ಆರಕ್ಷಕ ಚಿತ್ರವಿಮರ್ಶೆ; ಅರ್ಥವಾದವರು ಬುದ್ಧಿವಂತರು!
ಚಿತ್ರ: ಆರಕ್ಷಕ ತಾರಾಗಣ: ಉಪೇಂದ್ರ, ರಾಗಿಣಿ ದ್ವಿವೇದಿ, ಸದಾ, ಆದಿ ಲೋಕೇಶ್ ನಿರ್ದೇಶನ: ಪಿ. ವಾಸು ಸಂಗೀತ: ಗುರುಕಿರಣ್ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಹಾಗೆ ಹೇಳುವಂತಹ ಚಿತ್ರ 'ಆರಕ್ಷಕ'. ಸ್ವತಃ ಉಪ್ಪಿಯೇ ಈ ಹಿಂದೆ ಹೇಳಿರುವಂತೆ, ಈ ಚಿತ್ರ 'ಎ'ಯನ್ನು ದಾಟಿ ನಿಲ್ಲುವುದು ನಿಜ. ಇಟ್ಟುಕೊಂಡಿದ್ದ ಭಾರೀ ನಿರೀಕ್ಷೆಗಳು ಎಲ್ಲೂ ಸುಳ್ಳಾಗುವುದಿಲ್ಲ, ನಿರಾಸೆಯಂತೂ ಆಗುವುದೇ ಇಲ್ಲ.
ಚಿತ್ರದ ಕಥೆ ಪುರಾತನ ಸಿನಿಮಾಗಳ ರೀತಿಯಲ್ಲೇ ಆರಂಭವಾಗುತ್ತದೆ. ಆದರೆ ನಂತರ ಪಡೆದುಕೊಳ್ಳುವ ತಿರುವುಗಳು ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ನಿಲ್ಲಿಸಿ ಬಿಡುತ್ತವೆ. ಇದಕ್ಕೆ ಸರಿಯೆಂಬಂತೆ ತಂತ್ರಜ್ಞಾನದ ಬಳಕೆ. ಉಪ್ಪಿಯಂತೂ ಚಿಂದಿ ಉಡಾಯಿ ಬಿಡ್ತಾರೆ. ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಥೇಟ್ ಉಪ್ಪಿ ಬ್ರಾಂಡ್ ಸಿನಿಮಾ.