Select Your Language

Notifications

webdunia
webdunia
webdunia
webdunia

ಎದ್ದು ಗೆದ್ದ ಮಂಜುನಾಥ

ಗುರುಪ್ರಸಾದ್
MOKSHA
ಚಿತ್ರ : ಏದ್ದೇಳು ಮಂಜುನಾಥ
ನಿರ್ದೇಶಕ : ಗುರುಪ್ರಸಾದ್
ತಾರಾಗಣ : ಜಗ್ಗೇಶ್, ಯಜ್ಞಾ ಶೆಟ್ಟಿ

ಮಠದ ಗುರು ಕೊನೆಗೂ ಗೆದ್ದಿದ್ದಾರೆ. ಹೌದು ಗುರುಪ್ರಸಾದ್- ಜಗ್ಗೇಶ್ ಜೋಡಿ ಎದ್ದೇಳು ಮಂಜುನಾಥ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ನಿರೂಪಣಾ ಶೈಲಿ, ಅಸಹ್ಯವಾಗದಂತಹ ಹಾಸ್ಯ ಸಂಭಾಷಣೆ ಮೆಚ್ಚುಗೆಗೆ ಪಾತ್ರವಾಗಿದೆ.

ಚಿತ್ರದಲ್ಲಿ ಜಗ್ಗೇಶ್ ಸೋಂಬೇರಿ. ಕೆಲಸ ಮಾಡದೆ ಮನೆಯವರಿಗೆಲ್ಲಾ ಕಷ್ಟ ಕೊಡುವುದೇ ಈತನ ಕಾಯಕ. ಇಂತಿಪ್ಪ ಸಂದರ್ಭದಲ್ಲಿ ತಮ್ಮ ಎಂದಿನ ಶೈಲಿಯ ವಿಶಿಷ್ಟ ಸಂಭಾಷಮೆಯ ಮೂಲಕ ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗುವಂತೆ ನಗಿಸಿದ್ದಾರೆ ಜಗ್ಗೇಶ್. ಪ್ರತಿಯೊಂದು ಮಾತು ವಾಸ್ತವಿಕತೆಗೆ ಹತ್ತಿರವಾಗಿದೆ. ಚಿತ್ರದೊಳಗೊಂದು ಚಿತ್ರ. ಕುರುಡನೊಬ್ಬ ಚಿತ್ರ ನಿರ್ದೇಶನ ಮಾಡಲು ಹೊರಡುವುದೇ ಚಿತ್ರದ ಕತೆ. ಕ್ಲೈಮಾಕ್ಸ್ ಸ್ವಲ್ಪ ಬೇಗನೇ ಮುಗಿಸಿದ್ದು ಮಾತ್ರ ನಿರಾಸೆಯಾಗುವಂತಿದೆ.

ಚಿತ್ರದಲ್ಲಿ ಪಲ್ಲವಿ ಹಾಡಿರುವ ಹಾಡಂತೂ ಅದ್ಭುತವಾಗಿ ಮೂಡಿಬಂದಿದೆ. ಚಿತ್ರವನ್ನು ಎತ್ತಿ ತೋರಿಸಿಕೊಟ್ಟ ಶ್ರೇಯಸ್ಸಲ್ಲಿ ಸಮಪಾಲು ಯಜ್ಞಾ ಶೆಟ್ಟಿಗೂ ಸಲ್ಲಬೇಕು. ಯಜ್ಞಾ ತಮ್ಮ ನಟನೆಯಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಾರೆ. ಒಟ್ಟಿನಲ್ಲಿ ಜಗ್ಗೇಶ್ ತಮ್ಮ 25ನೇ ಚಿತ್ರದಲ್ಲಿ ಭರ್ಜರಿಯಾಗಿಯೇ ಮಿಂಚಿದ್ದಾರೆ. ಜಗ್ಗೇಶ್ ಅಭಿಮಾನಿಗಳಿಗಂತೂ ಹಾಲುಜೇನು ಸವಿದ ಸಂಭ್ರಮವಿದು ಎಂದು ಧಾರಾಳವಾಗಿ ಹೇಳಬಹುದು.

Share this Story:

Follow Webdunia kannada