ಒಲವಿನ ಓಲೆ ಚಿತ್ರವಿಮರ್ಶೆ: ಮರ್ಯಾದೆಯ ಮುಖಗಳು
ಚಿತ್ರ: ಒಲವಿನ ಓಲೆತಾರಾಗಣ: ಸಂತೋಷ್, ನೇಹಾ ಪಾಟೀಲ್, ಶಂಕರ್ ಅಶ್ವತ್ಥ್, ಅರುಣಾ ಬಾಲರಾಜ್ನಿರ್ದೇಶನ: ಟೇಶಿ ವೆಂಕಟೇಶ್ಸಂಗೀತ: ಯಶೋವರ್ಧನಸ್ಟಾರ್ ನಿರ್ದೇಶಕರೇ ಮನರಂಜನೆಯತ್ತ ಗುಳೇ ಹೊರಟಿರುವಾಗ, ಅನುಭವಿ ನಿರ್ದೇಶಕರೇ ಎಡವುತ್ತಿರುವಾಗ ಅಪರೂಪಕ್ಕೆಂಬಂತೆ ಫ್ಲಾಪ್ ನಿರ್ದೇಶಕರೊಬ್ಬರು ಗಮನ ಸೆಳೆದಿದ್ದಾರೆ. ಟೇಶಿ ವೆಂಕಟೇಶ್ ಸಾಮಾಜಿಕ ಸಮಸ್ಯೆಯ ನೈಜ ಕಥೆಯನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.ಅವರ ಆಯ್ಕೆ ಮರ್ಯಾದಾ ಹತ್ಯೆಗಳು. ಹಳ್ಳಿಯ ವಾತಾವರಣ ನೋಡಿದಾಗ, ಇದು ಈ ಕಾಲಕ್ಕೆ ಹೇಳಿದ ಕಥೆಯಲ್ಲ ಎಂಬ ಭಾವನೆ ಬಂದರೂ ಪತ್ರಿಕೆಗಳಲ್ಲಿ ಬರುವ ವರದಿಗಳನ್ನು ನೋಡಿದಾಗ ಅಷ್ಟೇ ನಿಜವಲ್ಲ ಎಂಬ ಭಾವನೆಯೂ ಬಂದಿರುತ್ತದೆ. ಆ ನಿಟ್ಟಿನಲ್ಲಿ ಚಿತ್ರ ಪ್ರಸ್ತುತವೆನಿಸುತ್ತದೆ.ಮೇಲ್ಜಾತಿಯ ಶ್ರೀಮಂತ ಹುಡುಗಿ ಮಲ್ಲಿಗೆ (ನೇಹಾ ಪಾಟೀಲ್) ಮತ್ತು ಕೆಳಜಾತಿಯ ಬಡವ, ಆದರೆ ಬುದ್ಧಿವಂತ ಹುಡುಗ ನರಸಿಂಹ (ಸಂತೋಷ್) ನಡುವಿನ ಪ್ರೀತಿಯ ಹಂದರ ಟೇಶಿ ವೆಂಕಟೇಶ್ ಆಯ್ಕೆ. ಇಬ್ಬರೂ ಕ್ಲಾಸ್‌ಮೇಟ್‌ಗಳಾಗಿರುತ್ತಾರೆ. ಮಲ್ಲಿಗೆಗೆ ಸಂತೋಷನನ್ನು ಪ್ರೀತಿಸಲು ಹಲವು ಕಾರಣಗಳಿರುತ್ತವೆ. ಆದರೆ ಸಂತೋಷನಿಗೆ ಪ್ರೀತಿಸದೇ ಇರಲು ಸಮಾಜದ ಅಡ್ಡವೆಂಬ ಗೋಡೆಯಿರುತ್ತದೆ. ಅದನ್ನು ನಿವಾರಿಸುವವಳು ಸಂತೋಷನ ತಾಯಿ.ಹೀಗಿದ್ದವರು ಎಲ್ಲಾದರೂ ಓಡಿ ಹೋಗಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಆದರೆ ಅಷ್ಟರಲ್ಲೇ ನಾಟಕದಂತೆ ನಡೆದು ಇನ್ನು ಸುಖಾಂತ್ಯವಾಗುತ್ತಿದೆ ಎಂಬಷ್ಟರಲ್ಲೇ ಆಘಾತ. ಅದೇನು ಅನ್ನೋದನ್ನು ಚಿತ್ರಮಂದಿರದಲ್ಲೇ ನೋಡಬೇಕು.ಹಳ್ಳಿ ಸೊಗಡನ್ನು ಕಟ್ಟಿ ಕೊಡುತ್ತಾ ಸಾಗುವ ನಿರ್ದೇಶಕರು ಅಲ್ಲಲ್ಲಿ ಎಡವಿದ್ದಾರೆ. ಆದರೂ ಅಚ್ಚರಿಗಳನ್ನು ನೀಡುತ್ತಾ ಹೋಗುತ್ತಾರೆ. ಯಾರೂ ನಿರೀಕ್ಷಿಸದ ಸಂಗತಿಗಳು ಧುತ್ತನೆ ಪ್ರತ್ಯೇಕವಾಗುತ್ತವೆ. ಲೋಪಗಳನ್ನು ಬದಿಗಿಟ್ಟು ನೋಡಿದರೆ ಖಂಡಿತಾ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು. ವಿಶಿಷ್ಟ ಅನುಭವ ಕಟ್ಟಿಟ್ಟ ಬುತ್ತಿ.ಇಡೀ ಚಿತ್ರದಲ್ಲಿ ನಿರ್ದೇಶಕರು ಜಾತಿಗಳು ಯಾವುವು ಎಂಬುದನ್ನು ಹೇಳದೆ ಜಾಣತನ ಮೆರೆದಿದ್ದಾರೆ. ಮಂಡ್ಯ ಜಿಲ್ಲೆ ಎಂಬುದನ್ನು ಬಿಟ್ಟರೆ ಬೇರೆ ಯಾವ ಉಲ್ಲೇಖವೂ ಇಲ್ಲ.ನಾಯಕ ಸಂತೋಷ್ ಹಳ್ಳಿ ಹುಡುಗನಾಗಿ ಇನ್ನೂ ಉತ್ತಮವಾಗಿ ನಟಿಸಬಹುದಿತ್ತು. ಮುಗ್ಧತೆ, ವಿನಯ ತೀರಾ ಜಾಸ್ತಿಯಾಯಿತೇನೋ ಎಂದು ಕೆಲವೆಡೆ ಹಿಂಸೆಯಾಗುತ್ತದೆ. ನಾಯಕಿ ನೇಹಾ ಪಾಟೀಲ್ ಸಿಕ್ಕಿದ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಂಡಿಲ್ಲ. ಆದರೆ ಶಂಕರ್ ಅಶ್ವತ್ಥ್ ಮಿಂಚುತ್ತಾರೆ. ಅವರ ಗಾಂಭೀರ್ಯ ಕೆ.ಎಸ್. ಅಶ್ವತ್ಥ್‌ರನ್ನು ನೆನಪಿಸುತ್ತದೆ.ಛಾಯಾಗ್ರಹಣ, ಸಂಗೀತ, ಸಂಕಲನ ಚಿತ್ರಕ್ಕೆ ಪೂರಕ ಎನಿಸುವುದಿಲ್ಲ.