Select Your Language

Notifications

webdunia
webdunia
webdunia
webdunia

ನಿರೀಕ್ಷೆಯ ಮಟ್ಟ ತಲುಪದ ಜಂಗ್ಲಿ

ವಿಜಯ್
ರವಿಪ್ರಕಾಶ್ ರ

NRB
ಬಹುನೀರೀಕ್ಷೆಯ ಜಂಗ್ಲಿ ಚಿತ್ರ ಈ ವಾರ ಬಿಡುಗಡೆಯಾಗಿದೆ. ಇದು ವಿಜಯ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ. ನಿರ್ದೇಶಕ ಸೂರಿ ಉತ್ತಮ ಕಥೆಯನ್ನು ಆಯ್ಕೆ ಮಾಡಿದರೂ ನಿರೂಪಣೆಯಲ್ಲಿ ಎಡವಿದ್ದಾರೆ. ದುನಿಯಾದ ಸೂರಿಗೂ ಜಂಗ್ಲಿ ಸೂರಿಗೂ ತುಂಬಾ ವ್ಯತ್ಯಾಸಗಳಿವೆ. ಯಾಕೋ ಸೂರಿ ತಮ್ಮ ಹಿಂದಿನ ಫಾರ್ಮ್ ಕಳೆದುಕೊಂಡಂತೆ ಕಾಣುತ್ತದೆ.

ಚಿತ್ರದಲ್ಲಿ ವಿಜಯ್ ದೇಹ ಸೌಂದರ್ಯ ಹಾಗೂ ಫೈಟಿಂಗ್ಗೆ ಮಹತ್ವ ನೀಡಲಾಗಿದೆ. ಅನಾವಶ್ಯಕವಾಗಿ ಸಂಭಾಷಣೆಗಳು ಬರುತ್ತವೆ. ವಿರಾಮದ ನಂತರ ಬರುವ ಕ್ಲೈಮ್ಯಾಕ್ಸ್‌ನ್ನು ನೋಡುತ್ತಿರುವಂತೆ ತಮಿಳಿನ ಅಂಜಾದೆ ಚಿತ್ರದ ಕ್ಲೈಮ್ಯಾಕ್ಸ್ ನೆನಪಾಗುತ್ತದೆ.

ದುನಿಯಾದ ಸೂರಿ ಜಂಗ್ಲಿಯ ಕೆಲವು ದೃಶ್ಯಗಳಲ್ಲಿ ಕಾಣಸಿಗುತ್ತಾರೆ. ಚಿತ್ರದ ಮೊದಲ ಶಾಟ್ಸ್ ಹಾಲಿವುಡ್ ಶೈಲಿಯಲ್ಲಿದೆ. ಆದರೆ ಇಂತಹ ಕೆಲವೇ ಕೆಲವು ದೃಶ್ಯಗಳಿರುವುದರಿಂದ ಚಿತ್ರ ಸೊರಗಿದೆ. ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದ ಸೂರಿ ಕೊನೆಗೂ ಗಾಂಧಿನಗರದ ಸಿದ್ಧಸೂತ್ರಗಳಾದ ಫೈಟ್, ಹಾಡುಗಳಿಗೆ ಮೊರೆ ಹೋಗಿದ್ದಾರೆ.

ಕೊನೆಗೂ ದುನಿಯಾ ಸೂರಿ, ವಿಜಯ್ ಹಾಗೂ ರಂಗಾಯಣ ರಘು ಜೊತೆಯಾದರಲ್ಲ ಎಂದು ಸಂತೋಷಗೊಂಡು ಚಿತ್ರ ನೋಡಲು ಹೋದ ಅವರ ಅಭಿಮಾನಿಗಳಿಗೆ ನಿರಾಶೆಯಾಗುತ್ತದೆ. ಚಿತ್ರದಲ್ಲಿ ಪ್ರೇಮಕಥೆಯ ಜೊತೆಗೆ ಅಂಡರ್ವರ್ಲ್ಡ್ ದೃಶ್ಯಗಳನ್ನು ಸೂರಿ ತೋರಿಸಿದ್ದಾರೆ. ವಿಜಯ್ ಫೈಟಿಂಗ್‌ನಲ್ಲಿ ಹೊಸತನವಿದೆ. ಆದರೆ ಚಿತ್ರದ ಕೆಲವು ದೃಶ್ಯಗಳನ್ನು ನೋಡುತ್ತಿದ್ದಂತೆ ಯಾವುದೇ ಕಾಮಿಡಿ ದೃಶ್ಯ ನೋಡಿದ ಅನುಭವವಾಗುತ್ತದೆ.

ಚಿತ್ರದ ಹಾಡುಗಳು ಇಷ್ಟವಾಗುತ್ತವೆ. ಅಂದ್ರಿತಾ ರೇ ಇಲ್ಲಿ ಮೈ ಚಳಿ ಬಿಟ್ಟು ನಟಿಸಿ ಗಾಂಧಿನಗರಕ್ಕೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಕ್ಯಾಮರಾ ಓಕೆ. ನಿರ್ದೇಶಕ ಸೂರಿ ಚಿತ್ರಕಥೆ ಹಾಗೂ ನಿರೂಪಣೆಯನ್ನು ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ ಚಿತ್ರ ಚೆನ್ನಾಗಿ ಮೂಡಿ ಬರುತಿತ್ತು. ಮತ್ತೊಮ್ಮೆ ಸೂರಿ ಫಿನಿಕ್ಸ್‌ನಂತೆ ಎದ್ದು ಬರಬೇಕಾಗಿದೆ.

Share this Story:

Follow Webdunia kannada