜವಾಗಿ ನಟಿಸಿದ್ದಾಳೆ. 25 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಿದ್ದು ಎಲ್ಲೆಡೆ ಪರವಾಗಿಲ್ಲ ಅನ್ನುವಂತೆ ಪ್ರತಿಕ್ರಿಯೆ ಪಡೆದಿದೆ. ಗಂಧರ್ವ ನೀಡಿರುವ ಸಂಗೀತವು ಚಿತ್ರದ ಐದು ಹಾಡುಗಳಿಗೆ ಜೀವ ತುಂಬಿದೆ.

ಚಿತ್ರವನ್ನು ವೀಕ್ಷಿಸಿದ ನೋಡುಗ ಚಿತ್ರವನ್ನು ಅಡ್ಡಿ ಇಲ್ಲ ಎಂದಿದ್ದಾರೆ. ಹೊಸಬರ ಯತ್ನ ಕೊನೆಗೂ ಫಲ ಕೊಟ್ಟಿದೆ ಅಂದರೆ ತಪ್ಪಾಗದು.

Share this Story:

Follow Webdunia kannada