Article Kannada Cinema Review %e0%b2%95%e0%b3%8d%e0%b2%b7%e0%b2%ae%e0%b2%bf%e0%b2%b8%e0%b2%bf %e0%b2%8e%e0%b2%b2%e0%b3%8d%e0%b2%b2%e0%b2%be %e0%b2%a4%e0%b2%ae%e0%b2%be%e0%b2%b7%e0%b3%86%e0%b2%97%e0%b2%be%e0%b2%97%e0%b2%bf 107080200020_1.htm

Daily Horoscope

Select Your Language

Notifications

webdunia
webdunia
webdunia
webdunia

ಕ್ಷಮಿಸಿ ಎಲ್ಲಾ `ತಮಾಷೆಗಾಗಿ'

ಕನ್ನಡಸಿನಿ
ಹಾಸ್ಯದ ಹೊನಲು ಬಾಡದ ಫಸಲು ಅನ್ನೋ ಮಾತಿಗೆ ವಿರುದ್ಧವಾಗಿ ಹಾಸ್ಯವು ತೆವಲು ಮೋಸದ ಸರಕಲು ಅನ್ನೌ ಹಾಗಿದೆ ಇಂದಿನ ಕಾಮಿಡಿ ಚಿತ್ರಗಳು.

ಕಾ.. ಕಾ.. ಎನ್ನುತ್ತಾ ಮಿಡಿ ತೊಟ್ಟ ಲಲನೆಯರ ಹಿಂದೆ ಬೀಳುವುದೇ ಕಾಮಿಡಿ ಅಂದುಕೊಂಡ ನಿರ್ದೇಶಕರಿಂದ ಆರೋಗ್ಯಮಯ ಹಾಸ್ಯದ ನೀರೀಕ್ಷೆ ಅಪಹಾಸ್ಯದ ಮಾತೇನೋ ಎಂಬ ಭಾವನೆ ಮೂಡುತ್ತಿದೆ.

ಕೋಡ್ಲುರವರ ಮತ್ತೊಂದು ಕಾಮಿಡಿ ಕೋಡು ಈ ರೀತಿ ಬ್ಯಾಡು ಥೀಮು ಹೊಂದಿರಬಾರದಿತ್ತು ನಗುವೆಂದರೆಮನ-ರಂಜಿಸುವಂತಿರಬೇಕು ಅದು ಬಿಟ್ಟು ಮನವನ್ನು `ನಾರಿಸೋ' ಸಲುವಾಗೇ ಅನವಶ್ಯಕ ಸನ್ನಿವೇಶಗಳ ಸುತ್ತಾ ಸುತ್ತಿಸಿ ಕೊನೆಗೆ ಎಲ್ಲಾ ತಮಾಷೆಗಾಗಿ ಎಂದು ಕೈ ಚೆಲ್ಲುವ ಪರಿ ಹೇಸಿಗೆ ತರುವ ಸಂಗತಿ.

ನಿರ್ದೇಶಕರ ಹಾಸ್ಯದ ಜಾಡಿನಲ್ಲಿ ಮದುವೆಯಾದ ಮೋಹನ್ (ಮೋಹನ್) ಮತ್ತು ರಾಜೇಶ್ (ರಾಜೇಶ್) ತಮ್ಮ ಹೆಂಡಂತಿಯರನ್ನು ಛೇಡಿಸಲು ಹರೆಯದ ಹುಡುಗಿಯರ ಹಿಂದೆ ಸುತ್ತಾಡಲಿಕ್ಕೆ ಶುರುಮಾಡುತ್ತಾರೆ.

ಅವರಿಗೆ ಬುದ್ದಿ ಕಲಿಸುವ ಸಲುವಾಗಿ ಅದೇ ಹೆಂಡತಿಯರು ಹೇಗೆ ಮದುವೆಯಾಗದ ಇಬ್ಬರು ಯುವಕರಾದ ಶಿವು (ಕೋಮಲ್) ಮತ್ತು ಅನಿಲ್ (ಅನಿರುದ್ಧ್) ಹಿಂದೆ ಬೀಳುತ್ತಾರೆ.

ಕೊನೆಗೆ ಅವರೇ ಪ್ರೀತಿಯ ಬಲೆಗೆ ಸಿಲುಕಿ ಒದ್ದಾಡಿ ಹೇಗೆ ಹಿಂದೆ ಬರುತ್ತಾರೆ ಎಂಬ ಹಳಸಲು ಕ್ಲೈಮ್ಯಾಕ್ಸ್ ನಿಂದ ಹೊರಬಂದಿಲ್ಲದಿರುವುದು ಕಾಣಬರುತ್ತದೆ.

