Article Kannada Cinema Review %e0%b2%a8%e0%b2%95%e0%b3%8d%e0%b2%95%e0%b3%81%e0%b2%b9%e0%b2%97%e0%b3%81%e0%b2%b0%e0%b2%be%e0%b2%97%e0%b2%bf 107070300012_1.htm

Daily Horoscope

Select Your Language

Notifications

webdunia
webdunia
webdunia
webdunia

ನಕ್ಕುಹಗುರಾಗಿ

ನಕ್ಕುಹಗುರಾಗಿ
ರಮೇಶ್ ನಿರ್ದೇಶದ ಸತ್ಯವಾನ್ ಸಾವಿತ್ರಿ ಬಿಡುಗಡೆಗೊಂಡಿದೆ. ಗೆದ್ದರೆ ರಮೇಶ್ ಪಾಲಿಗೆ ದೊಡ್ಡ ಯಶಸ್ಸು. ಈ ಹಿಂದೆ ಬಿಸಿಬಿಸಿ, ಪರಿಪೂರ್ಣ ನಿರ್ದೇಶಕ ಎಂಬ ಹೆಗ್ಗಳಿಕೆ ಪಡೆದಿದ್ದ ರಮೇಶ್ ಸತ್ಯವಾನ್ ಸಾವಿತ್ರಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇಲ್ಲಿ ನವಿರಾದ ಕಥೆಯಿದೆ. ಹೊಸ ಆಲೋಚನೆಯ ನಿರೂಪಣೆಯಿದೆ. ನೋವಿನ ಸಂದರ್ಭಗಳನ್ನೂ ಹೇಗೆ ಹಾಸ್ಯಕ್ಕೆ ಒಗ್ಗಿಸಿಕೊಳ್ಳಬಹುದು ಎಂಬುದು ಮಾರ್ಮಿಕವಾಗಿ ಚಿತ್ರಿಸಿದ್ದಾರೆ ರಮೇಶ್ .

ಅದೇ ರಮೇಶ್ ಸ್ಪೆಷ್ಯಾಲಿಟಿ. ಹುಡುಗಿಯರನ್ನು ಚುಡಾಯಿಸುವ ಗೀಳಿನ ಯುವಕನೋರ್ವನ ಪಡಿಪಾಟಲು ಚಿತ್ರದ ಕಥಾ ವಸ್ತು. ಕಥೆ ಏನು ? : ಚಿತ್ರದಲ್ಲಿ ದಂತ ವೈದ್ಯ ಸತ್ಯವಾನ್. ಹುಡುಗಿಯರನ್ನು ಚುಡಾಯಿಸುವುದರಲ್ಲಿ ನಿಸ್ಸೀಮ.

ಸಹಜವಾಗಿ ಆತನ ರೂಪ, ಲಾವಣ್ಯಕ್ಕೆ ಮಾರು ಹೋಗುವ ಹುಡುಗಿರು ಇನ್ನೇನು ಅಂಟಿ ಕೊಳ್ಳುತ್ತಾರೆ ಎನ್ನುವ ವೇಳೆಗೆ ನನಗೆ ಮದುವೆಯಾಗಿದೆ. ಎಂದು ತನ್ನ ನೈಜ ಬಣ್ಣವನ್ನು ಬಯಲಿಗೆ ತರುತ್ತಾನೆ. ಚಿತ್ರದಲ್ಲಿ ನಟಿ ಜೆನ್ನಿಫರ್ ವಿಭಿನ್ನವಾಗಿ ಅಭಿನಯಿಸುತ್ತಾರೆ.

ಸತ್ಯವಾನ್ ಈ ರಿತಿ ಚುಡಾಯಿಸುತ್ತಾ ಇರುವಾದ ಮೋನಿಶಾಳನ್ನು ಒಲಿಸಕೊಳ್ಳುತ್ತಾನೆ. ಆದರೆ ಆಕೆ ಮದುವೆಯಾಗಲೇ ಬೇಕು ಎಂದು ಹಠ ಹಿಡಿಯುತ್ತಾಳೆ. ಕಥೆ ಹಿಗೆ ಸಾಗುತ್ತದೆ.

ಪ್ರೇಮದ ಗುಂಗಿನಲ್ಲಿ ದಂತ ವೈದ್ಯನೋರ್ವ ಸಿಲುಕಿದರೆ ಪೇಷೆಂಟ್ಗಳು ಏನೆಲ್ಲಾ ಫಜೀತಿ ಪಡಬಹುದು ಎಂಬುದನ್ನು ನಿರೂಪಕ ವಿಶಷ್ಟವಾಗಿ ರೂಪಿಸಿದ್ದಾನೆ.

ಅಂದ ಹಾಗೆ ರಮೇಶ್ ಚಿತ್ರದ ನಿರ್ದೇಶಕರೂ ಹೌದು. ದಂತ ವೈದ್ಯನ ಪಾತ್ರಧಾರಿಯೂ ಹೌದು. ಕೋಮಲ್ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ. ಗುರುಕಿರಣ್ ಸಂಗಿತ ವಿದ್ದೇ ಇದೆಯಲ್ಲ.

Share this Story:

Follow Webdunia kannada