Select Your Language

Notifications

webdunia
webdunia
webdunia
webdunia

ನಿರೀಕ್ಷೆ ಮಟ್ಟ ತಲುಪದ ಸತ್ಯು ಅವರ ಇಜ್ಜೋಡು

ನಿರೀಕ್ಷೆ ಮಟ್ಟ ತಲುಪದ ಸತ್ಯು ಅವರ ಇಜ್ಜೋಡು
MOKSHA
ಎಂ.ಎಸ್. ಸತ್ಯು ಬಹು ಸುದೀರ್ಘ ವಿರಾಮದ ನಂತರ ನಿರ್ಮಿಸಿದ ಕಲಾತ್ಮಕ ಚಿತ್ರ ಇಜ್ಜೋಡು. ಈವರೆಗೆ ತಮ್ಮ ಅತ್ಯುತ್ತಮ ಕೆಲಸಕ್ಕೆ ಹೆಸರಾಗಿರುವ ಸತ್ಯು, ಈ ಚಿತ್ರದಲ್ಲೂ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಆದರೂ ಒಂದೇ ಮಾತಿನಲ್ಲಿ ಹೇಳೋದಾದರೆ ಸತ್ಯು ಅವರಂಥ ಪರಿಪಕ್ವ ನಿರ್ದೇಶಕರಿಂದ ಹೊರಬಂದ ಕಾರಣದಿಂದ ನಿರೀಕ್ಷೆಯ ಮಟ್ಟ ತಲುಪಿಲ್ಲದಿರುವುದೇ ಚಿತ್ರ ಸಪ್ಪೆಯಾಗಿ ಕಂಡಿದೆ.

ದೇವದಾಸಿ ಪದ್ಧತಿಯ ಸುಳಿಯಲ್ಲಿ ಸಿಕ್ಕ ನಾಯಕಿಯನ್ನು ಅಕಸ್ಮಾತ್ ಸಂದರ್ಶಿಸುವ ನಾಯಕ ಆಕೆಯನ್ನು ಆ ವಿಷವರ್ತುಲದಿಂದ ಹೇಗೆ ಆಚೆ ತರುತ್ತಾನೆ ಎನ್ನುವುದೇ ಚಿತ್ರದ ಕಥಾ ವಸ್ತು. ನಾಯಕರಾಗಿ ಅನಿರುದ್ಧ್ ಉತ್ತಮವಾಗಿ ನಟಿಸಿದ್ದಾರೆ. ತಮಗೆ ಸಿಕ್ಕ ಅವಕಾಶವನ್ನು ಎನ್‌ಕ್ಯಾಶ್ ಮಾಡಿಕೊಂಡಿದ್ದಾರೆ ಅಂದರೆ ತಪ್ಪಾಗದು. ಚಿತ್ರದಲ್ಲಿ ಇವರದ್ದು ಒಬ್ಬ ಛಾಯಾಗ್ರಾಹಕನ ಪಾತ್ರ.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮಣಿಕಾಂತ್ ಕದ್ರಿ ಅವರು ಚಿತ್ರಕ್ಕೆ ಹೊಂದಿಕೆಯಾಗುವಂಥ ಹಿತಮಿತ ಸಂಗೀತ ನೀಡಿದ್ದಾರೆ. ರಿಲಯನ್ಸ್ ಸಂಸ್ಥೆಯ ನಿರ್ಮಾಣದ ಈ ಚಿತ್ರದಲ್ಲಿ ನಟಿ ಮೀರಾ ಜಾಸ್ಮಿನ್ ಲವಲವಿಕೆಯ ಅಭಿನಯ ನೀಡಿದ್ದಾರೆ. ಮೀರಾರ ಮಾತಿಗಿಂತಲೂ ಕಣ್ಣು ಮೊನಚಾಗಿದೆ. ಚಿತ್ರಕಥೆ, ಕಲೆ, ನಿರ್ದೇಶನಗಳೆಂಬ ಮೂರೂ ವಿಭಾಗದಲ್ಲಿ ಎಂ.ಎಸ್.ಸತ್ಯು ಕೆಲಸ ಮಾಡಿದ್ದಾರೆ.

ಆದರೂ ದೇವದಾಸಿಯಂಥ ವಿಚಾರವನ್ನು ಚಿತ್ರವನ್ನಾಗಿಸುವ ಸಂದರ್ಭ ಇನ್ನೂ ಕೊಂಚ ಹೆಚ್ಚು ಗಂಭೀರತೆಯ ಅಗತ್ಯವಿದೆ ಎನಿಸಿದರೂ ತಪ್ಪಿಲ್ಲ. ಕೇವಲ ಒಂದು ಭಾಷಣದಿಂದ ದೇವದಾಸಿಯಂಥ ಸಾಮಾಜಿಕ ಪಿಡುಗನ್ನು ತೊಡೆಯಲು ಶಕ್ತವಾಗಿದ್ದು ಸಿನಿಮಾದಲ್ಲಿ ಕ್ಲೀಷೆಯಾಗಿ ಕಂಡರೂ ತಪ್ಪಿಲ್ಲ. ಸತ್ಯು ಅಂಥವರ ಸಿನಿಮಾದಿಂದ ಇಂಥ ಕ್ಲೀಷೆ ಮಾತ್ರ ಅಪೇಕ್ಷಣೀಯವಲ್ಲ ಎಂದರೂ ತಪ್ಪಿಲ್ಲ. ಒಟ್ಟಾರೆ ಇಜ್ಜೋಡು ಸತ್ಯು ಅವರ ಅಭಿಮಾನಿಗಳ ನಿರೀಕ್ಷೆಯ ಮಟ್ಟಕ್ಕೆ ತಲುಪದಿದ್ದರೂ, ಒಂದು ಪ್ರಾಮಾಣಿಕ ಪ್ರಯತ್ನವಂತೂ ನಿಜ.

Share this Story:

Follow Webdunia kannada