Select Your Language

Notifications

webdunia
webdunia
webdunia
webdunia

ಪ್ರೀತಿ, ಪ್ರೇಮ, ಪ್ರಣಯ: ಇದು ಒಲವೇ ವಿಸ್ಮಯ

ಪ್ರೀತಿ, ಪ್ರೇಮ, ಪ್ರಣಯ: ಇದು ಒಲವೇ ವಿಸ್ಮಯ
MOKSHA
ಧರ್ಮ ಕೀರ್ತಿರಾಜ ಅವರ ಪರಿಪೂರ್ಣ ನಾಯಕನಾಗಿರುವ ಒಲವೇ ವಿಸ್ಮಯ ಚಿತ್ರ ಈ ವಾರ ಬಿಡುಗಡೆಗೊಂಡಿದೆ. ಎಲ್ಲ ಚಿತ್ರಗಳಂತೆ ಪ್ರೇಮ ಕಥಾನಕವನ್ನೇ ಮುಖ್ಯ ಕಥಾಹಂದರವಾಗಿಸಿರುವ ಈ ಚಿತ್ರ ಪ್ರೇಮಿಗಳಿಗೆ ಒಂದಿಷ್ಟು ಮುದ ನೀಡಬಲ್ಲ, ಸಾಮಾನ್ಯ ಚಿತ್ರ.

ಅಂಗವಿಕಲ ನಾಯಕನ ಬವಣೆಯ ಕಥೆ ಇದು. ಒಬ್ಬಳು ಕೈಕೊಟ್ಟಳೆಂದು ಮಡಿಕೇರಿಗೆ ಬರುತ್ತಾನೆ. ಅಲ್ಲಿ ಇನ್ನೊಬ್ಬಳು ಸಿಗುತ್ತಾಳೆ. ಅವಳೂ ಈತ ಹೆಳವ ಎಂಬ ಕಾರಣಕ್ಕೆ ಬಿಟ್ಟು ಹೋಗುತ್ತಾಳೆ. ಮೊದಲಿನವಳು ಬಿಡಲು ಒಂದು ಕಾರಣ ಇರುತ್ತದೆ. ಅದೇ ಈ ಚಿತ್ರದ ನಿಜವಾದ ಸಸ್ಪೆನ್ಸ್. ನೋಡಲು ಚಿತ್ರ ಮಂದಿರಕ್ಕೆ ಹೋಗಬೇಕು.

ಚಿತ್ರದಲ್ಲಿ ಅನಂತನಾಗ್ ಬಿಟ್ಟರೆ ಯಾವ ಪಾತ್ರಕ್ಕೂ ಅಷ್ಟು ಜೀವ ಇಲ್ಲ. ಪ್ರೀತಿಯನ್ನು ಪೋಷಿಸಲು ಹರ ಸಾಹಸ ಪಡುವುದರಲ್ಲೇ ಚಿತ್ರ ಮುಗಿದು ಹೋಗುತ್ತದೆ. ಕನ್ನಡದಲ್ಲೊಬ್ಬ ಚಾಕೊಲೇಟ್ ಹೀರೋ ಇಲ್ಲ ಎನ್ನುವ ಕೊರಗನ್ನು ನಾಯಕ ನಟ ಕೀರ್ತಿರಾಜ್ ನಿವಾರಿಸಿದ್ದಾರೆ. ಇದನ್ನು ಬಿಟ್ಟರೆ ಅವರಲ್ಲಿ ಬೇರೆ ಪ್ರತಿಭೆ ಇಲ್ಲ. ಚಿತ್ರದಲ್ಲಿ ರಾಜು ತಾಳಿಕೋಟೆ ಅವರಿಂದಲೂ ಯಾರನ್ನೂ ನಗಿಸಲು ಆಗುವುದಿಲ್ಲ. ಅಷ್ಟು ಹಾಸ್ಯಕ್ಕೆ ಒತ್ತು ನೀಡಿದ್ದಾರೆ ನಿರ್ದೇಶಕರು.

ನಾಯಕಿ ಪ್ರತಿಭಾರಾಣಿಗೆ ಕುಣಿಯಲು ಆಗಲ್ಲ, ಕಾರಣ ಅಂಗಳ ಡೊಂಕು. ಡ್ರೆಸ್ಸಿಂಗ್ ಸೆನ್ಸ್ ಅಂತೂ ಇಲ್ಲವೇ ಇಲ್ಲ. ಅಭಿನಯವನ್ನು ಎಲ್ಲಾದರೂ ಕಲಿತು ಬಂದರೆ ಒಳಿತು ಅನ್ನಿಸುತ್ತದೆ. ಇದೆಲ್ಲಾ ಕಾರಣದಿಂದ ನೀವು ಚಿತ್ರ ನೋಡಲೇಬೇಕೆಂಬ ಒತ್ತಾಯವನ್ನೂ ಯಾರೂ ಮಾಡಲ್ಲ.

Share this Story:

Follow Webdunia kannada