ಪುತ್ರ ಚಿತ್ರವಿಮರ್ಶೆ; ನೋಡಿದ ಅಪ್ಪ-ಮಕ್ಕಳಿಗೆ ಲಾಭ!
ಚಿತ್ರ: ಪುತ್ರತಾರಾಗಣ: ದಿಗಂತ್, ಅವಿನಾಶ್, ಸುಪ್ರೀತಾನಿರ್ದೇಶನ: ಉಮಾಕಾಂತ್ ವಿ.ಸಂಗೀತ: ರಮೇಶ್ ರಾಜಾಅಪ್ಪ-ಮಕ್ಕಳ ಬಾಂಧವ್ಯಕ್ಕೆ ಹೆಚ್ಚು ಮೀಸಲಾದ ಚಿತ್ರ ಇತ್ತೀಚೆಗೆ ಕನ್ನಡದಲ್ಲಿ ಬಂದಿಲ್ಲ. ಅಂತಹದ್ದೊಂದು ಅಪರೂಪದ ಚಿತ್ರ ಸಾಹಸಸಿಂಹ ವಿಷ್ಣುವರ್ಧನ್ 'ಸಿರಿವಂತ'ದ ಮೂಲಕ ಮಾಡಿದ್ದರು. ಅದು ತೆಲುಗಿನ ರಿಮೇಕ್. ಈಗ ನಮ್ಮ ಮುಂದಿರುವ 'ಪುತ್ರ'ನೂ ಇದೇ ವಿಭಾಗಕ್ಕೆ ಸೇರಿದ ಚಿತ್ರ.
ಅಪ್ಪ-ಮಗ ಹೇಗಿರಬೇಕು? ತನ್ನ ಮಗನ ಬಗ್ಗೆ ಅಪ್ಪ ಹೊಂದಿರುವ ಕಾಳಜಿಯೇನು? ಅದನ್ನು ಆತ ಯಾಕೆ ಪ್ರದರ್ಶನಕ್ಕಿಡದೆ ಅಮುಕಿಕೊಂಡಿರುತ್ತಾನೆ? ಅಪ್ಪ-ಮಕ್ಕಳೆಂದರೆ ಹೀಗೆಯೇ ಇರಬೇಕಾ? ಇಂತಹ ಹತ್ತಾರು ಪ್ರಶ್ನೆಗಳಿಗೆ ಒಂದು ಹಂತದವರೆಗೆ ಉತ್ತರ ನೀಡುವಲ್ಲಿ 'ಪುತ್ರ' ಯಶಸ್ವಿಯಾಗಿದೆ.