Article Kannada Cinema Review %e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d %e0%b2%85%e0%b2%82%e0%b2%95%e0%b3%81%e0%b2%b6 107121000040_1.htm

Daily Horoscope

Select Your Language

Notifications

webdunia
webdunia
webdunia
webdunia

ಆಪರೇಷನ್ ಅಂಕುಶ

ಆಪರೇಷನ್ ಅಂಕುಶ
ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ: ವಾಸುದೇವರಾವ್

ತಾರಾಗಣ: ಜಯಂತಿ, ಪದ್ಮಾವಾಸಂತಿ, ಅಶೋಕ್ರಾವ್, ಭರತ್ ಭಾಗವತರ್, ಬ್ಯಾಂಕ್ ಜನಾರ್ಧನ್

ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ಮಾ ಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು ಆಪರೇಷನ್ ಅಂಕುಶ ಚಿತ್ರದ ವಿಶೇಷ.

ಕ್ಯಾಮರಾವನ್ನು 360 ಡಿಗ್ರಿಯಲ್ಲಿ ಸುತ್ತಾಡಿಸಿ ಚಿತ್ರೀಕರಣ ಮಾಡಬಹುದು ಎಂಬ ಸೂತ್ರವನ್ನು ಪಕ್ಕಕ್ಕಿಟ್ಟು, ಕೇವಲ 180 ಡಿಗ್ರಿ ಕೋನದಲ್ಲಿ ... ಅಂಕುಶ ಚಿತ್ರೀಕರಿಸಲಾಗಿದೆ. ಅದೊಂದೇ ಈ ಚಿತ್ರದ ವಿಶೇಷವಲ್ಲ. ಚಿತ್ರದಲ್ಲ್ಲೊಂದು ಬಂಗಲೆ. ಅಲ್ಲಿ ಪಾತ್ರಗಳು ಪರಿಸ್ಥಿತಿಗೆ ಅನುಗುಣವಾಗಿ ಎಡ ಹಾಗೂ ಬಲಕ್ಕೆ ಚಲಿಸುತ್ತವೆ. ಅವರು ಕ್ಯಾಮರಾದಿಂದ ಪಕ್ಕಕ್ಕೆ ಸರಿಯುವುದಿಲ್ಲ, ಹಾಗೇ ಕ್ಯಾಮರಾ ಸಹಾ ಪಕ್ಕಕ್ಕೆ ಸರಿಯುವುದಿಲ್ಲ. ಈ ರೀತಿ ಈ ಚಿತ್ರದ ನಿರ್ದೇಶಕ ಸಿನೆಮಾ ವ್ಯಾಕರಣವನ್ನು ಮುರಿದಿದ್ದಾರೆ.

ಒಂದೂರಿನಲ್ಲಿ ಸಮಾಜಕ್ಕೆ ಮಾದರಿ ಎನ್ನಬಹುದಾದ ಒಂದು ಕುಟುಂಬವಿರುತ್ತದೆ. ಲಂಡನ್‌ನಲ್ಲಿ ನೆಲೆಸಿದ್ದ ಶ್ರೀಕಂಠಯ್ಯ (ಅಶೋಕ್‌ ರಾವ್) ಈ ಮನೆಯ ಒಡೆಯ. ಆತ ತನ್ನ ಪತ್ನಿಯೊಂದಿಗೆ ಈ ಊರಿಗೆ ಆಗಮಿಸುತ್ತಾನೆ. ಅಲ್ಲಿ ನೆಲೆಸುವ ಆಶಯ ಅವರದ್ದು. ಒಂದು ದಿನ ಆಘಾತಕಾರಿ ಘಟನೆಯೊಂದು ನಡೆಯುತ್ತದೆ.

ಆ ಘಟನೆಯನ್ನು ಕುರಿತದ್ದೇ ಆಪರೇಷನ್ ಅಂಕುಶ. ಕೊನೆಗೆ ಪ್ರೇಕ್ಷಕರಿಗೆ ಆ ಘಟನೆಯ ಒಗಟು ತಿಳಿಯುತ್ತದೆ. ಈ ಸಿನೆಮಾ ಕತೆ ಒಂದು ರೀತಿ ಆಸಕ್ತಿ ಹುಟ್ಟಿಸುತ್ತದೆ. ಆದರೆ ಒಟ್ಟಾರೆ ಈ ಸಿನೆಮಾ ಕಳಪೆ ಎನಿಸುತ್ತದೆ. ನೀವು ಚಿತ್ರಮಂದಿರದಲ್ಲಿ ಕುಳಿತು ನಾಟಕ ಬಯಸುವುದಾದರೆ ಈ ಚಿತ್ರ ವೀಕ್ಷಿಸಬಹುದು.

Share this Story:

Follow Webdunia kannada