Select Your Language

Notifications

webdunia
webdunia
webdunia
webdunia

ಅಯ್ಯೋ ರಾಮ ರಾಮ ರಘು ರಾಮ

ಅಯ್ಯೋ ರಾಮ ರಾಮ ರಘು ರಾಮ
PR
ಅತ್ತ ಹಾಸ್ಯ ಪ್ರಧಾನವೂ ಅಲ್ಲದ ಇತ್ತ ಸೆಂಟಿಮೆಂಟಿನ ಕೌಟುಂಬಿಕ ಚಿತ್ರವೂ ಅಲ್ಲದ 'ರಾಮ ರಾಮ ರಘು ರಾಮ' ದಲ್ಲಿ ನಿರ್ದೇಶಕ ಆರ್. ರಘುರಾಜ್ ಹಾಸ್ಯದ ಹೆಸರಿನಲ್ಲಿ ಎರಡೂವರೆ ಗಂಟೆ ಕಾಲ ಪ್ರೇಕ್ಷಕನ ತಲೆ ತಿನ್ನುತ್ತಾರೆ.

'ರಾಮ ರಾಮ ರಘು ರಾಮ' ಚಿತ್ರ ನೋಡ ಹೋದ ಪ್ರೇಕ್ಷಕ ಬೇಸತ್ತು ಅಯ್ಯೋ ರಾಮ ಎನ್ನುತ್ತಾ ಹೊರ ಬಂದರೆ ಆಶ್ಚರ್ಯವಿಲ್ಲ.

ರಂಗಾಯಣ ರಘು ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ್ದಾರೆ ಎಂಬ ಸಂಗತಿಯನ್ನು ಬಿಟ್ಟರೆ ಈ ಚಿತ್ರದಲ್ಲಿ ಹೇಳಿಕೊಳ್ಳುವಂತ ಯಾವ ಹೊಸತನವೂ ಇಲ್ಲ.

ಹಾಸ್ಯ ಪ್ರಧಾನ ಚಿತ್ರದ ನೀರೀಕ್ಷೆ ಹೊತ್ತು ಚಿತ್ರಮಂದಿರ ಪ್ರವೇಶಿಸುವ ಪ್ರೇಕ್ಷಕನಿಗೆ ನೀರೀಕ್ಷೆ ಹುಸಿಯಾಗಿದೆ ಎಂಬ ಅರಿವು ಮೂಡಲು ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ.

ತಂದೆ ಅಕಾಲಿಕ ಮರಣಕ್ಕೀಡಾದ ಕಾರಣ ಅನುಕಂಪದ ಆಧಾರದಲ್ಲಿ ರಘುರಾಮನಿಗೆ (ರಂಗಾಯಣ ರಘು) ಪೊಲೀಸ್ ಕಾನ್ಸ್‌ಟೇಬಲ್ ಕೆಲಸ ಸಿಕ್ಕಿರುತ್ತದೆ. ಕಂಡಾಪಟ್ಟೆ ಅಮಾಯಕ ಹಾಗೂ ಸರಳ, ಸಜ್ಜನಿಕೆ ವ್ಯಕ್ತಿತ್ವದ ಈ ಪೊಲೀಸ್ ಪೇದೆ ಹೋದಲ್ಲಿ ಬಂದಲ್ಲಿ ಯಡವಟ್ಟಿಗೆ ಗುರಿಯಾಗುವುದು ಹಾಗೂ ಮೇಲಧಿಕಾರಿಗಳಿಂದ ಉಗಿಸಿಕೊಳ್ಳುವುದು ಇಡೀ ಚಿತ್ರದ ಕಾಮಿಡಿ.

ಇಂತಹ ಕಥೆಯ ಎಷ್ಟೋ ಚಿತ್ರಗಳು ಇಗಾಗಲೇ ಬಂದು ಹೋಗಿವೆ. ಬುಲೆಟ್‌ನಂತೆ ಎರಗಿ ಬರುವ ದೃಶ್ಯ, ಸಂಭಾಷಣೆಗಳು ಬೋರ್ ಹೊಡೆಸುತ್ತವೆ. ರಂಗಾಯಣ ರಘು ಅವರಂಥ ಪ್ರತಿಭಾವಂತ ನಟರನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಎಡವಿದ್ದಾರೆ.

Share this Story:

Follow Webdunia kannada