Select Your Language

Notifications

webdunia
webdunia
webdunia
webdunia

ಅಭಿರಾಮ್‌ ಚಿತ್ರ ತೀರಾ ಸಪ್ಪೆ ಸಪ್ಪೆ

ಅಭಿರಾಮ್‌ ಚಿತ್ರ ತೀರಾ ಸಪ್ಪೆ ಸಪ್ಪೆ
ಅನಾಥನಾ ಎಂಬ ಸಬ್ ಟೈಟಲ್ ಒಳಗೊಂಡ ಅಭಿರಾಮ್ ಚಿತ್ರ ಅಷ್ಟಾಗಿ ಜನರ ಗಮನ ಸೆಳೆಯುವುದಿಲ್ಲ. ಹತ್ತರ ಜತೆ ಹನ್ನೊಂದನೇಯದಾಗಿ ವಾರದೊಳಗೆ ಮೂಲೆಗುಂಪಾಗುವಂತಿದೆ.

ನಾಯಕ ಅನಾಥ. ಬದುಕಿನಲ್ಲಿ ಆತ ಎದುರಿಸುವ ಕಷ್ಟ, ನಷ್ಟಗಳ ಜತೆ ಒಂದಿಷ್ಟು ಹಾಡು, ಕುಣಿತ ಕನಸಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವುದೂ ಬರಬೇಕಾದ ಸಂದರ್ಭದಲ್ಲಿ ಬರುವುದಿಲ್ಲ, ಅದೇ ಹಳೆಯ ಕಥೆಗಳೇ ಮತ್ತೆ ಪ್ರೇಕ್ಷಕರೆದುರು ಗಿರಗಿರನೆ ತಿರುಗುತ್ತದೆ. ಮುಂದೇನಾಗಬಹುದು ಅಂತ ಮೊದಲೇ ಊಹಿಸಬಹುದು. ಕೆಲ ಖಾಯಂ ಚಿತ್ರ ವೀಕ್ಷಕರು ಮುಂದಿನ ಡೈಲಾಗುಗಳನ್ನೂ ಕೂಡ ಮೊದಲೇ ಹೇಳಿ ಅಚ್ಚರಿ ಹುಟ್ಟಿಸಿದರೂ ಆಶ್ಚರ್ಯವಿಲ್ಲ.

ಸಂಭಾಷಣೆಯಲ್ಲಿ ಮೊನಚಿಲ್ಲ, ನಿರ್ದೇಶನ ಅಷ್ಟಕ್ಕಷ್ಟೆ. ನಟರಿಂದ ಅಭಿನಯ ತೆಗೆಸುವಲ್ಲಿ ವಿಫಲತೆ ಎದ್ದು ಕಾಣುತ್ತದೆ.

ನಾಯಕ ಪ್ರಧಾನವಾದ ಈ ಚಿತ್ರದಲ್ಲಿ ಹೈಲೈಟ್ ಆಗಬೇಕಾದ ನಾಯಕನ ಅಭಿನಯ ಚಿತ್ರದಲ್ಲೀ ತೀರಾ ಸಪ್ಪೆ ಸಪ್ಪೆ. ಶ್ರೀನಿವಾಸ ಗುಂಡರೆಡ್ಡಿ ನಿರ್ದೇಶನದಲ್ಲಿ ಏನೇನೂ ಸಾಲದು. ನಾಯಕಿಯರಾಗಿ ಅಕ್ಷತಾ ಶೆಟ್ಟಿ ಹಾಗೂ ಸ್ವಾತಿ ಬೊಂಬೆಯಂತೆ ಬಂದು ಹೋಗುತ್ತಾರೆ. ಇವರನ್ನೂ ಸರಿಯಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋದುದಕ್ಕೆ, ಮೂರು ಗಂಟೆ ಸುಮ್ಮನೆ ವೇಸ್ಟ್ ಮಾಡಿದ್ದಕ್ಕೆ, ಕಷ್ಟಪಟ್ಟು ದುಡಿದ ಹಣವನ್ನು ಸುಮ್ಮನೆ ವ್ಯರ್ಥವಾಗಿ ಕಳೆದುಕೊಂಡಿದ್ದಕ್ಕೆ ನಿಮಗೆ ನೀವೇ ಹೊಣೆ ಅಂದುಕೊಳ್ಳಬೇಕಷ್ಟೆ ಬಿಡಿ.

Share this Story:

Follow Webdunia kannada