Article Kannada Cinema Review %e0%b2%ae%e0%b3%8a%e0%b2%97%e0%b3%8d%e0%b2%97%e0%b2%bf%e0%b2%a8 %e0%b2%9c%e0%b2%a1%e0%b3%86 108042100010_1.htm

Select Your Language

Notifications

webdunia
webdunia
webdunia
webdunia

ಮೊಗ್ಗಿನ ಜಡೆ

ಮೊಗ್ಗಿನ
ಕೇವಲ ಪ್ರೀತಿ, ಪ್ರೇಮ ಹಾಗೂ ಹೊಡೆದಾಟದ ಚಿತ್ರಗಳೇ ಬರುತ್ತಿರುವ ಸಮಯದಲ್ಲಿ ಇಂದಿನ ಆಧುನಿಕ ಸಮಾಜದಲ್ಲಿ ಮನುಷ್ಯ ಸಂಬಂಧಗಳ ಮೌಲ್ಯವನ್ನು ಬಿಂಬಿಸುವಂತಹ ಒಂದು ಪ್ರಯತ್ನವನ್ನು ಮೊಗ್ಗಿನ ಜಡೆ ಚಿತ್ರದ ಮೂಲಕ ನಿರ್ದೇಶಕ ಪಿ.ಆರ್. ರಾಮದಾಸ್ ನಾಯ್ಡು ಮಾಡಿದ್ದಾರೆ. ಬಿಡುಗಡೆಗೆ ಮುನ್ನ ಇದರ ಬಗ್ಗೆ ಇದ್ದ ಎಲ್ಲ ಸಂದೇಹವನ್ನು ಮರೆಸಿ ಚಿತ್ರ ಆಶಾಭಾವನೆಯನ್ನು ಮೂಡಿಸಿದೆ.

ಅವಿಭಕ್ತ ಕುಟುಂಬವೊಂದು ವಿಭಕ್ತ ಕುಟುಂಬವಾದಾಗ ಅದು ಅನುಭವಿಸುವ ಪಾಡನ್ನು ಮೊಗ್ಗಿನ ಜಡೆ ಚಿತ್ರದಲ್ಲಿ ಚಿತ್ರಿಸಲಾಗಿದೆ. ವಿಭಕ್ತ ಕುಟುಂಬದ ಸ್ಥಿತ್ಯಂತರ ಮತ್ತು ಅದರ ದುಷ್ಪರಿಣಾಮಗಳನ್ನು ಚಿತ್ರಿಸಲು ನಿರ್ದೇಶಕರು ನಗರವಾಸಿ ಕುಟುಂಬವೊಂದನ್ನು ಆಯ್ದುಕೊಂಡಿದ್ದಾರೆ.

ಬಹುರಾಷ್ಟ್ತ್ರೀಯ ಕಂಪೆನಿಯೊಂದರ ಉದ್ಯೋಗಿ ರಘು (ರಾಜೇಶ್), ಆತನ ಪತ್ನಿ ಕಾಲ್‌ಸೆಂಟರ್ ಉದ್ಯೋಗಿ ರೇಖಾ (ಪವಿತ್ರಾ ಲೋಕೇಶ್) ಮತ್ತು ಅವರ ಮಗಳು ಪ್ರಿಯಾ (ಬೇಬಿ ಶ್ರೇಯಾ) ಹಾಗೂ ರಘುವಿನ ತಂದೆ, ತಾಯಿ ಆರಂಭದಲ್ಲಿ ಒಟ್ಟಿಗೆ ಇರುತ್ತಾರೆ. ಮೊದಮೊದಲು ಅತ್ತೆ ಸೊಸೆ ನಡುವಣ ಕಾದಾಟಗಳು ಸಾಮಾನ್ಯವೆಂದು ಕಾಣುತ್ತದೆ. ಆದರೆ ಮಗಳು ಪ್ರಿಯಾಳ ಎಳೆ ಮನಸಿನ ಭಾವನೆಗಳು ಇಲ್ಲಿ ಪರಿಣಾಮಕಾರಿಯಾಗಿ ಬಿಂಬಿತವಾಗಿರುವುದು ಚಿತ್ರದ ಒಟ್ಟಾರೆ ಆಶಯವನ್ನು ಎತ್ತಿ ಹಿಡಿಯುತ್ತವೆ. ಚಿತ್ರದಲ್ಲಿ ನಾಟಕೀಯತೆಯ ಪ್ರಮಾಣ ಸ್ವಲ್ಪ ಹೆಚ್ಚೆನಿಸಿದರೂ ಚಿತ್ರ ಆಸಕ್ತಿದಾಯಕವಾಗಿದೆ. ಪತ್ನಿ ಮತ್ತು ತಾಯಿಯ ಜಗಳದಲ್ಲಿ ಬಲಿಪಶುವಾಗುವ ಮಗನ ಪಾತ್ರದಲ್ಲಿ ರಾಜೇಶ್ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಅಜ್ಜ-ಅಜ್ಜಿಯ ಪ್ರೀತಿಗೆ ಹಾತೊರೆಯುವ ಮೊಮ್ಮಗಳ ಪಾತ್ರದಲ್ಲಿ ಬೇಬಿ ಶ್ರೇಯಾಳ ಅಭಿನಯ ಮನತಟ್ಟುತ್ತದೆ. ಅವಿಭಕ್ತ ಕುಟುಂಬವನ್ನು ದೂಷಿಸಿ ವಿಭಕ್ತ ಕುಟುಂಬವನ್ನು ಬಯಸುವ ಇಂದಿನ ಯುವ ಜನತೆಗೆ ಈ ಚಿತ್ರ ಒಂದು ಪಾಠವಾಗಲಿದೆ.

Share this Story:

Follow Webdunia kannada