Article Kannada Cinema Review %e0%b2%ae%e0%b3%80%e0%b2%b0%e0%b2%be %e0%b2%b9%e0%b2%ae%e0%b2%be%e0%b2%b0%e0%b2%be %e0%b2%aa%e0%b3%8d%e0%b2%af%e0%b2%be%e0%b2%b0%e0%b2%be 107080200019_1.htm

Daily Horoscope

Select Your Language

Notifications

webdunia
webdunia
webdunia
webdunia

ಮೀರಾ ಹಮಾರಾ ಪ್ಯಾರಾ..

ಕನ್ನಡಸಿನಿಮಾ
ಸಂಗೀತಗಾರ್ತಿ ಮೀರಾ ಶಾಂತ ಸ್ವಭಾವದ ಉಪನ್ಯಾಸಕ ಮಾಧವನನ್ನು ಮದುವೆಯಾಗುತ್ತಾಳೆ. ಸೀತಾರಾಂ ಕಥೆಯಂದ ಮೇಲೆ ಸೆಂಟಿಮೆಂಟ್ಸ್, ಫ್ಯಾಮಿಲಿ ಫ್ರೇಂ ಇರಬೇಕು ಅನ್ನೌ ನಿಮ್ಮ ನೀರೀಕ್ಷೆ ಸುಳ್ಳಾಗೋಲ್ಲ.

ಗಂಡನದು ಬಡ ಕುಟುಂಬ. ಗಂಡನಿಗೋ ಐ.ಎ.ಎಸ್. ಓದೋ ಆಸೆ ಆದರೆ ಬಡತನ ಬಿಡಬೇಕಲ್ಲ ನಂಬಿ ಕೆಟ್ಟವರಿಲ್ಲವೋ ಎಂಬಂತೆ ಕಟ್ಟಿಕೊಂಡು ಬಂದ ಪತ್ನಿ ತನ್ನ ತಂದೆ ಮನೆ ಮಾರಿಯಾದರೂ ಗಂಡನ ಆಸೆಗೆ ಇಂಬು ಕೊಡಬೇಕೂಂತ ಯತ್ನಿಸುತ್ತಾಳೆ.

ಆದರೆ ತಾನೊಂದು ಬಗೆದರೆ ಮಾನವ ಬೇರೊಂದು ಬಗೆವುದು ದೈವ ಎಂಬ ಆ ಯತ್ನ ವಿಫಲವಾದಾಗ ದಾರಿಕಾಣದಾಗಿದೆ ರಾಘವೇಂದ್ರನೇ ಎನ್ನುತ್ತಾ ಪತ್ನಿ ವಿಲನ್ ರಾಘವನ ಮೊರೆಹೋಗುತ್ತಾಳೆ. ಅವನ ಫೈನಾನ್ಸ್ ಕಂಪನಿಯಿಂದ ಸಾಲ ತಂದು ಗಂಡನಿಗೆ ಕೊಡುತ್ತಾಳೆ.

ಅಷ್ಟು ಹೊತ್ತಿಗೆ ಸಿನಿಮಾಕ್ಕೆ ಏಕತಾ ಕಪೂರಳ ಮೇಕಪ್ ಟಚ್ ಆಗಿರುತ್ತದೆ. ಮುಂದಿನದನ್ನ ನೀವೇ ಊಹಿಸಿಕೊಳ್ಳ ಬಹುದು. ಗಂಡ ಮಾಡಿದ ಸಾಲ ತೀರಿಸಲಿಕ್ಕಾಗಿ ಪತ್ನಿ ವಿಲನ್ ಬಾರ್ನಲ್ಲಿ ಗುಟ್ಟಾಗಿ ಕುಣಿದು ಕುಪ್ಪಳಿಸುತ್ತಾಳೆ.

ಆಕೆಯ ಪತಿ ಐ.ಎ.ಎಸ್. ಅಧಿಕಾರಿಯಾಗಿ ಅದೇ ಊರಿಗೆ ಬಂದವನೇ ರಾಘವ್ನ ದಾದಾಗಿರಿಗೆ ಸೆಡ್ಡು ಹೊಡೆಯುತ್ತಾನೆ. ಅದೇ ವೇಳೆಗೆ ಪತ್ನಿಯ ಗುಟ್ಟೆಲ್ಲಾ ರಟ್ಟಾಗಿ ರಂಪಾಟ ಶುರುವಾಗುತ್ತದೆ.