ಕ್ಷಮಿಸಿ... ತಮಾಷೆಗಾಗಿ

ಮತ್ತೊಂದು ವಿಚಾರ ಒಂದು ಹುಡುಗ ಒಂದು ಹುಡುಗಿಯ ಹಿಂದೆ ಬಿದ್ದ ಮೇಲೆ ಪೂರಕವಾಗಿ ಹಾಡು ಇರಲೇಬೇಕಲ್ಲವೇ? ಅದರಲ್ಲೂ ಇಂದಿನ ಕಾನ್ಸೆಪ್ಟ್ ಪ್ರಕಾರ ಕೊನೇ ಪಕ್ಷ ಎರಡಾದರು ಹೊರದೇಶದಲ್ಲಿ ಶೂಟಿಂಗ್ ಮಾಡಿರಲೇ ಬೇಕಲ್ಲವೇ? ಹಾಂ ಈ ಎಲ್ಲಾ ಕೋಡ್`ವರ್ಡ್'ಗಳನ್ನು ಚಾಚೂತಪ್ಪದೆ ಡೀಕೋಡ್ ಮಾಡಿರುವ ನಿರ್ದೇಶಕರು ಅದಕ್ಕಾಗೇ ಬ್ಯಾಂಕಾಕ್ ದಡವನ್ನು ಸಹ ಮುಟ್ಟಿಬಂದಿದ್ದಾರೆ.

ಚಿತ್ರದ ಮೊದಲರ್ಧದ ಭಾಗ ಪಾತ್ರಗಳಿಂದಾಗಿ, ಪಂಚಿಂಗ್ ಡೈಲಾಗ್‌ಳಿಂದಾಗಿ ಹಾಸ್ಯದ ಹೊಸಿಲ ಹತ್ತಿರ ತಂದರೂ ಸಹ ಉಳಿದರ್ಧದಲ್ಲಿ ಅನಗತ್ಯ ಸನ್'ವೇಶ'ಗಳಿಂದ ದೂಡುವುದರಲ್ಲಿ ಎರಡನೇ ಮಾತಿಲ್ಲ.

ಇಡೀ ಚಿತ್ರದಲ್ಲಿ ಅನಿರುದ್ಧ್ ತಮ್ಮ ಪಾತ್ರಕ್ಕೆ ಕಳೆ ತಂದುಕೊಟ್ಟಿದ್ದರೆ ಸುಧಾರಾಣಿ ಅಭಿನಯದಲ್ಲಿ ತಮ್ಮ ಎಂದಿನ ನೈಜ್ಯತೆ ಕಾಪಾಡಿಕೊಂಡಿದ್ದಾರೆ ಎಂಬುದೇ ಚಿತ್ರದ ಪ್ಲಸ್ ಪಾಯಿಂಟ್. ಒಟ್ಟಿನಲ್ಲಿ ಹೇಳುವುದಾದರೆ ದಿಢೀರನೇ ಪ್ರತ್ಯಕ್ಷವಾಗುವ ವಿಭಿನ್ನ ಸನ್ನಿವೇಶಗಳ ತಾಕಲಾಟ, ತಿಕ್ಕಾಟದ ತೊಳಲಾಟದಲ್ಲಿ ಪ್ರೇಕ್ಷಕಮುಜುಗರ ಪಡುವಾಗಲೇ ಚಿತ್ರದ ಕೊನೆಯಂಕಣ ಮುಗಿದಿರುತ್ತದೆ.

ಸ್ವಾಮಿ ಇಲ್ಲಿ ನೀವು ಪ್ರಶ್ನೆ ಕೇಳಹೋಗಬೇಡಿ ಏಕೆಂದರೆ ನಿರ್ದೇಶಕರ ಪ್ರಕಾರ ಇದು ಬರೀ `ತಮಾಷೆಗಾಗಿ'ಯೇ ನಿರ್ಮಿಸಿದ ಚಿತ್ರ ತಾನೇ? ಚಿತ್ರತಂಡದಲ್ಲಿ ಪ್ರಫುಲ್ಲಾ ಶ್ರೀನಿವಾಸ್, ಸುಜಾತ ಭಾರದ್ವಾಜ್, ರಾಜೇಶ್ವರಿ ನಂದಕುಮಾರ್, ಗೌರಮ್ಮ ಮಲ್ಲಿಕಾರ್ಜುನಯ್ಯ ಮತ್ತು ಲಕ್ಷ್ಮಿ ಮಹಾಲಿಂಗಪ್ಪ ಮುಂತಾದವರಿದ್ದಾರೆ.

Share this Story:

Follow Webdunia kannada