ನಮ್ಮಣ್ಣ ಡಾನ್ ಚಿತ್ರವಿಮರ್ಶೆ; ಹೃದಯದೊಳಗೆ ನಗು
ಚಿತ್ರ: ನಮ್ಮಣ್ಣ ಡಾನ್ತಾರಾಗಣ: ರಮೇಶ್ ಅರವಿಂದ್, ಮೋನಾ ಪರ್ವೇಶ್, ರಾಜು ತಾಳಿಕೋಟೆ, ರಾಜೇಂದ್ರ ಕಾರಂತ್ನಿರ್ದೇಶನ: ರಮೇಶ್ ಅರವಿಂದ್ಸಂಗೀತ: ಮ್ಯಾಥ್ಯೂಸ್ ಮನು'
ನಮ್ಮಣ್ಣ ಡಾನ್' ವಿಭಿನ್ನ ಸಿನಿಮಾ ಅಂತ ವಿನೂತನವಾಗಿ ಪ್ರಚಾರ ಮಾಡಿ ಕುತೂಹಲ ಹುಟ್ಟಿಸಿದ್ದ ರಮೇಶ್ ಅರವಿಂದ್ ನಟ-ನಿರ್ದೇಶಕನಾಗಿ ನಿರಾಸೆ ಮಾಡಿಲ್ಲ. ಗಂಭೀರ ವಿಷಯದ ಜತೆ ಹಾಸ್ಯವನ್ನು ಹದವಾಗಿ ಬೆರೆಸಿ ಉಣ ಬಡಿಸಿದ್ದಾರೆ.ರಮೇಶ್ ಈ ಬಾರಿ ಆಯ್ದುಕೊಂಡಿರುವುದು ಹೃದಯಗಳದ್ದು. ಅಂದರೆ ಓರ್ವ ವೈದ್ಯನಾದವನು ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಲು ಹೊರಟಿದ್ದಾರೆ. ಅವರು ನೀಡಿರುವ ಸಂದೇಶದ ಬಗ್ಗೆ ಎರಡು ಮಾತೇ ಇಲ್ಲ. ಅದರ ನಡುವೆ ಹಾಸ್ಯ, ಮನರಂಜನೆಯನ್ನು ನೀಡಿದ್ದಾರೆ. ಲಾಜಿಕ್ ಮರೆತು ಚಿತ್ರ ನೋಡುವುದಾದರೆ ನಗಲು ಇದಕ್ಕಿಂತ ಹೆಚ್ಚು ಬೇರೇನೂ ಬೇಕಾಗಿಲ್ಲ.
ಇಡೀ ಚಿತ್ರ ಆಸ್ಪತ್ರೆಯೊಂದರ ಸುತ್ತ ಸುತ್ತುತ್ತದೆ. ಡಾ. ಅರ್ಜುನ್ (ರಮೇಶ್) ಅಲ್ಲಿನ ಡಾಕ್ಟರ್. ಜತೆಗಿದ್ದವನ ಕುತಂತ್ರದಿಂದ 22 ಮಂದಿ ಹೃದಯ ಸಮಸ್ಯೆಯಿರುವ ಮಕ್ಕಳು ಆಸ್ಪತ್ರೆ ಸೇರಿರುತ್ತಾರೆ. ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಅನಿವಾರ್ಯತೆ ಡಾ. ಅರ್ಜುನ್ನದ್ದು. ಆದರೆ ಇದಕ್ಕೆ ಆಸ್ಪತ್ರೆ ಮಾಲಕ ಒಪ್ಪಿಕೊಳ್ಳುವುದಿಲ್ಲ. ನಾವಿಲ್ಲಿ ಆಸ್ಪತ್ರೆ ಮಾಡಿರೋದು ಸಮಾಜ ಸೇವೆಗಲ್ಲ, ಸಂಪಾದಿಸೋದಿಕ್ಕೆ ಅಂತ ಹೇಳುತ್ತಾನೆ.ಹೃದ್ರೋಗ ತಜ್ಞ ರಮೇಶ್ ಹೃದಯದ ಉಸಾಬರಿ ಮಾಲಿನಿ (ಮೋನಾ ಪರ್ವೇಶ್) ಕೈಯಲ್ಲಿರುತ್ತದೆ. ಹೀಗಿರುವಾಗ ಆಕೆಯಿಂದಾದ ಅಪಘಾತದಲ್ಲಿ ಅಣ್ಣಾ ಡಾನ್ (ರಾಜೇಶ್ ಕಾರಂತ್) ಸಾಯುತ್ತಾನೆ. ಡಾನ್ ಸತ್ತಿರುವ ಸಂಗತಿ ಆತನ ಸಹೋದರ ಡಾನ್ ಮುತ್ತುವಿಗೆ (ರಾಜು ತಾಳಿಕೋಟೆ) ಗೊತ್ತಿರುವುದಿಲ್ಲ. ಬಚಾವ್ ಆಗಬೇಕೆನ್ನುವ ಮಾಲಿನಿ, ಡೆಡ್ ಬಾಡಿಯೊಂದಿಗೆ ಅರ್ಜುನ್ ಆಸ್ಪತ್ರೆಗೆ ಬರುತ್ತಾಳೆ.