ಮೀರಾ.. ಮಾಧವ.. ರಾಘವ..
ಮಾಧವನ ಮೊಂಡಾಟಕ್ಕೆ ವಿರುದ್ಧವಾಗಿ ರಾಘವನೂ ತೊಡೆ ತಟ್ಟಿ ನಿಲ್ಲುತ್ತಾನೆ ಊರು ಬಿಟ್ಟು ಹೇಗೆ ದಬ್ಬುತ್ತೀರೋ ನಾನೂ ನೋಡುತ್ತೀನೀ ಅನ್ನುತ್ತ ಮೋರೆ ತಿರುವಿ ಸಾಲ ಕೊಟ್ಟಾಗ ತೆಗೆದುಕೊಂಡ ಬಾಂಡ್ ಬೆದರಿಕೆ ಹಾಕುತ್ತಾನೆ.
ಅದರಲ್ಲಿನ ಪೋರ್ಜರಿ ಮಾಹಿತಿ ಭರ್ಜರಿಯಾಗಿ ಹೊರಹಾಕುತ್ತೇನೆ ಎಂದು ಹೆದರಿಸುತ್ತಾನೆ. ಪತಿಯೇ ಪರದೈವ ಎಂದು ನಂಬಿದ್ದ ಮೀರಾ ಗಂಡನಿಗಾಗಿ ಖಳನತ್ತ ಗುಂಡು ಹಾರಿಸುತ್ತಾಳೆ. ಮುಂದಿನದು ನೀವೇ ನೋಡಬೇಕು.

ತ್ಯಾಗಮ್ಮಗಳನ್ನು ನಿರಾಳವಾಗಿ ಸೃಷ್ಟಿಸಿ ಕಲ್ಪನೆಯ ಬಲೆಗಳಲ್ಲಿ ಅವರು ಸಿಕ್ಕಿ ಒದ್ದಾಡುವಾಗ ಸುರಿಯುವ ಒಂದೊಂದು ಕಣ್ಣ ಹನಿಗಳನ್ನು ಆಯ್ದು ದುಡ್ಡು ಮಾಡುವ ತಂತ್ರವನ್ನು ಹೇಗೆ ಟಿ.ಎನ್.ಸಿ. ಯವರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆಂದು ಪ್ರೇಕ್ಷಕರೇ ವಿಮರ್ಶಿಸಬೇಕು.

`ವಸಂತ... ವಸಂತ...' ಹಾಡನ್ನು ಹೊರತು ಪಡಿಸಿದರೆ ಮತ್ತಾವ ಹಾಡುಗಳು ಮನ ಮುಟ್ಟುವಂತಿಲ್ಲ. ಹಂಸಲೇಖಾರವರು ಗೀತೆಗಳಲ್ಲಿ ಮಾಧುರ್ಯ ತುಂಬಲೆತ್ನಿಸಿದರೂ ನೆನಪಿನಲ್ಲಿ ಉಳಿಯುವಂತೆ ಮಾಡುವಲ್ಲಿ ಸೋತಿದ್ದಾರೆ.

ಕಪ್ಪು ಬಿಳುಪಿನ ಕಾಲದ ಓಬೀರಾಯನ ಕಥೆಯನ್ನು ಹೈಬ್ರಿಡ್ ಯುಗದಲ್ಲಿ ಪ್ರಸ್ತುತ ಪಡಿಸಲೆತ್ನಿಸಿದ ಟಿ.ಎನ್.ಸಿ.ಯವರ ಎದೆಗಾರಿಕೆಯನ್ನು ಮೆಚ್ಚಲೇ ಬೇಕು. ಇನ್ನು ನಾಯಕ ದಿಗಂತ್ ನಟನೆಯಲ್ಲಿ ಪರವಾಗಿಲ್ಲ ಎಂದೆನಿಸದರೆ ವಿಲನ್ ಪಾತ್ರದ ತಿಲಕ್ ಮೆಚ್ಚುವಂತೆ ನಟಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ತೇವಲವಾದ ಕಥೆಯ ಹಂದರದಲ್ಲೂ ಅಷ್ಟೇನು ಕಳಪೆಯಲ್ಲದ ಸುಂದರ ಚಿತ್ರಣ ಪ್ರೇಕ್ಷಕರನ್ನು ಸ್ವಲ್ಪ ಹೊತ್ತು ಕೂಡಿಸುತ್ತದೆ.

ಕಿರುತೆರೆಗೂ ಹಿರಿತೆರೆಗೂ ಇರುವ ನಡುವಿನ ಅಂತರವನ್ನು ಮನಗಾಣುವಂತೆ ಮಾಡುತ್ತದೆ. ಚಿತ್ರ ಮುಗಿದಾದ ಮೇಲೆ ಹೊರ ಬಂದ ಪ್ರೇಕ್ಷಕ `ಏ ಮೀರಾ ಹಮಾರಾ ಪ್ಯಾರಾ...' ಎಂದು ನಿಟ್ಟುಸಿರಿಟ್ಟರೆ ತಪ್ಪೇನಿಲ್ಲ ನೀವೇನಂತೀರಿ?

Share this Story:

Follow Webdunia kannada